/newsfirstlive-kannada/media/post_attachments/wp-content/uploads/2024/12/BNG-ACCIDENT4.jpg)
ಕರ್ನಾಟಕ ಕಂಡ ಅತ್ಯಂತ ಕರಾಳ ಶನಿವಾರ ಏನಾದರೂ ಇದ್ದಲ್ಲಿ ಅದು ಇಂದಿನ ದಿನವೇ ಆಗಿರಬೇಕು. ಇಂದು ಕರ್ನಾಟಕದಾದ್ಯಂತ ಬರೀ ಸಾವಿನ ಸುದ್ದಿಗಳೇ ಕೇಳಿ ಬರುತ್ತಿವೆ. ಅದರಲ್ಲೂ ಒಂದಕ್ಕಿಂತ ಒಂದು ಭಯಂಕರ, ಕರುಣಾಜನಕ ಹಾಗೂ ದುರಂತಗಳು. ಇಂದು ಯಮನಿಗೆ ಬಿಡುವಿಲ್ಲದ ಕೆಲಸ ಕರ್ನಾಟಕದಲ್ಲಿಯೇ ಇತ್ತೇನೋ ಅನ್ನುವ ರೀತಿಯಲ್ಲಿ ಜನರು ಹುಳು ಹುಪ್ಪಟೆಗಳಂತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಾವು ತನ್ನ ವಿಕೃತ ನರ್ತನವನ್ನು ಮಾಡಿ ಕೇಕೆ ಹಾಕಿದೆ. ಕುಟುಂಬಕ್ಕೆ ಕುಟುಂಬವೇ ಅಪಘಾತದಲ್ಲಿ ಜೀವ ಕಳೆದುಕೊಂಡಿವೆ. ಸಾವಿನ ಚಿತ್ಕಾರ ನೋಡಲೆಂದೇ ಸೂರ್ಯ ಇಂದು ಉದಯಿಸಿ ಬಂದನೇನೋ ಅನ್ನುವ ಮಟ್ಟದಲ್ಲಿ ಭೀಕರ ದುರಂತಗಳು ಸಂಭವಿಸಿವೆ
ವಿಜಯಪುರ; ಕಾರು, ಬೈಕ್ ಡಿಕ್ಕಿ , ಬೈಕ್ ಸವಾರನ ದಾರುಣ ಅಂತ್ಯ
ವಿಜಯಪುರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಹೊರಭಾಗದಲ್ಲಿ ಕಾರು ಬೈಕ್ ನಡುವೆ ಡಿಕ್ಕಿಯಾಗಿದ್ದು ಬೈಕ್ ಸವಾರ 47 ವರ್ಷದ ಉತ್ತಂಗಿ ಗ್ರಾಮದ ಬಸವರಾಜ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನೆಲಮಂಗಲದಲ್ಲಿ ಒಂದೇ ಕುಟುಂಬದ 6 ಮಂದಿ ದುರಂತ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಮಂಡ್ಯ; ಕಾರು-ಲಾರಿ ನಡುವೆ ಡಿಕ್ಕಿ ! ಮೂವರು ವಿದ್ಯಾರ್ಥಿಗಳ ದುರಂತ ಅಂತ್ಯ
ಇನ್ನು ಮಂಡ್ಯದ ರಾಷ್ಟ್ರೀಯ ಹೆದ್ದಾರೆ. 209ರಲ್ಲಿ ಭೀಕರ ರಸ್ತೆ ಅಪಘಾತವಗಿದೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಕಾರಣ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿಯಲ್ಲಿ ದುರ್ಘಟನೆ ನಡೆದಿದ್ದು ಪ್ರಣವ್, ಆಕಾಶ್, ಆದರ್ಶ್ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದು, ಪ್ರಥ್ವಿ ಎಂಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಿದೆ. ಐಐಟಿ ಕಾಲೇಜು ವಿದ್ಯಾರ್ಥಿಗಳೆಂಬ ಮಾಹಿತಿ ಬಂದಿದ್ದು ಕೆಎಸ್ಆರ್ಟಿಸಿ ಬಸ್ ಹಿಂದಿಕ್ಕುವ ಭರದಲ್ಲಿ ಲಾರಿಗೆ ಕಾರ್ ಡಿಕ್ಕಿಯಾಗಿದೆ.
ನೆಲಮಂಗಲದಲ್ಲೂ ಭೀಕರ ಅಪಘಾತ; ಸ್ಥಳದಲ್ಲಿಯೇ ಉಸಿರು ಚೆಲ್ಲಿದ 6 ಜನರು!
ಬೆಂಗಳೂರಿನ ಬಳಿ ಇರುವ ನೆಲಮಂಗದಲ್ಲಿಯೂ ಭೀಕರ ಅಪಘಾತವಾಗಿದ್ದು ಒಂದೇ ಕುಟುಂಬದ ಆರು ಜನರು ಭೀಕರ ಅಂತ್ಯವನ್ನು ಕಂಡಿದ್ದಾರೆ. 48 ವಯಸ್ಸಿನ ಚಂದ್ರ ಏಗಪ್ಪಗೋಳ, 42 ವರ್ಷದ ಗೌರಬಾಯಿ, 36 ವರ್ಷದ ವಿಜಯಲಕ್ಷ್ಮೀ, 12 ವರ್ಷದ ದೀಕ್ಷಾ, 16 ವರ್ಷದ ಜಾನ್, 6 ವರ್ಷದ ಆರ್ಯ ಈ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಮೃತರು ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಮೊರಬಗಿ ಗ್ರಾಮದವರು ಎಂದು ಗುರುತಿಸಲಾಗಿದೆ
ಇದನ್ನೂ ಓದಿ:ಮಳವಳ್ಳಿಯಲ್ಲಿ ಭೀಕರ ಅಪಘಾತ.. ಮೂವರು IIT ವಿದ್ಯಾರ್ಥಿಗಳ ದುರಂತ; ಹೃದಯ ವಿದ್ರಾವಕ ಘಟನೆ
ರಾಯಚೂರು; ಬೈಕ್-ಲಾರಿ ಡಿಕ್ಕಿ, ಮಹಿಳೆಯ ಸಾವು
ಇತ್ತ ರಾಯಚೂರಿನ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿದ್ದು 43 ವರ್ಷದ ಹುಸೇನಮ್ಮ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಒಂದು ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬೈಕ್ ಗೆ ಲಾರಿ ಡಿಕ್ಕಿ, ಇಬ್ಬರು ಮಹಿಳೆಯರು ದುರ್ಮರಣ
ಮಂಡ್ಯದಲ್ಲಿಯೇ ಇಂದು ಎರಡು ಭೀಕರ ಅಪಘಾತಗಳು ನಡೆದಿವೆ. ಅದರಲ್ಲಿ ಮಹದೇಶ್ವರ ಪುರ ಮೈಸೂರು-ಜೇವರ್ಗಿ ಹೆದ್ದಾರಿಯಲ್ಲಿ ನಡೆದ ದುರ್ಘಟನೆಯೂ ಒಂದು. ಗ್ರಾಮದ ಶೈಲಜ ಹಾಗೂ ಶಿಲ್ಪಾ ತಿರುಪತಿಗೆ ತೆರಳುವ ವೇಳೆ ಸ್ನೇಹಿತೆಯ ಬೈಕ್ನಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 19 ವರ್ಷದ ಸಂಧ್ಯಾ ಹಾಗೂ 35 ವರ್ಷದ ಶಿಲ್ಪ ಅಸುನೀಗಿದ್ದು. ಶೈಲಜ ಸ್ಥಿತಿ ಗಂಭೀರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ