/newsfirstlive-kannada/media/post_attachments/wp-content/uploads/2024/08/thirsty-at-night.webp)
ಅನೇಕ ಬಾರಿ ನಮಗೆ ಮಧ್ಯರಾತ್ರಿಯಲ್ಲಿ ಪದೇ ಪದೇ ನೀರಡಿಕೆಯಾಗುತ್ತೆ. ಇದರಿಂದ ನಮ್ಮ ನಿದ್ದೆಗೂ ಕೂಡ ತೊಂದರೆಯಾಗುತ್ತದೆ. ನಿದ್ದೆಗಣ್ಣಲ್ಲಿಯೇ ಎದ್ದು ಪದೇ ಪದೇ ನೀರು ಕುಡಿಯುವುದರಿಂದ ಸರಿಯಾಗಿ ನಿದ್ದೆಯೂ ಮಾಡಲು ಆಗುವುದಿಲ್ಲ. ಹಾಗಂತ ಇದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಹೀಗೆ ಮಧ್ಯರಾತ್ರಿ ನೀರಡಿಕೆಯಾಗಲು ಹಲವು ಕಾರಣಗಳಿವೆ. ಹಲವು ಗಂಭೀರ ಆರೋಗ್ಯ ಸಮಸ್ಯೆಗಳ ಗುಣಲಕ್ಷಣಗಳು ಇರುವುದು ಸ್ಪಷ್ಟವಾಗಿರುತ್ತದೆ. ಒಂದು ವೇಳೆ ನಿಮಗೆ ನಡುರಾತ್ರಿಯಲ್ಲಿ ನಿಮಗೆ ಪದೇ ಪದೇ ದಾಹವೆನಿಸಿದರೆ ಈ ಸಮಸ್ಯೆಗಳು ಇದೆ ಅಂತಲೇ ಅರ್ಥ.
ಮಧುಮೇಹ(ಸಕ್ಕರೆ ಕಾಯಿಲೆ) ಲಕ್ಷಣ
ನಡುರಾತ್ರಿ ಅತೀರೇಕ ನೀರಡಿಕೆಯಾಗುವುದು ಸಕ್ಕರೆ ರೋಗದ ಒಂದು ಗುಣಲಕ್ಷಣವೂ ಹೌದು. ಯಾವಾಗ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆಯೋ ಆಗ ಈ ರೀತಿಯ ದಾಹ ಆಗಲು ಆರಂಭವಾಗುತ್ತದೆ . ಹೀಗಾಗಿ ನಿಮಗೆ ನಡುರಾತ್ರಿ ಜಾಸ್ತಿ ದಾಹ ಅನಿಸುತ್ತಿದ್ದರೆ. ಪದೇ ಪದೇ ನಿದ್ದೆಯಿಂದ ಅದಕ್ಕಾಗಿ ಎಚ್ಚರಗೊಳ್ಳುತ್ತಿದ್ದರೆ ಕೂಡಲೇ ನಿಮ್ಮ ಶುಗರ್ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು.
ನಿರ್ಜಲೀಕರಣ (Dehydration)
ಒಂದು ವೇಳೆ ನೀವು ಹಗಲಲ್ಲಿ ಹೆಚ್ಚು ನೀರು ಕುಡಿಯದೇ ಇದ್ದರೆ ದೇಹ ರಾತ್ರಿ ಹೊತ್ತು ಹೆಚ್ಚು ಹೆಚ್ಚು ನೀರು ಬೇಡುತ್ತದೆ. ಹೀಗಾಗಿ ಮಧ್ಯರಾತ್ರಿಯಲ್ಲಿ ನಿದ್ದೆ ವೇಳೆ ನಿಮಗೆ ನೀರಡಿಕೆಯಾಗುವುದು ಸಾಮಾನ್ಯ. ಇದನ್ನು ತಪ್ಪಿಸಲು ದಿನದ ವೇಳೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
ನಿದ್ರಾಹೀನತೆ
ನಿದ್ರೆಯ ಸಮಸ್ಯೆ ಪ್ರಮುಖವಾಗಿ ಅಪ್ನೀಯಾ ಕೂಡ ಮಧ್ಯ ರಾತ್ರಿ ದಾಹವಾಗಲು ಒಂದು ಕಾರಣ, ಅಪ್ನೀಯಾ ಒಂದು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ. ಒಣ ಗಂಟಲಿನಿಂದಾಗಿ ನಿಮ್ಮ ದೇಹದಲ್ಲಿ ನೀರಡಿಕೆ ಹೆಚ್ಚಾಗುತ್ತದೆ. ಉಸಿರಾಟದ ತೊಂದರೆಯಿಂದಾಗಿ ದೇಹಕ್ಕೆ ಸರಿಯಾದ ಆಮ್ಲಜನಕ ದೊರಕದೆ ಇದ್ದಾಗ ಈ ರೀತಿಯಾಗಿ ನೀರಡಿಕೆಯಾಗುತ್ತದೆ. ನಡುರಾತ್ರಿ ಪದೇ ಪದೇ ಎಚ್ಚರವಾಗುತ್ತದೆ.
ಮೂತ್ರನಾಳದ ಸೋಂಕು (Urinary tract infection )(UTI)
UTI ಆರಂಭಿಕ ಲಕ್ಷಣಗಳಲ್ಲಿ ನಡುರಾತ್ರಿ ಪದೇ ಪದೇ ನೀರಡಿಕೆಯಾಗುವುದು ಕೂಡ ಒಂದು. ಯುಟಿಐ ಮೂತ್ರನಾಳದಲ್ಲಿ ಹಲವಾರು ಬ್ಯಾಕ್ಟಿರಿಯಾಗಳನ್ನು ಹರಿಬಿಡುತ್ತವೆ. ಇದು ನಡುರಾತ್ರಿಯಲ್ಲಿ ಹೆಚ್ಚು ಹೆಚ್ಚು ನೀರಡಿಕೆಯಾಗುವಂತೆ ಮಾಡುತ್ತದೆ. ಒಂದು ವೇಳೆ ನೀವು ಇದನ್ನು ನಿರ್ಲಕ್ಷಿಸಿದ್ರೆ, ಮುಂದೆ ದೊಡ್ಡ ಸಮಸ್ಯೆಯುಂಟಾಗುತ್ತದೆ. ಹೀಗಾಗಿ ನಡುರಾತ್ರಿಯಲ್ಲಿ ಪದೇ ಪದೇ ದಾಹದಿಂದಾಗಿ ಎಚ್ಚರವಾದ್ರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಿ, ಯುಟಿಐನಂತಹ ಸಮಸ್ಯೆಯಿದೆಯಾ ಅನ್ನೋದನ್ನ ತಿಳಿದುಕೊಳ್ಳಿ
ಇನ್ನೂ ಸಮರ್ಪಕವಾಗಿ ನಿತ್ಯ ನೀರು ಕುಡಿಯುವುದರಿಂದ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಅಪ್ನಿಯಾ, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿವೆಯಾ ಎಂದು ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳುವ ಮೂಲಕ ಹೆಚ್ಚು ಹಣ್ಣು ತರಕಾರಿ ತಿನ್ನುವ ಮೂಲಕ ಈ ಸಮಸ್ಯೆಯನ್ನು ದೂರ ಇಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ