ಆರಂಭದದಲ್ಲಿ ಸೈಡ್​ ಡಾನ್ಸರ್, ಈಗ 15 ಕೋಟಿ ಸಂಭಾವನೆ ಪಡೆಯುವ ನಟಿ.. ನಾವು ಹೇಳುತ್ತಿರುವುದು ಯಾರ ಬಗ್ಗೆ ಗೊತ್ತಾ?

author-image
Gopal Kulkarni
Updated On
ಆರಂಭದದಲ್ಲಿ ಸೈಡ್​ ಡಾನ್ಸರ್, ಈಗ 15 ಕೋಟಿ ಸಂಭಾವನೆ ಪಡೆಯುವ ನಟಿ.. ನಾವು ಹೇಳುತ್ತಿರುವುದು ಯಾರ ಬಗ್ಗೆ ಗೊತ್ತಾ?
Advertisment
  • ಅಂದು ಸೈಡ್ ಡಾನ್ಸರ್ ಆಗಿದ್ದ ಈ ನಟಿ ಈಗ ಪಡೆಯುತ್ತಿರುವ ಸಂಭಾವನೆ ಎಷ್ಟು?
  • ಮೊದಲ ಸಿನಿಮಾಗೆ ಈ ನಟಿ ಪಡೆದ ಸಂಭಾವನೆ ಮತ್ತು ಶಾಕ್​ ಉಂಟುಮಾಡುತ್ತೆ
  • ಕನ್ನಡ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಬಂದ ನಟಿ ಬೆಳೆದ ಎತ್ತರ ಎಂತಹುದು?

ಯಶಸ್ಸು ಎನ್ನುವದೇ ಏಣಿ ತರಹ. ನಾವು ಯಶಸ್ಸಿನ ತುತ್ತತುದಿ ಮುಟ್ಟಲು ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಲೇ ಸಾಗಬೇಕು. ದಿಢೀರ್​ ಸಕ್ಸಸ್ ಯಾರಿಗೂ ಸಿಗುವಂತದ್ದಲ್ಲ, ಯಶಸ್ಸು ಶ್ರಮವನ್ನು ಬೇಡುತ್ತದೆ. ಶ್ರದ್ಧೆಯನ್ನು ಬೇಡುತ್ತದೆ. ಅದಕ್ಕೆ ತನ್ನದೇ ಆದ ಸಮಯ ಬೇಡುತ್ತದೆ. ಅದೆಲ್ಲವನ್ನೂ ನಾವು ನೀಡಿದಾಗಲೆ ಏಣಿಯ ಕಟ್ಟಕಡೆಯ ಮೆಟ್ಟಿಲಮೇಲೆ ನಿಂತು ಯಶಸ್ಸಿನ ಪತಾಕೆ ಹಾರಿಸಲು ಸಾಧ್ಯ. ಈ ನಟಿಯ ಜೀವನದಲ್ಲಿಯೂ ಕೂಡ ಆಗಿದ್ದು ಅದೇ, ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ಒಬ್ಬರಾಗಿರುವ ಇವರು. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಸೈಡ್ ಡಾನ್ಸರ್ ಆಗಿ ಕೆಲಸ ಮಾಡಿದ್ದಾರೆ.

publive-image

8 ವರ್ಷದ ಬಾಲಕಿ ಇದ್ದಾಗಲೇ ಈ ನಟಿ ಚೈಲ್ಡ್​ ಮಾಡಲಿಂಗ್​ನಲ್ಲಿ ಹವಾ ಸೃಷ್ಟಿಸಿದ್ದರು. ನಂತರ ಹಲವು ಬ್ರ್ಯಾಂಡ್ ಉತ್ಪನ್ನಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆಮಾತಾದರು. ಅದರಲ್ಲೂ ಲಿರಿಲ್ ಸೋಪ್​ನ ಜಾಹಿರಾತಿನಿಂದ ದೊಡ್ಡದಾಗಿ ಜನಪ್ರಿಯಗೊಂಡ ನಟಿ ಈಗ ಬಾಲಿವುಡ್​ನಲ್ಲಿ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯ ನಾವು ಹೇಳುತ್ತಿರುವುದ ಯಾರ ಬಗ್ಗೆ ಅಂತ ನಿಮಗೆ ಒಂದು ಅಂದಾಜು ಸಿಕ್ಕಿರಬಹುದು ನಿಮ್ಮ ಊಹೆ ನಿಜ, ನಾವು ಹೇಳುತ್ತಿರುವುದು ಬಾಲಿವುಡ್​ನ ಸೂಪರ್​ಸ್ಟಾರ್ ನಟಿ ದೀಪಿಕಾ ಪಡುಕೋಣೆ ಬಗ್ಗೆಯೇ.

ಇದನ್ನೂ ಓದಿ:ಔಟ್ ಆಫ್ ಸಿಲಬಸ್ ಇಂದು ಅದ್ಧೂರಿ ಬಿಡುಗಡೆ; ಕನ್ನಡ ಸಿನಿಪ್ರಿಯರಿಗೆ ಡಬಲ್ ಧಮಾಕ!

publive-image

ದೀಪಿಕಾ ಪಡುಕೋಣೆಯ ಸಿನಿಮಾ ಪ್ರಯಾಣ ಆರಂಭವಾಗಿದ್ದೇ ಕನ್ನಡ ಸಿನಿಮಾದಿಂದ, 2006ರಲ್ಲಿ ಐಶ್ವರ್ಯ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶ ಪಡೆದರು. ಅಲ್ಲಿಯವರೆಗೆ ದೀಪಿಕಾ ಪಡುಕೋಣೆ, ಸೈಡ್ ಡಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಐಶ್ವರ್ಯ ಸಿನಿಮಾದ ಬಳಿಕ ಅವರಿಗೆ ಬಾಲಿವುಡ್​ನಲ್ಲಿ ಶಾರುಖ್​ ಖಾನ್ ಜೊತೆ ನಟಿಸಲು 2007ರಲ್ಲಿ ಅವಕಾಶ ಸಿಕ್ತು. ಆ ಸಿನಿಮಾದ ಹೆಸರು ಓಂ ಶಾಂತಿ ಓಂ. ಈ ಸಿನಿಮಾ ಮೊಟ್ಟ ಮೊದಲ ಬಾರಿಗೆ 100 ಕೋಟಿ ಕ್ಲಬ್​ಗೆ ಸೇರಿದ ಮೊದಲ ಬಾಲಿವುಡ್​ ಮೂವಿ ಆಗಿ ಹೊರಹೊಮ್ಮಿತು ಆ ಮಟ್ಟದ ಯಶಸ್ಸನ್ನು ಈ ಸಿನಿಮಾ ಕಂಡಿತ್ತು.

ಇದನ್ನೂ ಓದಿ:ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಮತ್ತೆ ವಾರ್! ಬಾಸಿಸಂ ಕಾಲ‌ ಮುಗಿತಾ? VIDEO

publive-image

ಓ ಶಾಂತಿ ಓಂ ಸಿನಿಮಾದ ಬಳಿಕ ದೀಪಿಕಾ ಪಡುಕೋಣೆ ಹಿಂದಿರುಗಿ ನೋಡಲೇ ಇಲ್ಲ. ಇಂದು ದೀಪಿಕಾ ಪಡುಕೋಣೆ ಕೋಟಿ ಕೋಟಿ ಹಣ ಗಳಿಕೆ ಮಾಡಿದ ಟಾಪ್ ಸ್ಟಾರ್ ನಟಿಯರ ನಡುವೆ ಕಾಣಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಸಿನಿಮಾದಲ್ಲಿ ದೊಡ್ಡ ಹೆಸರು ಇರದ ಈ ನಟಿ ಓಂ ಶಾಂತಿ ಓಂಗಾಗಿ ಪಡೆದ ಸಂಭಾವನೆ ಜಸ್ಟ್​ 2 ಸಾವಿರ ರೂಪಾಯಿ ಮಾತ್ರವಂತೆ. ಇದೇ ಸಿನಿಮಾ ದೀಪಿಕಾ ಬಾಳಲ್ಲಿ ದೊಡ್ಡ ತಿರುವನ್ನು ತಂದುಕೊಟ್ಟಿದ್ದು. ಸದ್ಯ ದೀಪಿಕಾ ಒಂದು ಸಿನಿಮಾ ನಟನೆಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದೀಪಿಕಾ ಇತ್ತೀಚೆಗೆ ಸಾವಿರ ಕೋಟಿ ಕ್ಲಬ್ ಸೇರಿದ ಜವಾನ್ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಮತ್ತೊಮ್ಮೆ ಜೋಡಿಯಾಗಿ ನಟಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment