/newsfirstlive-kannada/media/post_attachments/wp-content/uploads/2025/01/MARRIAGE-BROKER.jpg)
30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್​ನಲ್ಲಿ ನಡೆದಿದೆ.
ಮುಧೋಳ್ ತಾಲೂಕಿನ ಸೋಮಶೇಖರ್ ಎಂಬ ವ್ಯಕ್ತಿ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿದ ಮ್ಯಾರೇಜ್ ಬ್ರೋಕರ್ ಟೀಮ್​ ಹೆಣ್ಣು ಕೊಡಸ್ತೀವಿ ಅಂತ ಹೇಳಿ 4 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿತ್ತು. ಹೆಣ್ಣು ಸಿಗದೆ ಪರದಾಡುತ್ತಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು. ಕೊನೆಗೆ ಮುಧೋಳ್​ನ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆಯೂ ಆಯ್ತು. ಮದುವೆಯ ದಿನವೇ4 ಲಕ್ಷ ರೂಪಾಯಿ ಹಣ ಪಡೆದಿದ್ದ ಬ್ರೋಕರ್. ಮದುವೆಯಾಗಿ ಒಂದೇ ತಿಂಗಳಲ್ಲಿ ಸೋಮಶೇಖರ್ ಪತ್ನಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಈ ಬಗ್ಗೆ ಕೇಳೋಣ ಅಂತ ಬ್ರೋಕರ್ ಹತ್ತಿರ ಹೋದ್ರೆ ಆ ಕಡೆ ಅವನು ಎಸ್ಕೇಪ್ ಆಗಿದ್ದಾನೆ.
/newsfirstlive-kannada/media/post_attachments/wp-content/uploads/2025/01/MARRIAGE-BROKER-1.jpg)
ಇದನ್ನೂ ಓದಿ:ಹಾವೇರಿಯಲ್ಲಿ ರಾಜ್ಯಮಟ್ಟದ ಬಂಡಿ ಓಡಿಸೋ ಸ್ಪರ್ಧೆ; ಪೊಗರದಸ್ತು ಎತ್ತುಗಳ ರೇಸ್ ಹೇಗಿತ್ತು?
ಸೋಮಶೇಖರ್​ಗೆ ಮೋಸವಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ಪತ್ನಿಯ ಬಗ್ಗೆ ವಿಚಾರಿಸಲು ಹೋದ ವೇಳೆ ಆಕೆಗೆ ಈ ಮೊದಲೇ ಎರಡು ಮದುವೆಯಾದ ವಿಷಯ ಬೆಳಕಿಗೆ ಬಂದಿದೆ. ಹಣ ಮಾಡಲು ಮಹಿಳೆಯನ್ನು ಮುಧೋಳಕ್ಕೆ ಈ ಗ್ಯಾಂಗ್ ಕರೆತಂದಿತ್ತು ಎಂದು ಹೇಳಲಾಗಿದೆ. ಬ್ರೋಕರ್ ಟೀಮ್​ಗೆ 4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾರೆ ಸೋಮಶೇಖರ್, ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮಶೇಖರ್ ಜೊತೆ ಶಿವಮೊಗ್ಗಾದ ಮಂಜುಳಾ ಎಂಬುವವಳ ಮದುವೆಯಾಗಿತ್ತು. ಸದ್ಯ ಮುಧೋಳ್ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us