ಮನೆಗೆ ನುಗ್ಗಿದ್ದು ಕಳ್ಳತನಕ್ಕೆ.. ಆದ್ರೆ ಎಸಿ ಆನ್ ಮಾಡಿ ಗಡದ್ ನಿದ್ದೆ ಹೊಡೆದ.. ಖದೀಮನನ್ನ ಬೆಳಗ್ಗೆ ಎಬ್ಬಿಸಿದ್ಯಾರು?

author-image
Bheemappa
Updated On
ಮನೆಗೆ ನುಗ್ಗಿದ್ದು ಕಳ್ಳತನಕ್ಕೆ.. ಆದ್ರೆ ಎಸಿ ಆನ್ ಮಾಡಿ ಗಡದ್ ನಿದ್ದೆ ಹೊಡೆದ.. ಖದೀಮನನ್ನ ಬೆಳಗ್ಗೆ ಎಬ್ಬಿಸಿದ್ಯಾರು?
Advertisment
  • ಮನೆಯಲ್ಲಿ ಯಾರು ಇಲ್ಲದನ್ನು ಕಂಡು ಕಳ್ಳತನಕ್ಕೆ ನುಗ್ಗಿದ ಕಿಲಾಡಿ
  • ಡ್ರಾಯಿಂಗ್ ರೂಮ್​ಗೆ ಹೋಗಿ ಎಸಿ ಆನ್ ಮಾಡಿ, ನಿದ್ದೆ ಮಾಡಿದ
  • ಈ ವಿಷ್ಯ ಪೊಲೀಸರಿಗೆ ಗೊತ್ತಾಗಿದ್ದು ಹೇಗೆ, ಕಳ್ಳ ಅರೆಸ್ಟ್ ಆದನೇ?

ಲಕ್ನೋ: ಕಳ್ಳತನ ಮಾಡಲು ಮನೆಗೆ ನುಗ್ಗಿದ ಖದೀಮನೊಬ್ಬ ಎಸಿ ಆನ್ ಮಾಡಿಕೊಂಡು ನಿದ್ದೆಗೆ ಜಾರಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಈ ಘಟನೆಯು ಉತ್ತರಪ್ರದೇಶದ ಲಕ್ನೋದ ಇಂದಿರಾನಗರದಲ್ಲಿ ನಡೆದಿದೆ.

ಇಂದಿರಾನಗರದಲ್ಲಿರುವ ಡಾಕ್ಟರ್ ಸುನೀಲ್ ಪಾಂಡೆ ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳ ಮನೆಗೆ ನುಗ್ಗಿದ್ದಾನೆ. ದೊಡ್ಡ ಮಟ್ಟದಲ್ಲಿ ಆ ಮನೆಯಲ್ಲಿ ಕದಿಯಬೇಕು ಎಂದುಕೊಂಡಿದ್ದನು. ಆದ್ರೆ ಡ್ರಾಯಿಂಗ್ ರೂಮ್​ಗೆ ಹೋಗಿ ಅಲ್ಲಿ ಏರ್ ಕಂಡಿಷನರ್ (ಎಸಿ) ಅನ್ನು ಆನ್ ಮಾಡಿದ್ದಾನೆ. ಆಗ ನಿದ್ದೆ ಬರಲು ಶುರುವಾಗಿದೆ. ಹೀಗಾಗಿ ಶರ್ಟ್​ ಬಿಚ್ಚಿ, ತಲೆಗೆ ದಿಂಬು ಇಟ್ಟುಕೊಂಡು ಕೈಯಲ್ಲಿ ಮೊಬೈಲ್ ಹಿಡಿದು ಅರಾಮವಾಗಿ ಮಲಗಿಕೊಂಡಿದ್ದಾನೆ.

ಇದನ್ನೂ ಓದಿ:10ನೇ ಮಹಡಿಯಿಂದ ಜಿಗಿದು IAS ಆಫೀಸರ್​ ಮಗಳು ಅನುಮಾನಾಸ್ಪದ ಸಾವು.. ಕಾರಣವೇನು?


">June 3, 2024

ಮನೆಯ ಗೇಟ್ ಓಪನ್ ಇದ್ದಿದ್ದರಿಂದ ಸ್ಥಳೀಯರು ಡಾಕ್ಟರ್​ ಸುನೀಲ್ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆದ್ರೆ ಅವರು ವಾರಣಾಸಿಯಲ್ಲಿ ಇರುವುದಾಗಿ ಹೇಳಿದ್ದರಿಂದ ತಕ್ಷಣ ವಿಷ್ಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯೊಳಗೆ ಹೋಗಿ ನೋಡಿದ್ದಾರೆ. ಯಾವುದೇ ಚಿಂತೆ, ಭಯಯಿಲ್ಲದೆ ಕಳ್ಳ ನಿದ್ದೆ ಮಾಡುತ್ತಿದ್ದನು. ಪೊಲೀಸರು ಕಳ್ಳನನ್ನ ಎಬ್ಬಿಸಿ ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜಾಸ್ತಿ ಮದ್ಯಪಾನ ಮಾಡಿದ್ದರಿಂದ ಎಸಿ ಹಾಕಿದ್ದಕ್ಕೆ ನಿದ್ದೆ ಬಂದು ಮಲಗಿದ್ದನು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment