/newsfirstlive-kannada/media/post_attachments/wp-content/uploads/2024/07/DARSHAN-13.jpg)
ಜೈಪುರ: ರಾಜಸ್ಥಾನದ ಧರಿಯಾವಾಡ ಜಿಲ್ಲೆಯ ಮುಂಗಾನಾ ಗ್ರಾಮದಲ್ಲಿ ವಯೋವೃದ್ಧರೊಬ್ಬರ ಮೇಲೆ ಕಳ್ಳರು ಭೀಕರವಾಗಿ ಹಲ್ಲೆ ಮಾಡಿ ಅವರ ಕಿವಿಯನ್ನು ಕತ್ತರಿಸಿ, ಬಂಗಾರದ ಕಿವಿಯೋಲೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಹೀರಾಲಾಲ್ ಎಂದು ಗುರುತಿಸಲಾಗಿದೆ. ಎರಡು ಕಿವಿಯನ್ನು ಕತ್ತರಿಸಿದ ಕಾರಣ ವಿಪರೀತ ರಕ್ತಸ್ರಾವವಾಗಿದೆ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜ್ಜನ ಎರಡು ಕಿವಿಗಳಿಗೆ ಒಟ್ಟು ಏಳು ಹೋಲಿಗೆಗಳು ಬಿದ್ದಿವೆ.
ಹೀರಾಲಾಲ್ ಮುಂಗಾನಾ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ. ಕಳ್ಳ ಗ್ಯಾಂಗ್ ಅವರ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ. ಇಡೀ ರಾತ್ರಿ ಮನೆಯನ್ನೆಲ್ಲಾ ಜಾಲಾಡಿದಾಗ ಅವರಿಗೆ ಏನೂ ಸಿಕ್ಕಿಲ್ಲ, ಕೊನೆಗೆ ಮಲಗಿದ್ದ ಹೀರಾಲಾಲ್ ಅವರ ಕಿವಿಯಲ್ಲಿದ್ದ ಓಲೆಗಳನ್ನು ಕದ್ದೊಯ್ಯಲು ಅವರ ಕಿವಿಗಳನ್ನೇ ಕುಯ್ದುಕೊಂಡು ಹೋಗಿದ್ದಾರೆ. ಕಳ್ಳರು ಹೀಗೆ ದಾಳಿ ಮಾಡಿದಾಗ ಹೀರಾಲಾಲ್ ಕಿರುಚಿಕೊಂಡಿದ್ದಾರೆ. ಮನೆಯವರು ಅವರ ರಕ್ಷಣೆಗೆ ಬರುವಷ್ಟರಲ್ಲಿ ಕಳ್ಳರು ತಮ್ಮ ಕೆಲಸ ಮಾಡಿ ಮುಗಿಸಿ ಪೇರಿ ಕಿತ್ತಿದ್ದಾರೆ. ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us