/newsfirstlive-kannada/media/post_attachments/wp-content/uploads/2025/03/70-YEAR-WRESLTER.jpg)
ಇಂದಿನ ಕಾಲದಲ್ಲಿ 35 ವರ್ಷ ದಾಟಿದರೆ ಸಾಕು ಫಿಟ್ನೆಸ್ ಹೇಗೆ ಕಾಯ್ದುಕೊಳ್ಳುವುದು. ಯಾವುದೇ ಬಿಪಿ, ಶುಗರ್ ಬರದಂತೆ ಹೇಗೆ ಇರುವುದು ಎಂಬುದರ ಬಗ್ಗೆಯೇ ಚಿಂತೆ ಮಾಡುತ್ತಿರುತ್ತಾರೆ. ಆದ್ರೆ ಬಿಹಾರದ 70 ವರ್ಷದ ಪೈಲ್ವಾನರೊಬ್ಬರು ಯುವಕರು ಕೂಡ ನಾಚುವಂತೆ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರು ದಿನಕ್ಕೆ ಎಷ್ಟು ಲೀಟರ್ ಹಾಲು ಕುಡಿಯುತ್ತಾರೆ ಎಂಬುದು ಗೊತ್ತಾದ್ರೆ ಸಾಕು ಎಂತವರು ಕೂಡ ಬೆಚ್ಚಿ ಬೀಳುತ್ತಾರೆ. ಈ ಇಳಿ ವಯಸ್ಸಿನಲ್ಲಿ ಇಷ್ಟು ಲೀಟರ್ ಹಾಲು ಕುಡಿದು ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಾ ಎಂದು ದಂಗಾಗಬೇಕು ಹಾಗೆ ಇದೆ ಅವರ ಬದುಕಿನ ಹಾಗೂ ಆಹಾರ ಶೈಲಿಯಿದೆ.
ಇದನ್ನೂ ಓದಿ: ಭಾರತದಲ್ಲಿರುವ ಅತ್ಯಂತ ಶ್ರೀಮಂತ ರೈಲ್ವೆ ನಿಲ್ದಾಣ ಯಾವುದು..? ಮುಂಬೈ, ಚೆನ್ನೈ, ಬೆಂಗಳೂರಲ್ಲ! ಮತ್ತೆ ಎಲ್ಲಿದೆ?
ಬಿಹಾರದ ಗೋಪಾಲಗಂಜ್ ಜಿಲ್ಲೆಯ ಮಾಂಝಾ ಪ್ರಖಂಡನ ದೇವಪುರದಲ್ಲರುವ ಈ ದಂಡಿ ಪೈಲ್ವಾನರ ಬಗ್ಗೆ ಬಿಹಾರ ಸೇರಿದಂತೆ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಚರ್ಚೆಯಾಗುತ್ತದೆ. ಇವರು ತಮ್ಮ 70ನೇ ವಯಸ್ಸಿನಲ್ಲಿ ನಿತ್ಯ 8 ಲೀಟರ್ ಹಾಲು ಕುಡಿಯುತ್ತಾರೆ. ನಿತ್ಯ ನಾಲ್ಕು ಗಂಟೆ ವ್ಯಾಯಾಮ ಮಾಡುತ್ತಾರೆ. ಬಾಂಕಾ ಪೈಲ್ವಾನ್ ಇಂದಿಗೂ ಕೂಡ ಬನ್ನಿ ಕುಸ್ತಿ ಆಡೋಣ ಅಂದ್ರೆ ಅಖಾಡಕ್ಕೆ ಇಳಿದು ತೊಡೆ ತಟ್ಟಿ ಎಂತವರೊಂದಿಗೂ ಕೂಡ ಕೈ ಕೈ ಮಿಲಾಯಿಸುತ್ತಾರೆ.
ಇದನ್ನೂ ಓದಿ: ಭಾರತದ ಮತ್ತೊಂದು ರಾಜ್ಯದಲ್ಲಿ ಸಿಕ್ಕಿದೆ ಅಪಾರ ಬಂಗಾರದ ನಿಕ್ಷೇಪ ಪತ್ತೆ.. ಯಾವ ರಾಜ್ಯ ಅಂತ ಗೊತ್ತಾ?
1955ರಲ್ಲಿ ಜನಿಸಿದ ಬಾಂಕಾ ಪೈಲ್ವಾನ್ 1974ರಲ್ಲಿಯೇ ಕುಸ್ತಿಯ ಅಖಾಡಕ್ಕೆ ಇಳಿದವರು. ಆ ಕಾಲದಲ್ಲಿ ಪ್ರತಿದಿನ 15 ಲೀಟರ್ ಹಾಲು ಕುಡಿಯುತ್ತಿದ್ದರಂತೆ. ನಿತ್ಯ ಮುಂಜಾನೆ ಅಖಾಡದಲ್ಲಿ 4 ಗಂಟೆ ಕಸರತ್ತು ಮಾಡುತ್ತಿದ್ದರಂತೆ. ಬಸ್ಕಿ ಹೊಡೆಯುವುದು, ಸಾಮು ಹೊಡೆಯುವುದರೊಂದಿಗೆ ಹಲವು ವ್ಯಾಯಾಮ ಮಾಡುತ್ತಿದ್ದರಂತೆ. ಬಸ್ಕಿ ಹೊಡೆಯುವುದರೊಂದಿಗೆ ಐದು ಸಾವಿರ ಕಸರತ್ತುಗಳನ್ನು ನಾಲ್ಕು ಗಂಟೆಗಳಲ್ಲಿ ಮಾಡುತ್ತಿದ್ದಂತೆ . ಅದರೊಂದಿಗೆ ನಿತ್ಯ 20 ಪೈಲ್ವಾನರೊಂದಿಗೆ ಕುಸ್ತಿ ಆಡುತ್ತಿದ್ದರಂತೆ.
ಈಗ ಬಾಂಕಾ ಪೈಲ್ವಾನ್ಗೆ 70 ವರ್ಷಗಳಾಗಿವೆ. ಹೀಗಾಗಿ ಅವರು ಕುಡಿಯುವ ಹಾಲಿನ ಪ್ರಮಾಣವೂ ಕೂಡ ಕಡಿಮೆಯಾಗಿದೆ. ಆದ್ರೆ ನಿತ್ಯ ಕಮ್ಮಿಯಂದ್ರು 6 ಲೀಟರ್ ಹಾಲು ಕುಡಿಯುತ್ತಾರೆ. ಒಂದೊಂದು ಬಾರಿ ಅದು 8 ಲೀಟರ್ಗೂ ತಲುಪುತ್ತದೆ. ಯಾವಾಗ ಮನೆಯಲ್ಲಿಯೇ ಇರುತ್ತಾರೋ ಆಗ ಹಾಲು ಕುಡಿಯುವ ಪ್ರಮಾಣ ಹೆಚ್ಚುತ್ತದೆ. 1983ರಲ್ಲಿಯೇ ಬಾಂಕಾ ಪೈಲ್ವಾನ್ ಕುಸ್ತಿಗಳನ್ನು ಗೆಲ್ಲಲು ಆರಂಭಿಸಿದರು. 2002ರಲ್ಲಿ ಅವರಿಗೆ ಜಿಲ್ಲೆಯ ಕುಸ್ತಿ ಕೇಸರಿ ಎಂಬ ಬಿರುದನ್ನು ಕೂಡ ನೀಡಿ ಸನ್ಮಾನಿಸಲಾಯ್ತು. ಅವರಿಗೆ ಈ ವೇಳೆ ಗದೆಯನ್ನು ನೀಡಿ ಸನ್ಮಾನಿಸಲಾಯ್ತು.
ಇನ್ನು ಇವರು ಊಟ ಮಾಡುವುದೇ ಕಡಿಮೆ ಅವಶ್ಯಕವಾಗಿ ಬೇಕಾಗುವ ಪೋಷಕಾಂಶಗಳನ್ನು ಮಾತ್ರ ಸೇವಿಸುತ್ತಾರೆ. ಹಾಲಿಗಾಗಿಯೇ ಅವರು ಐದು ಹಸುಗಳನ್ನು ಸಾಕಿದ್ದಾರೆ. ಅವುಗಳ ಪಾಲನೆ ಪೋಷಣೆಯನ್ನು ಕೂಡ ಇವರೇ ಮಾಡುತ್ತಾರೆ. ಪ್ರತಿ ದಿನ ರಾತ್ರಿ ಪನ್ನಿರ್ನೊಂದಿಗೆ ಎರಡು ರೋಟಿ ಸೇವಿಸುತ್ತಾರೆ. ದಿನದಲ್ಲಿ ಹಣ್ಣುಗಳನ್ನು ಹೆಚ್ಚು ತಿನ್ನುತ್ತಾರೆ ಹಾಗೂ ಹಾಲಿನೊಂದಿಗೆ ಗೋಡಂಬಿ ಬಾದಾಮಿ ಸೇವಿಸುತ್ತಾರೆ. 1955ರಲ್ಲಿ ಜನಿಸಿದ ಇವರು 1968ರಲ್ಲಿ ಮದುವೆಯಾಗುತ್ತಾರೆ. ಅದಿನಿಂದ ಇಂದಿನವರೆಗೂ ಇದೇ ಡಯೆಟ್ ಪಾಲಿಸುತ್ತಾ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ