newsfirstkannada.com

VIDEO: ವೃದ್ಧೆಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ ಖದೀಮ.. ಗೋಲ್ಡ್​ ಚೈನ್​ ಕದ್ದು ಎಸ್ಕೇಪ್​​

Share :

Published January 30, 2024 at 6:02am

    ವೃದ್ಧೆಯನ್ನು ಹತ್ಯೆ ಮಾಡಲು ಯತ್ನಿಸಿರುವ ವಿಡಿಯೋ ವೈರಲ್​

    ಹಣ, ಚಿನ್ನಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಲು ಮುಂದಾದ ಕಳ್ಳ

    ಸಿಸಿಟಿವಿ ಪರಿಶೀಲಿಸಿ ತನಿಖೆ ಶುರು ಮಾಡಿರುವ ಪೊಲೀಸರು

ಹೈದರಾಬಾದ್: ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಬಂಗಾರಕ್ಕಾಗಿ ಟವೆಲ್​​ನಿಂದ ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂನ ಅನಕಪಲ್ಲಿ ಗವರಪಾಲೆಂ ಪಾರ್ಕ್ ಸೆಂಟರ್​ನಲ್ಲಿ ನಡೆದಿದೆ.

ವೃದ್ಧೆಯ ಹೆಸರು ಲಕ್ಷ್ಮಿ ನಾರಾಯಣಮ್ಮ ಎಂದು ಗುರುತಿಸಲಾಗಿದೆ. ಮನೆಯಲ್ಲಿ ವೃದ್ಧೆಯನ್ನು ಬಿಟ್ಟು ಮನೆಯೆವರೆಲ್ಲ ಕೆಲಸದ ನಿಮಿತ್ತ ಹೊರಗಡೆ ಹೋಗಿರುತ್ತಾರೆ. ಈ ವೇಳೆ ಮನೆಗೆ ನುಗ್ಗಿದ ಕಳ್ಳ ವೃದ್ಧೆಯ ಬಳಿ ಹಣ ಮತ್ತು ಚಿನ್ನಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ. ಇದಕ್ಕೆ ವೃದ್ಧೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ದುಷ್ಕರ್ಮಿ ಟವೆಲ್​ನಿಂದ ವೃದ್ಧೆಯ ಕತ್ತು ಹಿಸುಕಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಕೊನೆಗೆ ವೃದ್ಧೆಯ ಕೊರಳಲ್ಲಿದ್ದ ಬಂಗಾರದ ಚೈನ್​ ಕಿತ್ತುಕೊಂಡು ದುಷ್ಕರ್ಮಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

ವೃದ್ಧೆಯ ಕತ್ತು ಹಿಸುಕುತ್ತಿರುವ ಭಯಾನಕ ವಿಡಿಯೋ ಅವರ ಮನೆಯ ಒಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಖತ್ ಭಯ ಹುಟ್ಟಿಸುವಂತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನು ವೃದ್ಧೆಯ ಕುಟುಂಬಸ್ಥರು ಕೇಸ್ ದಾಖಲು ಮಾಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವೃದ್ಧೆಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ ಖದೀಮ.. ಗೋಲ್ಡ್​ ಚೈನ್​ ಕದ್ದು ಎಸ್ಕೇಪ್​​

https://newsfirstlive.com/wp-content/uploads/2024/01/AP_OLD_WOMAN.jpg

Load More