/newsfirstlive-kannada/media/post_attachments/wp-content/uploads/2025/03/HVR_33_LACK_1.jpg)
ಯಾವುದನ್ನೇ ಪಡೆಯಲು, ಗಳಿಸಲು ವರುಷಾನುವರುಷ ಬೇಕು. ಆದ್ರೆ ಅದನ್ನ ಅಳಿಯೋಕೆ ನಿಮಿಷ ಸಾಕು. ಇದು ಕಾಕತಾಳಿ ಏನೋ ಅಥವಾ ವಿಧಿಯಾಟವೋ. ಜಸ್ಟ್ 33 ಸೆಕೆಂಡ್‌ಗಳಲ್ಲಿ 33 ಲಕ್ಷ ರೂಪಾಯಿಯನ್ನು ಖದೀಮರು ಎಸ್ಕೇಪ್ ಮಾಡಿದ್ದಾರೆ. ಕಾರಿನ ಗಾಜು ಒಡೆದು ಹಣ ಕದ್ದಿದ್ದು ಪೊಲೀಸರ ಬೇಟೆ ಶುರುವಾಗಿದೆ.
ಪಕ್ಕಾ ಪ್ಲಾನ್ ಮಾಡಿ ಟೈಮ್ ನೋಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದು ಪಾರ್ಟ್​ ಟೈಮ್​ ಕಳ್ಳರ ಕೆಲಸ ಅಲ್ಲವೇ ಅಲ್ಲ. ಮೈಮುರಿದು ಕೆಲಸ ಮಾಡಕಾಗದೇ ಪೋಲಿ ಬಿದ್ಕೊಂಡು, ಮನೆಗೆ ಹೊರೆಯಾಗಿ, ಬೇರೆಯವರ ಹಣಕ್ಕೆ ಕನ್ನ ಹಾಕುವ ಖದೀಮರ ಕೆಲಸ ಆಗಿದೆ.
/newsfirstlive-kannada/media/post_attachments/wp-content/uploads/2025/03/HVR_33_LACK.jpg)
ಜಸ್ಟ್​​​ 33 ಸೆಕೆಂಡ್​, ₹33 ಲಕ್ಷ ಎಗರಿಸಿದ ಖತರ್ನಾಕ್ ಕಳ್ಳರು
ಕಳ್ಳ ನಂಬರ್​ 1 ಬರುತ್ತಾನೆ. ಅತ್ತ ಇತ್ತ ನೋಡಿ ಜೇಬಿನಲ್ಲಿದ್ದ ಕಲ್ಲು ತೆಗದು ಕಾರ್​ ಗ್ಲಾಸ್​ ಅನ್ನು ಪುಡಿ ಮಾಡುತ್ತಾನೆ. ವಿಂಡ್ಹೋಯಿಂದಲೇ ಒಳಗೆ ನುಗ್ಗಿ ಕಾರಿನಲ್ಲಿದ್ದ ಹಣವನ್ನ ಎಸ್ಕೇಪ್​ ಮಾಡ್ತಾನೆ. ಬೈಕ್​ ಸ್ಟಾರ್ಟ್​ ಮಾಡ್ಕೊಂಡು ಕಾಯುತ್ತಿದ್ದ ಕಳ್ಳ ನಂಬರ್- 2 ನೇರ ಬರುತ್ತಾನೆ. ಇಬ್ಬರು ಬೈಕ್​ ಹತ್ತಿ ಪರಾರಿ ಆಗುತ್ತಾರೆ.
ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಕೇಸ್​ ಹೆಚ್ಚಾಗ್ತಿವೆ. ಬೈಕ್, ಮಾಂಗಲ್ಯ ಸರ ಸೇರಿದಂತೆ ಮನೆಗಳ್ಳತನಕ್ಕೆ ಸಾಕಷ್ಟು ಯತ್ನಗಳು ನಡೆದಿದೆ. ಈ ಕೇಸ್​ಗಳ ಜೊತೆ ಈಗ ರಾಬರಿ, ಹಾಡಹಗಲೇ 33 ಸೆಕೆಂಡ್​ನಲ್ಲಿ 33 ಲಕ್ಷ ರೂಪಾಯಿ ಹಣವನ್ನ ಖತರ್ನಾಕ್ ಕಳ್ಳರು ಎಗರಿಸಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದ್ದು ಅಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ.
ಸ್ಮಾರ್ಟ್​ ಕಳ್ಳರು!
- ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ
- ಬಸವೇಶ್ವರ ನಗರದ ಸಂತೋಷ ಹಿರೇಮಠ್​ಗೆ ಸೇರಿದ ಹಣ
- ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ಹಣವನ್ನ ಡ್ರಾ ಮಾಡಿದ್ದರು
- ಮನೆ ಮುಂದೆ ಕಾರು ನಿಲ್ಲಿಸಿ, ಮನೆಯೊಳಗೆ ಹೋಗಿದ್ದ ಸಂತೋಷ್
- ವಾಪಸ್ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ
- ಕಳ್ಳರ ಕೈಚಳಕದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಇದನ್ನೂ ಓದಿ: ಖ್ಯಾತ ಕನ್ನಡ​ ನಿರ್ದೇಶಕನಿಗೆ ಮಸಿ ಬಳಿದು, ಹಲ್ಲೆ.. ವಾಟಾಳ್, ಸಾರಾ ಗೋವಿಂದು ಬೆಂಬಲಿಗರ ವಿರುದ್ಧ ಆರೋಪ
/newsfirstlive-kannada/media/post_attachments/wp-content/uploads/2025/03/HVR_33_LACK_2.jpg)
ಹಾಡಹಗಲೇ ಕಳ್ಳರ ಗ್ಯಾಂಗ್ ಬರೋಬ್ಬರಿ 33 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದೆ. 2 ಬೈಕ್​​ಗಳಲ್ಲಿ ಬಂದಿದ್ದ ನಾಲ್ವರ ಗ್ಯಾಂಗ್​​​ ಈ ಕೃತ್ಯ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡ ರಚಿಸಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us