/newsfirstlive-kannada/media/post_attachments/wp-content/uploads/2024/12/GOLDEN-CHRISMAS-TREE-1.jpg)
ಕ್ರಿಸ್​ಮಸ್​ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನ ಎಲ್ಲ ನಗರಗಳು ಕ್ರಿಸ್​ಮಸ್ ಆಚರಣೆಗೆ ಸಜ್ಜಾಗಿ ನಿಂತಿವೆ. ಅದರಲ್ಲೂ ಜರ್ಮನಿಯಲ್ಲಿ ನಿರ್ಮಾಣಗೊಂಡಿರುವ ಚಿನ್ನದ ಕ್ರಿಸ್​ಮಸ್​ ಟ್ರೀ ಈಗ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. 2024 ವಿಯೆನ್ನಾ ಫಿಲ್ಹಾರ್ಮೋನಿಕ್ ಚಿನ್ನದ ನಾಣ್ಯಗಳಿಂದ ಇದು ಸಿದ್ಧಗೊಂಡಿದೆ. ಚಿನ್ನದಿಂದ ಸಿದ್ಧಗೊಂಡಿರುವ ಕ್ರಿಸ್​ಮಸ್ ಬರೋಬ್ಬರಿ 63 ಕೆಜಿ ತೂಕ ಇದೆ. ಇದನ್ನ ತಯಾರಿಸಲು ಒಟ್ಟು 5.5 ಮಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿಗಳಲ್ಲಿ ಸುಮಾರು 47 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎಂದು ಹೇಳಲಾಗುತ್ತಿದೆ.
ಈ ಸ್ವರ್ಣ ಲೇಪಿತ ಕ್ರಿಸ್​ಮಸ್ ಟ್ರೀಯನ್ನು ಮೂನಿಚ್ ಮೂಲದ ಚಿನ್ನದ ವ್ಯಾಪಾರಿ ಪ್ರೊ ಅರುಮ್ ಎಂಬುವವರು ನಿರ್ಮಿಸಿದ್ದಾರೆ. ಚಿನ್ನವನ್ನು ಮರಳಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಸಾವಿರ ವರ್ಷಗಳಾದರು ಅದರ ಮೌಲ್ಯ ಹಾಗೆಯೇ ಇರುತ್ತದೆ. ಈ ಒಂದು ಕ್ರಿಸ್​​ಮಸ್ ಕ್ರಿಸ್​ಮಸ್​ನ ಮಹಿಮೆಯನ್ನು ಮುಂದಿನ ತಲೆಮಾರುಗಳಿಗೆ ಗುರುತಾಗಿ ನಿಲ್ಲುವ ಒಂದು ವಿಶೇಷ ಗಿಡಿವಾಗಿ ನಿಲ್ಲಲಿದೆ ಎಂದು ಪ್ರೊ ಅರುಮ್​ ಅವರ ವಕ್ತಾರ ಬೆಂಜಮಿನ್ ಸುಮ್ಮಾ ಅವರು ಹೇಳಿದ್ದಾರೆ.
ಬರೋಬ್ಬರಿ 10 ಅಡಿ ಎತ್ತರವಿರುವ ಈ ಗಿಡವು ಮಾರಲು ಅಂತ ನಿರ್ಮಿಸಿದ್ದಲ್ಲ. ಇದನ್ನು ಮೂನಿಚ್​ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ನಮ್ಮ ಕಂಪನಿಯ 35ನೇ ವಾರ್ಷಿಕೋತ್ಸವದ ಗೌರವವಾಗಿ ಗುರುತಿಸಲ್ಪಡಲಿದೆ. ಚಿನ್ನದ ಮೌಲ್ಯವು ಎಂತಹದು ಎಂಬುದನ್ನು ತಿಳಿಸಲು ಈ ರೀತಿಯಾದ ಒಂದು ಯೋಜನೆ ಮಾಡಲಾಗಿದೆ ಎಂದು ಬೆಂಜಮಿನ್ ಸುಮ್ಮಾ ಹೇಳುತ್ತಾರೆ.
ಇದು ವಿಶ್ವದ ಅತ್ಯಂತ ದುಬಾರಿ ಟ್ರೀ ಎಂದು ಹೇಳಲಾಗುತ್ತಿದೆ, ಆದ್ರೆ ಅದು ಸುಳ್ಳು, 2010ರಲ್ಲಿ ಅಬುದಾಬಿಯ ಎಮಿರೆಟ್ಸ್​ ಪ್ಯಾಲೆಸ್​ನಲ್ಲಿ ನಿರ್ಮಿಸಲಾಗಿದ್ದ ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕ್ರಿಸ್​ಮಸ್ ಟ್ರೀ ಅತ್ಯಂತ ದುಬಾರಿ ಕ್ರಿಸ್​ಮಸ್​ ಟ್ರೀಯಾಗಿದೆ. ಅದನ್ನು 181 ಚಿನ್ನದ ಆಭರಣಗಳಿಂದ ಸಿದ್ಧಗೊಳಿಸಲಾಗಿತ್ತು. ಅದರ ಎತ್ತರ 43.2 ಫೀಟ್​ನಷ್ಟು ಇತ್ತು ಇದು ಗಿನ್ನಿಸ್ ಬುಕ್ ರೆಕಾರ್ಡ್​​ನಲ್ಲಿ ವಿಶ್ವ ದಾಖಲೆಯಾಗಿ ಸೇರ್ಪಡೆಯಾಗಿದೆ.
ಇದೇ ರೀತಿ ಈ ಹಿಂದೆ 80 ಅಡಿ ಎತ್ತರದ ಕ್ರಿಸ್​ಮಸ್ ಟ್ರೀಯೊಂದು ದೊಡ್ಡ ಸುದ್ದಿ ಮಾಡುತ್ತು. ಇದೆ ವರ್ಷದಲ್ಲಿ ಒಂದು ಕಲಾಕೃತಿಯಾಗಿ ಈ ಒಂದು ಗಿಡವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಮೆರಿಕಾ ಮೂಲದ ಕಲೆಗಾರ ಪೌಲ್ ಮ್ಯಾಕಾರ್ತಿ ಇದನ್ನು ನಿರ್ಮಿಸಿದ್ದು. ಕ್ರಿಎಸ್​ಮಸ್ ಟ್ರೀ ಮೇಲೆ ಲೈಂಗಿಕ ಚಿನ್ಹೆಯನ್ನು ಸೂಚಿಸುವ ಆಟಿಗೆಯನ್ನು ಇಟ್ಟು ಭಾರೀ ಟೀಕೆಗೆ ಒಳಗಾಗಿದ್ದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ