/newsfirstlive-kannada/media/post_attachments/wp-content/uploads/2024/09/Agriculture.jpg)
ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ. ಇದರ ಮಧ್ಯ ಜನರಿಗೂ ಇರೋಕೆ ಒಂದು ಸ್ವಂತ ಮನೆ ಮತ್ತು ಕೃಷಿ ಮಾಡೋಕೆ ಒಂದಷ್ಟು ಜಮೀನು ಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಒಂದೆಡೆ ಭೂಮಿ ಬೆಲೆ ಹೆಚ್ಚಾಗುತ್ತಾ ಹೋದಂತೆ ಇನ್ನೊಂದೆಡೆ ಯಾವ ರೀತಿಯ ಜಮೀನು ಖರೀದಿ ಮಾಡಬೇಕು ಅನ್ನೋ ಯೋಚನೆ ಎಲ್ಲರದ್ದು. ಇಂದು ಯಾರೇ ಆಗಲಿ ಆಸ್ತಿ ಖರೀದಿ ಮಾಡೋ ಮುನ್ನ ಸಾಕಷ್ಟು ಎಚ್ಚರ ವಹಿಸಲೇಬೇಕು. ಚೂರು ಯಾಮಾರಿದ್ರೂ ನೀವು ಕೂಡಿಟ್ಟ ಹಣ ಕ್ಷಣಾರ್ಧದಲ್ಲೇ ಕಳೆದು ಹೋಗುತ್ತದೆ. ಹಾಗಾಗಿ ಯಾವುದೇ ಆಸ್ತಿ ಮತ್ತು ಜಮೀನು ಖರೀದಿ ಮಾಡುವಾಗ ಕೆಲವು ದಾಖಲೆಗಳನ್ನು ಪರಿಶೀಲಿಸಬೇಕು. ಅದರಲ್ಲೂ ಕೃಷಿ ಜಮೀನು ಖರೀದಿಗೆ ಮುನ್ನ ಈ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಲೇಬೇಕು.
ಸಮಸ್ಯೆ ಇಲ್ಲದಂತೆ ಕಾನೂನನ್ನು ಸಡಿಲಿಕೆ ಮಾಡಿದೆ. ಇಷ್ಟಾದ್ರೂ ಜನರಿಗೆ ಯಾವ ರೀತಿಯಲ್ಲಿ ಕೃಷಿ ಜಮೀನು ಖರೀದಿ ಮಾಡಬೇಕು ಅನ್ನೋ ಪ್ರಶ್ನೆಗಳು ಇವೆ. ಅಂಥವರು ಕೃಷಿ ಜಮೀನು ಜೊತೆಗೆ ಬರೋ ಈಗಂತೂ ಕರ್ನಾಟಕದಲ್ಲಿ ಯಾರು ಬೇಕಾದ್ರೂ ಜಮೀನು ಖರೀದಿ ಮಾಡಬಹುದು. ಅದರಲ್ಲೂ ಸದ್ಯ ಕೃಷಿ ಜಮೀನು ಖರೀದಿ ಬಹಳ ಸುಲಭ. ಸರ್ಕಾರವೇ ಕೃಷಿ ಜಮೀನು ಖರೀದಿಗೆ ಯಾವುದೇ ಖರಾಬ್ ಜಮೀನು ಬಗ್ಗೆ ತಿಳಿಯಲೇಬೇಕು. ಅದನ್ನು ಖರೀದಿ ಮಾಡೋ ಮುನ್ನ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನೋ ಅರಿವಿರಬೇಕು.
ಜಮೀನಿನಲ್ಲಿ ಎರಡು ವಿಧಗಳು
ಹೌದು, ಜಮೀನಿನಲ್ಲಿ ಎರಡು ವಿಧಗಳು ಇವೆ. ಒಂದು ಕೃಷಿಗೆ ಯೋಗ್ಯವಾದ ಭೂಮಿ. ಇನ್ನೊಂದು ಕೃಷಿಗೆ ಯೋಗ್ಯವಿಲ್ಲದ ಭೂಮಿ. ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಖರಾಬ್ ಭೂಮಿ ಎಂದು ಕರೆಯಲಾಗುತ್ತದೆ.
ಯಾವುದೇ ಜಮೀನು ಖರೀದಿ ಮಾಡೋ ಮುನ್ನ ಮೊದಲು ನೀವು RTC Documents ಪರಿಶೀಲಿಸಲೇಬೇಕು. ಈ RTC ಡಾಕ್ಯೂಮೆಂಟ್ಸ್ನಲ್ಲಿ ಕೃಷಿ ಜಮೀನು ಇರುತ್ತದೆ. ಅದರ ಜೊತೆಗೆ ಪಾಟ್ ಖರಾಬ್ ಜಮೀನು ಇದ್ದಲ್ಲಿ ಅದನ್ನು ಉಲ್ಲೇಖ ಮಾಡಿರುತ್ತಾರೆ. ಪಾಟ್ ಖರಾಬ್ ಜಮೀನಿನಲ್ಲೂ ಎ ಮತ್ತು ಬಿ ಎಂದು 2 ರೀತಿಯ ಲ್ಯಾಂಡ್ ಇರುತ್ತದೆ.
ಅಸಲಿಗೆ ಖರಾಬ್ ಭೂಮಿ ಎಂದರೇನು?
ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಖರಾಬ್ ಎಂದು ಕರೆಯುತ್ತಾರೆ. ಈ ಖರಾಬ್ ಭೂಮಿಗೆ ಪಾಟ್ ಖರಾಬ್ ಎಂದು ಕರೆಯಬಹುದು. ಸೇಲ್ ಡೀಡ್ ಸೇರಿದಂತೆ ಎಲ್ಲಾ ರೀತಿಯ ದಾಖಲೆಗಳಲ್ಲೂ ಕೃಷಿ ಭೂಮಿಯೇ ಬೇರೆ, ಖರಾಬ್ ಭೂಮಿಯೇ ಬೇರೆ ಆಗಿರುತ್ತದೆ. ನೀವು ಜಮೀನು ಖರೀದಿ ಮಾಡುವಾಗ ಈ ಎರಡನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಲೇಬೇಕು. ಕೃಷಿಗೆ ಯೋಗ್ಯವಾದ ಜಮೀನು ಎಷ್ಟಿದೆ? ಯೋಗ್ಯವಲ್ಲದ ಖರಾಬ್ ಜಮೀನು ಎಷ್ಟು ಎಂದು ನೋಡಿಕೊಳ್ಳಬೇಕಾಗುತ್ತದೆ.
ಖರಾಬ್ ಜಮೀನಿನಲ್ಲೂ 2 ವಿಧಗಳು
ಎ ಖರಾಬ್ ಎಂದರೇನು?
ಎ ಖರಾಬ್ ಎಂದರೆ ಕೃಷಿಗೆ ಅನರ್ಹವಾದ ಜಮೀನು. ಸಾಮಾನ್ಯವಾಗಿ ಸರ್ವೇ ಮಾಡುವಾಗ ಯಾವ ಜಮೀನಿನಲ್ಲಿ ಕೃಷಿ ಮಾಡಲಿಕ್ಕೆ ಆಗಲ್ವೋ ಅದನ್ನೇ ಖರಾಬ್ ಜಮೀನು ಎಂದು ಗುರುತಿಸಲಾಗುತ್ತದೆ. ಹಳ್ಳ, ಕಲ್ಲು ಪ್ರದೇಶ, ಯಾವುದಾದ್ರೂ ಮನೆ ಕಟ್ಟಿರೋ ಜಾಗವನ್ನು ಕೃಷಿ ಮಾಡೋಕೆ ಯೋಗ್ಯವಲ್ಲದ ಜಮೀನು ಎನ್ನಬಹುದು. ಆ ರೀತಿಯ ಪ್ರದೇಶಗಳಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ. ಎ ಖರಾಬ್ ಜಮೀನು ಖಾಸಗಿ ವ್ಯಕ್ತಿಗಳ ಭೂಮಿಯ ಭಾಗವಾಗಿ ಇರುತ್ತದೆ. ಎ ಖರಾಬ್ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬಹುದು. ನೀವು ಮಾಡಬೇಕಾದ ಕೆಲಸ ಸರ್ಕಾರಕ್ಕೆ ಆ ಭೂಮಿಗೆ ತೆರಿಗೆ ಹಣ ಕಟ್ಟಬೇಕು.
ಬಿ ಖರಾಬ್ ಎಂದರೇನು?
ಇದು ಕೃಷಿಯೇತರ ಜಮೀನು. ಇದನ್ನು ಕೃಷಿಗೆ ಯೋಗ್ಯವಲ್ಲದ ಜಮೀನು ಎಂದು ಕರೆಯಲಾಗುತ್ತೆ. ಇದು ಸರ್ಕಾರಕ್ಕೆ ಸೇರಿದ್ದು. ಬಿ ಖರಾಬ್ ಜಮೀನನ್ನು Specific ಪರ್ಪಸ್ಗೆ ಬಳಕೆ ಮಾಡಲಾಗುತ್ತದೆ. ಸಾರ್ವಜನಿಕರ ಪರ್ಪಸ್ಗಾಗಿ ಈ ಜಮೀನು ಇರುತ್ತದೆ. ಸಮಾಧಿ, ಸ್ಮಶಾನ, ಕಾಲು ದಾರಿ, ಎತ್ತಿನ ಗಾಡಿ ರಸ್ತೆ, ನಾಲಾ, ಜಾನುವಾರು ಹೀಗೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತೆ. ಈ ರೀತಿಯ ಜಾಗಗಳು ಬಿ ಖರಾಬ್ನಲ್ಲಿ ಬರುತ್ತವೆ.
ಕೃಷಿ ಭೂಮಿ ಖರೀದಿಗೆ ಮುನ್ನ ಏನೆಲ್ಲಾ ಕ್ರಮಗಳು ತೆಗೆದುಕೊಳ್ಳಬೇಕು?
ಸೇಲ್ ಡೀಡ್ ಅಥವಾ ಮದರ್ ಡೀಡ್ ಪರಿಶೀಲಿಸಬೇಕು. ಯಾರಿಂದ ಯಾರಿಗೆ ಜಮೀನು ಬಂದಿದೆ ಎಂದು ನೋಡಬೇಕು. ಪಾರ್ಟೀಷನ್ ಡೀಡ್, ಗಿಫ್ಟ್ ಡೀಡ್ ಮೂಲಕ ಭೂಮಿ ವ್ಯಕ್ತಿಗಳ ಹೆಸರಿಗೆ ಬಂದಿರುತ್ತೆ. ಅವುಗಳನ್ನು ಪರಿಶೀಲಿಸಬೇಕು. ಬಳಿಕ ಜಮೀನಿನ ಇ.ಸಿಯನ್ನು ಪರಿಶೀಲಿಸಬೇಕು. ಸುಮಾರು 30 ವರ್ಷದಿಂದ 50 ವರ್ಷದವರೆಗೂ ಇ.ಸಿ ಚೆಕ್ ಮಾಡಿಕೊಳ್ಳಬೇಕು. ಇ.ಸಿ ಎಂದರೆ ಎನಕುಬರೇನ್ಷ್ ಸರ್ಟಿಫಿಕೇಟ್. ಇದರಲ್ಲಿ ಜಮೀನು ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ ಅನ್ನೋ ಉಲ್ಲೇಖ ಇರುತ್ತೆ. ಇ.ಸಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕು.
ಇನ್ನೂ ಜಮೀನಿನ ಅಕಾರ್ಬಂದ್, ಟಿಪ್ಪಾಣಿ, ಖರಾಬ್ ಉತ್ತರ್ Extract, ವಿಲೇಜ್ ಮ್ಯಾಪ್, ಆರ್‌ಟಿಸಿ ಡಾಕ್ಯುಮೆಂಟ್, ಪವರ್ ಆಫ್ ಅಟಾರ್ನಿ, ಎನ್ಒಸಿಗಳನ್ನು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಪಹಣಿಯಲ್ಲಿ ಜಮೀನು ಯಾರ ಹೆಸರಿನಲ್ಲಿದೆ ಅನ್ನೋ ಮಾಹಿತಿ ಲಭ್ಯವಾಗುತ್ತೆ. ಪಹಣಿಯನ್ನು ಆರ್‌ಟಿಸಿ ಅಂತ ಕೂಡ ಕರೆಯುತ್ತೇವೆ. ಜಮೀನಿನ ಮೇಲೆ ಯಾವುದಾದರೂ ಬ್ಯಾಂಕ್ನಿಂದ ಸಾಲ ಪಡೆಯಲಾಗಿದೆಯೇ? ಬ್ಯಾಂಕ್ಗೆ ಜಮೀನು ಮಾರ್ಟಗೇಜ್ ಮಾಡಲಾಗಿದೆಯೇ? ಅನ್ನೋ ವಿವರ ಕೂಡ ನೋಡಿಕೊಳ್ಳಬೇಕು. ಇದೆಲ್ಲವೂ ಋಣಭಾರ ಕಲಂನಲ್ಲೇ ಉಲ್ಲೇಖ ಆಗಿರುತ್ತದೆ. ಈ ಎಲ್ಲವನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು.
ಲೇಖಕರು:ಗಣೇಶ್ ನಚಿಕೇತು
ಇದನ್ನೂ ಓದಿ:ವಿದೇಶದಲ್ಲಿ ಓದೋ ಆಸೆನಾ? ಹಣ ಇಲ್ಲ ಎಂದು ಹಿಂದೇಟು ಹಾಕ್ತಿದ್ದೀರಾ? ಓದಲೇಬೇಕಾದ ಸ್ಟೋರಿ ಇದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ