ಕಾರು ಹಿಂಬಾಲಿಸಿಕೊಂಡು ಬಂದು ಗ್ಲಾಸ್​ ಒಡೆದು ಕಳ್ಳತನ.. ಉದ್ಯಮಿಯಿಂದ 5 ಲಕ್ಷ ರೂಪಾಯಿ ಕಸಿದುಕೊಂಡು ಎಸ್ಕೇಪ್!​

author-image
AS Harshith
Updated On
ಕಾರು ಹಿಂಬಾಲಿಸಿಕೊಂಡು ಬಂದು ಗ್ಲಾಸ್​ ಒಡೆದು ಕಳ್ಳತನ.. ಉದ್ಯಮಿಯಿಂದ 5 ಲಕ್ಷ ರೂಪಾಯಿ ಕಸಿದುಕೊಂಡು ಎಸ್ಕೇಪ್!​ 
Advertisment
  • ಐದು ಲಕ್ಷ ರೂಪಾಯಿ ಕಳೆದುಕೊಂಡ ಉದ್ಯಮಿ
  • ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೊರಟಾಗ ಎದುರಾದ ಘಟನೆ
  • ಐದು ಲಕ್ಷ ರೂಪಾಯಿಯನ್ನು ಡ್ರಾ ಮಾಡಿಕೊಂಡು ಹೊರಟಾಗ ಅಟ್ಯಾಕ್

ಧಾರವಾಡ: ಉದ್ಯಮಿಯ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ. ಅಬೀದ್ ನಾಲತವಾಡ ಹಣ ಕಳೆದುಕೊಂಡ ಉದ್ಯಮಿ.

ಅಬೀದ್ ನಾಲತವಾಡ ಸುಮಾರು 5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹೊರಟಿದ್ದಾಗ ಈ ಘಟನೆ ಎದುರಾಗಿದೆ.

ಇದನ್ನೂ ಓದಿ: ಇಸ್ಪೀಟ್ ಆಡುವಾಗ ಪೊಲೀಸರ ದಾಳಿ.. ತೆಪ್ಪ ಮಗುಚಿ 2 ಸಾವು, ಇಬ್ಬರ ರಕ್ಷಣೆ.. ಐವರಿಗಾಗಿ ಮುಂದುವರೆದ ಶೋಧಕಾರ್ಯ

ಸಿಬಿಟಿ ಬಳಿ ಇರುವ ಬ್ಯಾಂಕ್ ನಿಂದ ಅಬೀದ್ 5 ಲಕ್ಷ ರೂಪಾಯಿಯನ್ನು ಡ್ರಾ ಮಾಡಿಕೊಂಡು ಹೊರಟಿದ್ದರು. ಆದರೆ ಈ ವೇಳೆ ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರ್​ನ ಗ್ಲಾಸ್ ಒಡೆದು ಕಳ್ಳತನ ಮಾಡಲಾಗಿದೆ. ಸದ್ಯ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment