/newsfirstlive-kannada/media/post_attachments/wp-content/uploads/2025/04/THIEF.jpg)
ಕಳ್ಳರು, ಕೊಲೆಗಾರರಿಗೆ ಪಶ್ಚಾತಾಪ ಭಾವ ಇರುವುದೇ ಇಲ್ಲ. ಆಗಬೇಕಾದ ಮಾಡಬೇಕಾದ ಕೆಲವನ್ನು ಮಾಡಿ ಎದ್ದು ನಡೆದು ಬಿಡುತ್ತಾರೆ. ಅವರಿಗೆ ತಾವು ಮಾಡಿದ ಕೃತ್ಯದ ಬಗ್ಗೆ ಅಯ್ಯೋ ಅನಿಸುವ ಮಾತೇ ಬರುವುದಿಲ್ಲ. ಆದರೆ ಮಧ್ಯಪ್ರದೇಶದಲ್ಲಿ ಒಬ್ಬ ವಿಚಿತ್ರ ಕಳ್ಳ ಬೆಳಕಿಗೆ ಬಂದಿದ್ದಾನೆ. ಕಳ್ಳನಾದರೂ ಕೂಡ ನನ್ನಲ್ಲಿ ಒಂದು ಪಾಪಪ್ರಜ್ಞೆಯಿದೆ. ಪ್ರಾಮಾಣಿಕತೆ ಇದೆ ಎಂದು ಸಾಬೀತು ಪಡೆಸಿದ್ದಾನೆ.
ಮಧ್ಯಪ್ರದೇಶದ ಕಾರಗೋನ್ ಜಿಲ್ಲೆಯಲ್ಲಿ ಇಂತಹ ವಿಚಿತ್ರ ಕಳ್ಳನೊಬ್ಬ ಕಂಡು ಬಂದಿದ್ದಾನೆ. ಕಾರಗೋನ್ ಜಿಲ್ಲೆಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳ ಸುಮಾರು 2.45 ಲಕ್ಷ ರೂಪಾಯಿ ದೋಚಿದ್ದಾನೆ. ಹೀಗೆ ದುಡ್ಡು ದೋಚಿದ ಕಳ್ಳ ಅಸಲಿಗೆ ವೃತ್ತಿಪರ ಕಳ್ಳನಾಗಿರಲಿಕ್ಕಿಲ್ಲ ಅನಿಸುತ್ತೆ. ಹೀಗಾಗಿಯೇ ಕಳ್ಳತನ ಮಾಡಿದ ಮೇಲೆ ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗಿದ್ದಾನೆ.
ಕ್ಷಮಾಪಣೆ ಪತ್ರದಲ್ಲಿ, ನಾನು 2.45 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಇದರಿಂದ ಸಾಲಗಾರರು ನಿತ್ಯ ಮನೆ ಮುಂದೆ ಬಂದು ಹಣ ವಾಪಸ್ ಕೇಳುತ್ತಿದ್ದಾರೆ. ಸಾಲಗಾರರಿಗೆ ಹಣ ನೀಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನಿಮ್ಮ ಅಂಗಡಿಯಿಂದ 2.45 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ ಎಂದು ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗಿದ್ದಾನೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ.. ಹೆಂಡತಿಯ ಟಾರ್ಚರ್‌ಗೆ ಟೆಕ್ಕಿ ಸಾವಿಗೆ ಶರಣು?
ಇನ್ನೂ ಒಂದು ವಿಚಿತ್ರವೆಂದರೆ 2.45 ಲಕ್ಷ ರೂಪಾಯಿ ಕದ್ದ ಕಳ್ಳ, ಅಂಗಡಿಯಲ್ಲಿ ಉಳಿದ 30 ಸಾವಿರ ರೂಪಾಯಿ ಹಣವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ತಾನು ಸಾಲ ತೀರಿಸಲು ಬೇಕಾದಷ್ಟು ಹಣವನ್ನು ಮಾತ್ರ ತೆಗೆದುಕೊಂಡು ಹೋಗಿರುವ ಕಳ್ಳ, ನೀಚತನದಲ್ಲಿಯೂ ಪ್ರಾಮಾಣಿಕತೆ ಮೆರೆದಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ಕ್ಷಮಾಪಣೆ ಪತ್ರವನ್ನು ಬರೆದಿಟ್ಟು ಹೋಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ