ಡಿವೋರ್ಸ್​ ನೀಡಲು ಮುಂದಾದ ಪತ್ನಿ ವಿರುದ್ಧ ಪತಿ ಸೇಡು ಹೇಗಿತ್ತು? ದಂಡ ಕಟ್ಟಿ ಕಟ್ಟಿಯೇ ಸುಸ್ತಾದ ಹೆಂಡತಿ!

author-image
Gopal Kulkarni
Updated On
ಡಿವೋರ್ಸ್​ ನೀಡಲು ಮುಂದಾದ ಪತ್ನಿ ವಿರುದ್ಧ ಪತಿ ಸೇಡು ಹೇಗಿತ್ತು? ದಂಡ ಕಟ್ಟಿ ಕಟ್ಟಿಯೇ ಸುಸ್ತಾದ ಹೆಂಡತಿ!
Advertisment
  • ಗಂಡ ಹೆಂಡತಿಯ ನಡುವೆ ಶುರುವಾಯ್ತು ದಂಡದ ಯುದ್ಧ
  • ತಾನು ಮಾಡದ ತಪ್ಪಿಗೆ ದಂಡ ಕಟ್ಟಿ ಕಟ್ಟಿ ಸುಸ್ತಾದ ಹೆಂಡತಿ
  • ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳು ಗಂಡ ಮಾಡಿದ ಉಪಾಯವೇನು?

ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೂ ಎಂಬ ಗಾದೆಯೇ ಇದೆ. ಆದ್ರೆ ಇಲ್ಲೊಂದು ಘಟನೆ ಗಂಡ ಹೆಂಡತಿಯ ಜಗಳ ದಂಡ ಕಟ್ಟುವವರೆಗೆ ಹೋಗಿದೆ. ಬಿಹಾರದ ಪತಿ ಪತ್ನಿಯರ ಜಗಳ ಡಿವೋರ್ಸ್ ವರೆಗೆ ಹೋಗಿದ್ದು ಅದು ಕೋರ್ಟ್​​ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ.ಪತಿಯನ್ನು ತೊರೆದು ತವರು ಮನೆಗೆ ಹೋದ ಹೆಂಡತಿಯ ವಿರುದ್ಧ ಗಂಡ ಸೇಡು ತೀರಿಸಿಕೊಳ್ಳಲು ಹೊಸ ಹಾದಿಯನ್ನೇ ಹಿಡಿದಿದ್ದಾನೆ ಇಂತಹದೊಂದು ವಿಚಿತ್ರ ಘಟನೆ ಬಿಹಾರದ ಪಟ್ನಾದ ಮುಜಾಫುರಾರಪುರ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಂಡತಿ ಮನೆ ಬಿಟ್ಟು ಹೋದ ಬಳಿಕ ಪತಿ ಬೈಕ್​​​ನಲ್ಲಿ ಊರೆಲ್ಲಾ ತಿರುಗಿದ್ದಾನೆ ಬೇಕಾಬಿಟ್ಟಿ ಟ್ರಾಫಿಕ್ ರೂಲ್ಸ್ ಉದ್ದೇಶಪೂರ್ವಕವಾಗಿಯೇ ಬ್ರೇಕ್ ಮಾಡಿದ್ದಾನೆ. ಪಾಟ್ನಾದ ತುಂಬಾ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಪತಿ ಬೈಕ್ ಓಡಿಸುತ್ತಿದ್ದರೆ ಅದಕ್ಕೆ ಹಾಕಲಾಗಿರುವ ದಂಡದ ಮೊತ್ತದ ಸಂದೇಶ ಅವನ ಪತ್ನಿಯ ಮೊಬೈಲ್​ಗೆ ಬಂದು ಬೀಳುತ್ತಿತ್ತು ಕಾರಣ ಗಂಡನ ಓಡಿಸುತ್ತಿದ್ದ ಬೈಕ್ ಹೆಂಡತಿಯ ಹೆಸರಿನಲ್ಲಿ ರಿಜಿಸ್ಟರ್ ಆಗಿತ್ತು. ಆರಂಭದಲ್ಲಿ ಪತ್ನಿ ಹೀಗೆ ಬಂದ ಫೈನ್ ಚಲನ್​ಗಳಿಗೆಲ್ಲಾ ದಂಡ ಕಟ್ಟಿದಳು. ಆದ್ರೆ ಮೊಬೈಲ್​ಗೆ ಬರುವ ದಂಡದ ಚಲನ್​ಗಳ ಸಂಖ್ಯೆ ಹೆಚ್ಚಾದಾಗ ಆಕೆ ರೊಚ್ಚಿಗೆದ್ದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ:ಹುಡುಗರೇ ಎಚ್ಚರ.. ಸಿಬಿಲ್ ಸ್ಕೋರ್‌ ಕಡಿಮೆ ಇದ್ರೂ ಮದುವೆಗೆ ಹುಡುಗಿ ಸಿಗಲ್ಲ; ಇದು ತಮಾಷೆ ಅಲ್ವೇ ಅಲ್ಲ!

ಖಾಜಿ ಮೊಹಮ್ಮದಪುರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಜಫಾರಪುರ್​ನ ಮಹಿಳೆ ಪಾಟ್ನಾದ ಯುವಕನನ್ನು ಕಳೆದ ವರ್ಷ ಮದುವೆಯಾಗಿದ್ದಳು. ಮದುವೆಯ ಆರಂಭದಲ್ಲಿ ಹುಡುಗಿಯ ತಂದೆ ಮದುಮಗನಿಗೆ ಒಂದು ಬೈಕ್ ಗಿಫ್ಟ್ ನೀಡಿದ್ದರು. ಆ ಬೈಕ್ ಅವರ ಮಗಳ ಹೆಸರ ಮೇಲೆ ರಿಜಿಸ್ಟರ್ ಆಗಿತ್ತು. ಮದುವೆಯಾಗಿ ಒಂದು, ಒಂದೂವರೆ ತಿಂಗಳಲ್ಲಿ ಗಂಡ ಹೆಂಡತಿಯ ನಡುವೆ ವಿವಾದಗಳು ಶುರುವಾದವು. ಪತ್ನಿ ಪದ ಪದೇ ತವರು ಮನೆಗೆ ಹೋಗಿ ಕುಳಿತುಕೊಳ್ಳಲು ಆರಂಭಿಸಿದಳು. ದಿನ ಕಳೆದಂತೆ ಸನ್ನಿವೇಶಗಳು ಗಂಭೀರಾಗಿ ಕೊನೆಗೆ ಇಬ್ಬರ ಜಗಳ ಡಿವೋರ್ಸ್ ಹಂತಕ್ಕೆ ಹೋಗಿ ಕೋರ್ಟ್ ಮೆಟ್ಟಿಲೇರಲಾಯಿತು.

ಇದನ್ನೂ ಓದಿ:ಕುಂಭಮೇಳ ಮುಗಿಯುತ್ತಿದ್ದಂತೆ ನಾಗಾಸಾಧುಗಳು ಎಲ್ಲಿಗೆ ಹೋಗುತ್ತಾರೆ? ನಿಗೂಢ, ಅಚ್ಚರಿಯ ವಿಷಯಗಳು ಇಲ್ಲಿದೆ!

ಇದರಿಂದ ರೊಚ್ಚಿಗೆದ್ದ ಗಂಡ ಅವಳ ಹೆಸರಲ್ಲಿದ್ದ ಬೈಕ್ ಏರಿ ಪಾಟ್ನಾ ತುಂಬಾ ಸುತ್ತಾಡತೊಡಗಿದ ಉದ್ದೇಶಪೂರ್ವಕವಾಗಿ ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿದ. ಪ್ರತಿ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದಾಗ ಪತ್ನಿಯೇ ದಂಡ ಕಟ್ಟಬೇಕಾದ ಪರಿಸ್ಥಿತಿ ಬರಲು ಆರಂಭವಾಯ್ತು. ಯುವತಿಯ ತಂದೆ ಹೇಳುವ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಒಟ್ಟು 4 ದಂಡದ ಚಲನ್​​ಗಳು ಅವರ ಮನೆಗೆ ಬಂದಿವೆಯಂತೆ ಎಲ್ಲವೂ ಅವಳ ಮಗಳ ಮೊಬೈಲ್​​ಗೆ ಬರುತ್ತಿದ್ದವಂತೆ. ಆರಂಭದಲ್ಲಿ ಯುವತಿ ದಂಡ ಕಟ್ಟಿದ್ದಾಳೆ. ಆದ್ರೆ ಅದು ಬರು ಬರುತ್ತಾ ವಿಪರೀತಮಟ್ಟಕ್ಕೆ ಹೋದಾಗ ಅನಿವಾರ್ಯವಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ದಂಡ ಕಟ್ಟಿ ಕಟ್ಟಿ ಸುಸ್ತಾದ ಪತ್ನಿ ಕೂಡಲೇ ತನ್ನ ಪತಿಗೆ ಕರೆ ಮಾಡಿ ಬೈಕ್ ವಾಪಸ್ ನೀಡುವಂತೆ ಹೇಳಿದ್ದಾಳೆ. ಇದಕ್ಕೆ ಪತಿರಾಯ ಸುತಾರಂ ಒಪ್ಪಿಲ್ಲ, ಎಲ್ಲಿಯವರೆಗೂ ನಮ್ಮ ಡಿವೋರ್ಸ್​ ಸಂಪೂರ್ಣವಾಗಿ ಮುಕ್ತಾಯಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ನಾನು ಬೈಕ್ ಹಿಂದಿರುಗಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಬೇರೆ ದಾರಿ ಕಾಣದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿ ದೂರು ನೀಡಲು ಹೋಗಿದ್ದಾಳೆ. ಪಾಟ್ನಾ ಟ್ರಾಫಿಕ್ ಪೊಲೀಸರು ಲೋಕಲ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಖಾಜಿ ಮೊಹಮ್ಮದಪುರ ಪೊಲೀಸ್ ಠಾಣೆಗೆ ಹೋದ ಯುವತಿ ಹಾಗೂ ಆಕೆಯ ತಂದೆ ತನ್ನ ಹೆಸರಿನಲ್ಲಿರುವ ಬೈಕ್ ಈಗಲೂ ನನ್ನ ಪತಿಯ ಸ್ವಾಧೀನದಲ್ಲಿದೆ ಎಂದು ದೂರಿದ್ದಾಳೆ.ಪೊಲೀಸರು ಅಕೆಗೆ ತನ್ನ ಪತಿ ತನ್ನ ಹೆಸರಲ್ಲಿರುವ ಬೈಕ್ ಓಡಿಸುತ್ತಿದ್ದಾನೆ ಎಂದು ಸಾಕ್ಷಿ ಸಮೇತ ಅಫಿಡವಿಟ್​ ಸಲ್ಲಿಸಲು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment