ಗರ್ಲ್ ಫ್ರೆಂಡ್​ಗಾಗಿ ₹3 ಕೋಟಿ ಮನೆ ಕಟ್ಟಿದ ಪ್ರೊಫೆಷನಲ್ ಕಳ್ಳ; ಬೆಂಗಳೂರಲ್ಲಿ ಈ ಖದೀಮ ಸಿಕ್ಕಿದ್ದೇ ರೋಚಕ!

author-image
admin
Updated On
ಗರ್ಲ್ ಫ್ರೆಂಡ್​ಗಾಗಿ ₹3 ಕೋಟಿ ಮನೆ ಕಟ್ಟಿದ ಪ್ರೊಫೆಷನಲ್ ಕಳ್ಳ; ಬೆಂಗಳೂರಲ್ಲಿ ಈ ಖದೀಮ ಸಿಕ್ಕಿದ್ದೇ ರೋಚಕ!
Advertisment
  • ಇವನು ಅಂತಿಂಥ ಕಳ್ಳನಲ್ಲ! ಕಳ್ಳರಲ್ಲೇ ಪಕ್ಕಾ ಪ್ರೊಫೆಷನಲ್ ಕಳ್ಳ!
  • ಗರ್ಲ್ ಫ್ರೆಂಡ್ ಇರೋದು ಕೊಲ್ಕತ್ತಾದಲ್ಲಿ, ಸಿಕ್ಕಿ ಬಿದ್ದಿದ್ದು ಬೆಂಗಳೂರಲ್ಲಿ
  • ಖತರ್ನಾಕ್ ಖದೀಮನ ವಿಚಾರಣೆ ನಡೆಸಿದಾಗ ಶಾಕಿಂಗ್ ಸತ್ಯ ಬಯಲು

ಬೆಂಗಳೂರು: ಅಬ್ಬಾ.. ಇವನು ಅಂತಿಂಥ ಕಳ್ಳನಲ್ಲ! ಕಳ್ಳರಲ್ಲೇ ಪಕ್ಕಾ ಪ್ರೊಫೆಷನಲ್ ಕಳ್ಳ. ಹುಟ್ಟಿದ್ದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ. ಇವನ ಗರ್ಲ್ ಫ್ರೆಂಡ್ ಇರೋದು ಕೊಲ್ಕತ್ತಾದಲ್ಲಿ. ಕೊನೆಗೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಕುಖ್ಯಾತ ಕಳ್ಳನ ಹೆಸರು ಪಂಚಾಕ್ಷರಿ ಸ್ವಾಮಿ. ಇವನ ಕಾಯಕ ಕಳ್ಳತನ. ಬೀಗ ಹಾಕಿದ್ದ ಮನೆಗಳನ್ನೇ ಇವನು ಟಾರ್ಗೆಟ್ ಮಾಡಿ ಸದ್ದಿಲ್ಲದೇ ಕನ್ನ ಹಾಕುತ್ತಿದ್ದ. ಕಳ್ಳತನ ಮಾಡಿದ ಹಣದಿಂದಲೇ ಜೀವನ ಸಾಗಿಸುತ್ತಿದ್ದ. ಮದುವೆಯಾಗಿದ್ರೂ ಈತನ ಗರ್ಲ್‌ ಫ್ರೆಂಡ್‌ಗಾಗಿ ಮನೆ ಕಟ್ಟಲು 3 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ.

ಬೆಂಗಳೂರಲ್ಲೂ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಕಳ್ಳ ಪಂಚಾಕ್ಷರಿ ಸ್ವಾಮಿಯನ್ನು ಮಡಿವಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಖತರ್ನಾಕ್ ಖದೀಮನ ವಿಚಾರಣೆ ನಡೆಸಿದಾಗ ಶಾಕಿಂಗ್ ಸತ್ಯಗಳು ಬಯಲಾಗಿದೆ.

publive-image

ಈ ಆರೋಪಿ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆಯಲ್ಲಿ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ಪಂಚಾಕ್ಷರಿ ತಾಯಿಗೆ ಆ ಕೆಲಸ ಸಿಕ್ಕಿತ್ತು. 2003ರಲ್ಲಿ ಅಪ್ರಾಪ್ತನಾಗಿದ್ದಾಗಿಂದಲೇ ಪಂಚಾಕ್ಷರಿ ಕಳ್ಳತನ ಆರಂಭಿಸಿದ್ದಾನೆ. 2009ರಿಂದ ಮನೆಕಳ್ಳತನ ಮಾಡಲು ಆರಂಭಿಸಿದ ಪಂಚಾಕ್ಷರಿ ಸ್ವಾಮಿ, ಕಳ್ಳತನ ಮಾಡಿ ಕೋಟಿ, ಕೋಟಿ ಹಣ ಗಳಿಸಿದ್ದಾನೆ

ಪಂಚಾಕ್ಷರಿಗೆ ಮದುವೆಯಾಗಿದ್ರು ಗರ್ಲ್ ಫ್ರೆಂಡ್ಸ್ ಶೋಕಿ ಹೊಂದಿದ್ದ. ಮದುವೆಯಾಗಿ ಮಗು ಇದ್ದರೂ ಪ್ರಿಯತಮೆಗೆ ಕೊಲ್ಕತ್ತಾದಲ್ಲಿ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟಿದ್ದಾನೆ. 2016ರಲ್ಲಿ ಪಂಚಾಕ್ಷರಿ ಕೊಲ್ಕತ್ತಾ ಗರ್ಲ್ ಫ್ರೆಂಡ್​ಗೆ ಮನೆ ಗಿಫ್ಟ್​​ ಕೊಟ್ಟಿದ್ದಾನೆ. ಇಷ್ಟೇ ಅಲ್ಲದೇ ಗರ್ಲ್ ಫ್ರೆಂಡ್ ಬರ್ತ್​ ಡೇಗೆ 22 ಲಕ್ಷದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದ.

ಕಳ್ಳತನದಲ್ಲಿ ಕೋಟಿ, ಕೋಟಿ ದೋಚಿದ್ದರೂ ಪಂಚಾಕ್ಷರಿ ಮಾತ್ರ 400 ಅಡಿಯಲ್ಲಿ ಮನೆಯಲ್ಲಿ ವಾಸವಿದ್ದ. ಆ ಮನೆಯು ತಾಯಿಯ ಹೆಸರಲ್ಲಿ ಇದ್ದು, ಆ ಮನೆಗೆ ಬ್ಯಾಂಕ್ ಲೋನ್ ಕಟ್ಟದೆ ನೋಟಿಸ್ ಜಾರಿಯಾಗಿದೆ. ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್​ನಿಂದ ಆ ಮನೆಯನ್ನ ಸಹ ಹರಾಜಿಗಿಡಲಾಗಿದೆ.

ಇದನ್ನೂ ಓದಿ: ಸೌಂದರ್ಯದ ಸಂಪ್ರದಾಯವನ್ನೇ ಮುರಿದ ಹುಡುಗಿ.. ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು; ವಿಡಿಯೋ ವೈರಲ್ 

ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಪ್ರೊಫೆಷನಲ್ ಕಳ್ಳ ಪಂಚಾಕ್ಷರಿ 2016ರಲ್ಲಿ ಗುಜರಾತ್ ಪೊಲೀಸರು ಬಂಧಿಸಿದ್ದರು. 6 ವರ್ಷ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದ ಈತ ಹೊರಬಂದು ಮತ್ತೆ ಕಳ್ಳತನ ಮುಂದುವರೆಸಿದ್ದ. ಮತ್ತೆ ಮಹಾರಾಷ್ಟ್ರ ಪೊಲೀಸರು ಪಂಚಾಕ್ಷರಿಯನ್ನು ಬಂಧಿಸಿದ್ದರು.

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಶಿಫ್ಟ್‌!
2024ರಲ್ಲಿ ಜೈಲಿನಿಂದ ರಿಲೀಸ್​ ಆದ ಪಂಚಾಕ್ಷರಿ ಬೆಂಗಳೂರಿಗೆ ಬಂದು ಕಳ್ಳತನ ಆರಂಭಿಸಿದ್ದ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಇವನು ಸದ್ದಿಲ್ಲದೇ ಕೆಲಸ ಮುಗಿಸಿ ಬಿಡುತ್ತಿದ್ದ. ಇವನು ಎಷ್ಟು ಪ್ರೊಫೆಷನಲ್ ಕಳ್ಳ ಎಂದರೆ ಈತನ ಬಳಿ ಸಣ್ಣದೊಂದು ಫೈರ್ ಗನ್ ಸಹ ಇಟ್ಟುಕೊಂಡಿದ್ದ. ಆ ಗನ್​ ಬಳಸಿ ಚಿನ್ನ ಕರಗಿಸುತ್ತಿದ್ದ ಪಂಚಾಕ್ಷರಿ ಖತರ್ನಾಕ್ ಪ್ಲಾನ್ ಮಾಡುತ್ತಿದ್ದ.

ಈ ಪಂಚಾಕ್ಷರಿ ಸ್ವಾಮಿ ಕಳೆದ ಜನವರಿ ‌9ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿದ್ದ. ಇವನು ಕಳ್ಳತನ ಮಾಡಿದ ಬಳಿಕ ರಸ್ತೆಯಲ್ಲೇ ಬಟ್ಟೆ ಬದಲಿಸುತ್ತಿದ್ದ. ಇದೇ ಸುಳಿವಿನ ಮೇಲೆ ಮಡಿವಾಳ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪಂಚಾಕ್ಷರಿ ಮೇಲೆ 180ಕ್ಕೂ ಹೆಚ್ಚು ಕೇಸ್​ ಇರೋದು ಬೆಳಕಿಗೆ ಬಂದಿದ್ದು, ಬಂಧಿತನಿಂದ ಚಿನ್ನಾಭರಣ, ಚಿನ್ನ ಕರಗಿಸುವ ಫೈರ್ ಗನ್ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment