/newsfirstlive-kannada/media/post_attachments/wp-content/uploads/2025/01/DWD-PG-PROBLEM.jpg)
ಹುಬ್ಬಳ್ಳಿ ಧಾರವಾಡ ನಗರದಲ್ಲಿ ಈಗ ಹೊಸದೊಂದು ಸಮಸ್ಯೆ ಶುರುವಾಗಿದೆ. ಪೊಲೀಸರು ಏನೆಲ್ಲಾ ಕಸರತ್ತು ಮಾಡಿದರು ಕೂಡ ಅದು ಕಡಿಮೆಯಾಗುತ್ತಿಲ್ಲ. ಪಿಜಿ ಮಾಲೀಕರು ಮುಂದೇನು ಮಾಡಬೇಕು ಎಂದು ಕೈ ಮೇಲೆ ತಲೆಹೊತ್ತುಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಗಮನಕ್ಕೆ ತಂದರೂ ಕೂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕ್ರೈಂ ಕಡಿಮೆ ಮಾಡಲು ಪೊಲೀಸರು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಅವಳಿ ನಗರದಲ್ಲಿ ಕೊಲೆ ಸುಲಿಗೆ ಪ್ರಕರಣಗಳು ಅಷ್ಟಾಗಿ ಕಾಣದಿದ್ದರು ಕಳ್ಳತನದ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅದರಲ್ಲೂ ಧಾರವಾಡದ ಸಪ್ತಾಪೂರ ಬಡಾವಣೆಯಿಂದ ಶ್ರೀನಗರರದವರೆಗೆ ಸಾಕಷ್ಟು ಪಿಜಿಗಳು ಇವೆ. ಈ ಪಿಜಿಗಳಿಗೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳ ಸೋಗಿನಲ್ಲಿ ಬರುವ ಕಳ್ಳರು ರೂಮ್​ನಲ್ಲಿರುವ ಮೊಬೈಲ್, ಬ್ಯಾಗ್​​ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕಳ್ಳರಿಗೆ ಪಿಜಿಗಳೆ ಟಾರ್ಗೆಟ್​ಗಳಾಗಿವೆ.
ಸಪ್ತಾಪೂರ ಬಡಾವಣೆ ಯಿಂದ ಶ್ರೀನಗರ. ಈ ನಡುವೆ ಸಾವಿರಾರು ಪಿಜಿ ಹಾಗೂ ರೂಂಗಳಿವೆ. ಅಲ್ಲಿ ಉತ್ತರ ಕರ್ನಾಟಕದ ಬಹುತೇಕ ಕೋಚಿಂಗ್ ಪಡೆಯಲು ಬರುವ ವಿದ್ಯಾರ್ಥಿಗಳು ಇದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ದೊಡ್ಡ ಸಂಕಷ್ಟ ಎನಂದ್ರೆ, ಕಳ್ಳರದ್ದು. ವಿದ್ಯಾರ್ಥಿಗಳ ಸೋಗಿನಲ್ಲೇ ಬರುವ ಕೆಲ ಕಳ್ಳರು, ಬ್ಯಾಗ್ ಬೆನ್ನಿಗೆ ಹಾಕಿಕೊಂಡೇ ರೂಂ ಹಾಗೂ ಪಿಜಿಗಳಿಗೆ ನುಗ್ತಾರೆ. ಅಲ್ಲಿ ವಿದ್ಯಾರ್ಥಿಗಳ ಮೊಬೈಲ್ ಹಾಗೂ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗ್ತಾರೆ. ಇದು ಒಂದೇ ಸಲ ಆಗಿಲ್ಲ.ಹಲವು ಬಾರಿ ನಡೆದಿದೆ. ಹೀಗಾಗಿ ಪಿಜಿ ಹಾಗೂ ರೂಮ್​ ಮಾಲಿಕರು ಪೊಲೀಸ್ ಠಾಣೆ ಮೊರೆ ಕೂಡಾ ಹೋಗಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕಾರ್ಯಕ್ರಮಕ್ಕೆ ಸಜ್ಜಾದ ಕುಂದಾನಗರಿ; ಕಾಂಗ್ರೆಸ್​ ಅಧಿವೇಶನ ಶತಮಾನೋತ್ಸವದ ಸಂಭ್ರಮ
ಆದರೆ ಇಲ್ಲಿವರೆಗೆ ಒಬ್ಬ ಕಳ್ಳನನ್ನು ಕೂಡ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ ಇನ್ನು ಪೊಲೀಸ್ ಇಲಾಖೆಗೆ ಈ ಭಾಗದ ಸಮಸ್ಯೆಯ ಬಗ್ಗೆ ಗೊತ್ತಿಲ್ಲ ಅಂತೆನಿಲ್ಲಾ. ವಿದ್ಯಾರ್ಥಿಗಳ ಸೋಗಿನಲ್ಲಿ ಬರುವ ಕಳ್ಳರನ್ನ ಹಿಡುಯುವರು ಪೊಲೀಸ್ ಇಲಾಖೆಗೆ ಕೂಡಾ ದೊಡ್ಡ ಚಾಲೆಂಜ್ ಆಗಿದೆ. ಯಾಕಂದ್ರೆ ಯಾರು ವಿದ್ಯಾರ್ಥಿಗಳು ಯಾರು ಕಳ್ಳರು ಎಂದು ಗುರುತು ಹಿಡಿಯಲು ಪೊಲೀಸರಿಗೆ ಕೂಡಾ ಸಮಸ್ಯೆಯಾಗಿದೆ. ಇಲ್ಲಿ ಸಮಸ್ಯೆ ಪಿಜಿ ಹಾಗೂ ರೂಮ್​​ಗಳದ್ದಲ್ಲ. ಅದಕ್ಕೆ ಪಿಜಿ ಹಾಗೂ ರೂಮ್​ಗಳಿಗೆ ಒಂದು ಕ್ಯಾಂಪಸ್ ಇರಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡ ರಾತ್ರಿ ವರೆಗೆ ಹೊರಗೆ ಒಡಾಡ್ತಾರೆ. ಅದರಲ್ಲೇ ಕಳ್ಳತನ ಮಾಡುವ ಕಳ್ಳರು ಕೂಡಾ ಬಂದು ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಇದು ಈಗ ಪೊಲೀಸ್ ಇಲಾಖೆಗೆ ಬಂದಿರುವ ಸಮಸ್ಯೆ. ಸದ್ಯ ಪೊಲೀಸ್ ಆಯುಕ್ತರು ಇದನ್ನ ತಡೆಯುವ ಮಾತು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us