ಮಧ್ಯರಾತ್ರಿ 2 ಗಂಟೆ! 15 ಲಕ್ಷದ Hayabusa ಬೈಕ್​ಗಳು​ ತುಂಬಿದ್ದ ಟ್ರಕ್​​ ಅಪಹರಣ.. ಕೊನೆಯಲ್ಲಿ ಕೇಸ್​​ಗೆ ರೋಚಕ ಟ್ವಿಸ್ಟ್..!

author-image
Ganesh
Updated On
ಮಧ್ಯರಾತ್ರಿ 2 ಗಂಟೆ! 15 ಲಕ್ಷದ Hayabusa ಬೈಕ್​ಗಳು​ ತುಂಬಿದ್ದ ಟ್ರಕ್​​ ಅಪಹರಣ.. ಕೊನೆಯಲ್ಲಿ ಕೇಸ್​​ಗೆ ರೋಚಕ ಟ್ವಿಸ್ಟ್..!
Advertisment
  • ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ಬೈಕ್​​ಗಳ ಮೇಲೆ ಕಳ್ಳರ ಕಣ್ಣು
  • ಕಳ್ಳರು ಟ್ರಕ್ ಅಪಹರಿಸಿಕೊಂಡು ಹೋಗಿದ್ದು ಹೇಗೆ..?
  • ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸ್ಥಳ ಬೆಂಗಳೂರು, ಮಧ್ಯರಾತ್ರಿ 2 ಗಂಟೆ! ಕಳ್ಳರ ಗ್ಯಾಂಗ್ ಒಂದು Suzuki Hayabusa ಬೈಕ್​​ಗಳನ್ನು ತುಂಬಿದ್ದ ಟ್ರಕ್​​ ಒಂದನ್ನ ಅಪಹರಿಸಿತ್ತು! ಟ್ರಕ್​​ನಲ್ಲಿ ಸೂಪರ್​ ಬೈಕ್​​ಗಳು ಇದ್ದಿರೋದ್ರಿಂದ ಜಾಕ್​ಪಾಟ್ ಸಿಕ್ಕಿದೆ ಅನ್ಕೊಂಡಿದ್ದರು ಕಳ್ಳರು. ಆದರೆ, ಕಳ್ಳರ ಅದೃಷ್ಟ ಬದಲಾಗರಲಿಲ್ಲ. ಕೊನೆಯಲ್ಲಿ ರೋಚಕ ಕಾರ್ಯಾಚರಣೆಯ ಸುಳಿಗೆ ಸಿಲುಕಿ ಬೈಕ್​ನ ಕೆಲವು ಭಾಗಗಳು, ಚಾಲಕನ ಫೋನ್, ಹಣವನ್ನು ತೆಗೆದುಕೊಂಡು ಹೋಗುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

ಅಸಲಿಗೆ ಆಗಿದ್ದೇನು..?

ಹೆಸರು ನಂದಾಲಾಲ್. ವಯಸ್ಸು ಸುಮಾರು 45. ಇವರು ಮೂಲತಃ ರಾಜಸ್ಥಾನದ ದುಂಗರ್​ಪುರ. ಟ್ರಕ್ ಡ್ರೈವರ್ ಆಗಿದ್ದ ಇವರು, ಸುಜುಕಿ ಹಯಾಬುಸಾ ಬೈಕ್​ಗಳನ್ನು ಹರಿಯಾಣದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಬೆಂಗಳೂರಿನ ಎರಡು ಡೀಲರ್​​ಗಳಿಗೆ ಇವರು ಬೈಕ್​ಗಳನ್ನು ತಲುಪಿಸಬೇಕಾಗಿತ್ತು. ಬನಶಂಕರಿಯಲ್ಲಿರುವ ಆ್ಯಪಲ್ ಆಟೋ ಏಜೆನ್ಸಿ (Suzuki Hayabusa) ಮತ್ತು ಬೀದರಹಳ್ಳಿಯಲ್ಲಿರುವ ಆರ್ಯನ್ ಆಟೋ ಏಜಿನ್ಸಿ (Aryan Auto Agency)ಗೆ ಬೈಕ್​​ಗಳನ್ನು ಡೆಲಿವರಿ ಮಾಡಬೇಕಾಗಿತ್ತು.

ಇದನ್ನೂ ಓದಿ: ಭಾರೀ ಮೇಘಸ್ಫೋಟ; ನಿರ್ಮಾಣ ಹಂತದ ಹೋಟೆಲ್​​ನಲ್ಲಿದ್ದ ಕಾರ್ಮಿಕರು ನಾಪತ್ತೆ!

ನಂದಾಲಾಲ್ ಜೂನ್ 22 ರಂದು ಅವರು ಬನಶಂಕರಿಯಲ್ಲಿರುವ ಡೀಲರ್ಸ್​ಗೆ ಬೈಕ್​​ಗಳನ್ನು ಡೆಲಿವರಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಿದಹಳ್ಳಿಯಲ್ಲಿರುವ ಶೋರೂಮ್​​ಗೆ ಬೈಕ್​​ಗೆ ತಲುಪಿಸುವಾಗ ಅವರಿಗೆ ದಾರಿ ತಪ್ಪುತ್ತದೆ. ವಿರ್ಗೊನಗರದ ಇಸ್ಟ್​ ಪಾಯಿಂಟ್ ಆಸ್ಪತ್ರೆ​ ಬಳಿ ದಾರಿ ತಪ್ಪಿಸಿಕೊಳ್ತಾರೆ. ಆಗ ಸುಮಾರು ಮಧ್ಯರಾತ್ರಿ 2 ಗಂಟೆ ಆಗಿರುತ್ತದೆ. ರಸ್ತೆಯಲ್ಲೇ ಟ್ರಕ್​​ನ ಪಾರ್ಕ್​​ ಮಾಡಿ ಆಸ್ಪತ್ರೆಗೆ ಹೋಗಿ ದಾರಿ ಕೇಳಿಕೊಂಡು ಬರಲು ಮುಂದಾಗುತ್ತಾರೆ. ಈ ವೇಳೆ ಡ್ರೈವರ್​ ತಮ್ಮ ಮೊಬೈಲ್ ಮತ್ತು ಪರ್ಸ್​ ಅನ್ನು ಟ್ರಕ್​ನಲ್ಲಿಯೇ ಬಿಟ್ಟು ಹೋಗಿದ್ದಾರೆ.

ಅಲ್ಲಿಗೆ ಎಂಟ್ರಿಯಾಗಿದ್ದ ಕಳ್ಳರು, ಏಕಾಏಕಿ ಟ್ರಕ್​ ಏರಿದ್ದಾರೆ. ಡ್ರೈವ್ ಮಾಡಿಕೊಂಡು ಪರಾರಿ ಆಗಿದ್ದಾರೆ. ರೂಟ್ ಕೇಳಿಕೊಂಡು ಬಂದ ಡ್ರೈವರ್​ ನಂದಾಲಾಲ್​​ಗೆ ಆಘಾತ ಆಗಿದೆ. ಮೊಬೈಲ್ ಮತ್ತು ಪರ್ಸ್ ಎರಡೂ ಲಾರಿಯಲ್ಲಿ ಇದ್ದಿದ್ದರಿಂದ ಜನರ ಸಹಾಯ ಕೇಳಲು ತೊಂದರೆಯಾಗಿದೆ. ರಾತ್ರಿ ಅಲ್ಲೇ ಕಳೆದ ಆತ, ಮಾರನೇಯ ದಿನ ತಾವು ಹೋಗಬೇಕಿದ್ದ ಶೋ ರೂಮ್​ಗೆ ನಡೆದುಕೊಂಡು ಹೋಗ್ತಾರೆ. ಅಲ್ಲಿನ ಉದ್ಯೋಗಿ ಜಗದೀಶ್​ ಅನ್ನೊರಿಗೆ ನಡೆದ ಘಟನೆ ಬಗ್ಗೆ ತಿಳಿಸುತ್ತಾರೆ. ಅವರಿಂದ ಮೊಬೈಲ್ ಪಡೆದು ತಮ್ಮ ಟ್ರಕ್ ಓನರ್​​ಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸ್ ದೂರು ನೀಡಿದ ಮೇಲೆ ಟ್ರಕ್​ನಲ್ಲಿದ್ದ ಜಿಪಿಎಸ್​ ಪಡೆದು ಲಾರಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಬ್ಯುಸಿನೆಸ್​​ ಲೋಕಕ್ಕೆ ಕೊಹ್ಲಿ ಗ್ರ್ಯಾಂಡ್​​​ ಎಂಟ್ರಿ.. 40 ಕೋಟಿಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭ!

ಲಾರಿಯು ಹೊಸಕೋಟೆಯ ಗುಂಡೂರು ಗ್ರಾಮದ ಬಳಿ ಪತ್ತೆಯಾಗಿದೆ. ನಂದಾ ಮತ್ತು ಜಗದೀಶ್ ಸ್ಥಳಕ್ಕೆ ದೌಡಾಯಿಸಿದ್ದರು. ಆಟದ ಮೈದಾನದಲ್ಲಿ ಲಾರಿ ನಿಂತಿತ್ತು. ಲಾರಿಯಲ್ಲಿದ್ದ ಒಂದು ಬೈಕ್ ಅನ್ನು ತೆಗೆಯಲು ಯತ್ನಿಸಿರೋದು ಗೊತ್ತಾಗಿದೆ. ಆದರೆ ಅದನ್ನು ಟ್ರಕ್​ನಿಂದ ತೆಗೆಯಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಸಣ್ಣಪುಟ್ಟ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾರೆ. ಸೈಲೆನ್ಸರ್, ಬ್ಯಾಟರಿಗಳು, ಕೀ ಸೆಟ್​ ಹಾಗೂ ಡ್ರೈವರ್ ನಂದಾಲಾಲ್​​ನ ಮೊಬೈಲ್ ಹಾಗೂ ಪರ್ಸ್​​ನಲ್ಲಿದ್ದ ಮೂರು ಸಾವಿರ ರೂಪಾಯಿ ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದರು.

ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿಎನ್​ಎಸ್ 303 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗುಂಡೂರಿಗೆ ತಲುಪುವ ಮಾರ್ಗದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡ್ತಿದ್ದಾರೆ. ಬೈಕ್​ಗಳನ್ನು ತುಂಬಿದ್ದ ಟ್ರಕ್ ಅಪಹರಿಸಿದ್ದ ಕಳ್ಳರಿಗಾಗಿ ಹುಡುಕಾಟ ನಡೆಸ್ತಿದ್ದೇವೆ. ಒಂದು ಬೈಕ್​​ನ ಮೌಲ್ಯ ಸುಮಾರು 15 ಲಕ್ಷ ಅನ್ನೋದು ಗೊತ್ತಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿರಾಜ್​ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment