/newsfirstlive-kannada/media/post_attachments/wp-content/uploads/2024/08/wayanad-8.jpg)
- ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ ಆರು ದಿನ
- ಮನೆ ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದಾರೆ ಖದೀಮರು
- ನೊಂದ ಜೀವಗಳು ನೋವು ಅರಗಿಸೋ ಸಮಯದಲ್ಲಿ.. ಇದೆಂಥಾ ಕಷ್ಟ!
ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ 6 ದಿನ ಕಳೆದಿದೆ. 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಅತ್ತ ಬದುಕುಳಿದವರು ನೋವನ್ನು ಅರಗಿಸಿಕೊಳ್ಳುತ್ತಿರುವುದರ ಜೊತೆಗೆ ಕಳ್ಳರ ಕಾಟದಿಂದ ಕೂಡ ಬೇಸತ್ತಿದ್ದಾರೆ.
ವಯನಾಡು ಜುಲೈ 30ರಂದು ಭೂಕುಸಿತದಿಂದ ಸಂಭವಿಸಿತ್ತು. ಸದ್ಯ ಅಲ್ಲಿನ ಪ್ರದೇಶ ಅಕ್ಷರಶಃ ಸ್ಮಶಾನದಂತಾಗಿದೆ. ಇಂಥಾ ಸಂಕಷ್ಟದ ಸಮಯದಲ್ಲೂ ಕೆಲವರು ಮನೆ ಮನೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದಾರಂತೆ. ರಕ್ಷಣಾ ಕಾರ್ಯಚರಣೆ ಎಂಬ ನೆಪದಲ್ಲಿ ಕದಿಯುತ್ತಿದ್ದಾರಂತೆ. ಮನೆಯ ಡೋರ್​ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರಂತೆ. ಸದ್ಯ ಈ ವಿಚಾರ ಬೆಳಕಿಗೆ ಬಂದಂತೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.
ಇದನ್ನೂ ಓದಿ: VIDEO: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದ ಯುವತಿ! ಆಕೆ ಬದುಕಿ ಬಂದಿದ್ದೇ ರೋಚಕ
ವಯನಾಡಿನ ಭೂಕುಸಿತದಲ್ಲಿ ಇದುವರೆಗೆ 219 ಮೃತದೇಹಗಳು ಪತ್ತೆಯಾಗಿದ್ದು, ಅದರಲ್ಲಿ 154 ಪ್ರತ್ಯೇಕ ದೇಹದ ಭಾಗಗಳು ಸಿಕ್ಕಿವೆ. ಮೃತಪಟ್ಟವರಲ್ಲಿ 96 ಪುರುಷರು, 87 ಮಹಿಳೆಯರು ಮತ್ತು 36 ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ