/newsfirstlive-kannada/media/post_attachments/wp-content/uploads/2024/08/bng-bike.jpg)
ಬೆಂಗಳೂರು: ಹಾಡಹಗಲೇ ಕಳ್ಳನೊಬ್ಬ ರಸ್ತೆ ಪಕ್ಕ ನಿಲ್ಲಿಸಿದ ಸ್ಕೂಟರ್ ಕದ್ದು ಪರಾರಿಯಾಗಿರೋ ಘಟನೆ ಹೆಬ್ಬಾಳದ ಚೋಳನಹಳ್ಳಿ ಮಿನಿ ಮಾರ್ಟ್​ ಬಳಿ ನಡೆದಿದೆ.
ಇದನ್ನೂ ಓದಿ: ಅಪಾಯದಲ್ಲಿ ತುಂಗಭದ್ರಾ ಡ್ಯಾಂ​.. ಜಲಾಶಯದ ಬಳಿ ಓಡೋಡಿ ಬಂದ ಶಾಸಕ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್
/newsfirstlive-kannada/media/post_attachments/wp-content/uploads/2024/08/bng-2.jpg)
ಮಹಿಳೆಯೊಬ್ಬರು ತರಕಾರಿ ತರಲು ಹೋಗಿದ್ದಾಗ ಕಳ್ಳ ಸ್ಕೂಟರ್ ಎಗರಿಸಿದ್ದಾನೆ. ಹೌದು, ಹೆಬ್ಬಾಳದ ಚೋಳನಹಳ್ಳಿ ಮಿನಿ ಮಾರ್ಟ್ ಮುಂಭಾಗ ಮಹಿಳೆಯೊಬ್ಬರು ಸ್ಕೂಟರ್​ ಅನ್ನು ನಿಲ್ಲಿಸಿ ಹೋಗಿದ್ದರು. ಆದರೆ ಮಹಿಳೆ ಆ್ಯಕ್ಟಿವಾ ಕೀ ಅಲ್ಲೇ ಬಿಟ್ಟಿದ್ದರು. ಇದನ್ನೇ ಗಮನಿಸಿದ ಕಳ್ಳ ಅತ್ತ ಇತ್ತ ನೋಡಿ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಕಳ್ಳ ಪರಾರಿಯಾಗಿದ್ದಾನೆ.
ಇನ್ನೂ, ಸ್ಕೂಟರ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕಳ್ಳತನದ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us