/newsfirstlive-kannada/media/post_attachments/wp-content/uploads/2025/01/THIEF-KISSES.jpg)
ಮುಂಬೈನ ಮಲಾದ್ ಸಬರ್ಬ್‌ನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಕಳ್ಳನೊಬ್ಬ ಮನೆಯ ಬಾಗಿಲನ್ನು ಮುರಿದು ಒಳಗೆ ಬಂದಿದ್ದಾನೆ. ಇಡೀ ಮನೆಯನ್ನೆಲ್ಲಾ ಹುಡುಕಿದ್ದಾನೆ ಬಿಡಿಗಾಸು ಸಿಗದ ಖದೀಮ ಏನೋ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಈ ಒಂದು ಘಟನೆ ಜನವರಿ 3, 2025ರಂದು ಕುರಾರ ಏರಿಯಾದ ಮಲಾಡ್​ನಲ್ಲಿ ನಡೆದಿದೆ. ಪೊಲೀಸರು ಹೇಳುವ ಪ್ರಕಾರ ಕಳ್ಳತನ ಮಾಡುವ ಉದ್ದೇಶದಿಂದಲೇ ಖದೀಮ ಮನೆಗೆ ನುಗ್ಗಿದ್ದಾನೆ. ಇಡೀ ಮನೆಯಲ್ಲಾ ಜಾಲಾಡಿದರೂ ಕೂಡ ಅವನಿಗೆ ಒಂದೇ ಒಂದು ರೂಪಾಯಿ ಸಿಕ್ಕಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡ ಕಳ್ಳ ವಾಪಸ್ ಹೋಗುವುವಾಗ ಇನ್ನೇನನ್ನೋ ಬಯಸಿ ಬರ್ಬಾದ್ ಆಗಿದ್ದಾನೆ.
ಇದನ್ನೂ ಓದಿ:ಕಾಲೇಜ್ ಹುಡುಗಿಯ ಕೂದಲು ಕಟ್ ಮಾಡಿ ಓಡಿ ಹೋದ ಕಿಡಿಗೇಡಿ; ಪೊಲೀಸರಿಂದ ತನಿಖೆ!
ಮನೆಯಲ್ಲಿ ಏನು ಸಿಗದ ಕಳ್ಳ ಬೇಸರದಿಂದ ವಾಪಸ್ ಹೋಗುವಾಗ ಮನೆಯಲ್ಲಿ ಮಹಿಳೆಯೊಬ್ಬಳು ಮಲಗಿದ್ದನ್ನು ನೋಡಿದ್ದಾನೆ. ಸಂಪತ್ತು ಸಿಗದಿದ್ದರೇನಾಯ್ತು ಒಂದು ಮುತ್ತಿಟ್ಟು ಹೋಗೋಣ ಎಂದುಕೊಂಡ ಕಳ್ಳ ಮಹಿಳೆಗೆ ಗಟ್ಟಿಯಾಗಿ ಮುತ್ತಿಟ್ಟಿದ್ದಾನೆ. ಗಾಬರಿಗೊಂಡು ಮಹಿಳೆ ಎದ್ದಾಗ ಅಲ್ಲಿಂದ ಕಳ್ಳ ಎಸ್ಕೇಪ್ ಆಗಿದ್ದಾನೆ. ಕೂಡಲೇ ಮಹಿಳೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಇದನ್ನೂ ಓದಿ:ಗೋವಾಗಿಂತ ಆ ‘ಥೈಲ್ಯಾಂಡ್’ ವಾಸಿ.. ವಿದೇಶಿಗರು ಬ್ಯಾಂಕಾಂಕ್ ಇಷ್ಟ ಪಡೋಕಿದೆ 5 ಕಾರಣ!
ಮಹಿಳೆ ಹೇಳಿದ ಎಲ್ಲಾ ವಿವರಗಳನ್ನು ಕಲೆ ಹಾಕಿದ ಪೊಲೀಸರು ಹಲವು ಸಾಕ್ಷಿಗಳನ್ನು ಹುಡುಕಿ ಚೋರನ ಹಿಂದೆ ಬಿದ್ದಿದ್ದಾರೆ. ಕೆಲವೇ ಗಂಟೆಗಳಲ್ಲಿ ಖದೀಮನನ್ನು ಬಲೆಗೆ ಕೆಡವಿದ್ದಾರೆ. ಈ ಒಂದು ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳ್ಳನ ವಿಚಿತ್ರ ವರ್ತನೆಯ ಬಗ್ಗೆ ಕೇಳಿದ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ. ಪೊಲೀಸರು ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿದ್ದು ಖದೀಮನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us