/newsfirstlive-kannada/media/post_attachments/wp-content/uploads/2025/03/SPECIAL-EYES.jpg)
ಜಗತ್ತು ಎಂಬುದೇ ಒಂದು ವೈಚಿತ್ರ್ಯದ ಗೂಡು. ಅದರ ಸೃಷ್ಟಿಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅನೇಕ ವಿಚಿತ್ರಗಳನ್ನು, ಅನೇಕ ಆಶ್ಚರ್ಯಕರ ಸಂಗತಿಗಳನ್ನು ಆಗಾಗ ಸೃಷ್ಟಿ ಮಾಡುತ್ತಲೇ ಇರುತ್ತದೆ. ಅದು ಪ್ರಕೃತಿಯಲ್ಲಿಯೇ ಆಗಿರಬಹುದು ಅಥವಾ ಜೀವ ಜಗತ್ತಿನಲ್ಲಿಯೇ ಆಗಿರಬಹುದು. ತರ್ಕಕ್ಕೆ ನಿಲುಕದ ವೈಚಿತ್ರ್ಯಗಳು ಸಂಭವಿಸುತ್ತವೆ. ವಿಸ್ಮಯಗಳನ್ನು ಹುಟ್ಟು ಹಾಕುತ್ತವೆ. ಆ ರೀತಿಯ ವಿಸ್ಮಯಕಾರಿ ಘಟನೆಯೊಂದು ಉತ್ತರಪ್ರದೇಶದ ಬುಲಂದಶಹರ್ನಲ್ಲಿ ನಡೆದಿದೆ. ಈ ವಿಸ್ಮಯಕ್ಕೆ ಕಾರಣ ಒಂದೂವರೆ ವರ್ಷದ ಬಾಲಕನ ಕಣ್ಣು.
ಬುಲಂದಶಹರ್ನ ಒಂದೂವರೆ ವರ್ಷದ ಬಾಲಕ ಅರ್ಶ್ ಎಂಬುವವನ ಕುರಿತು ಈಗ ದೊಡ್ಡ ಚರ್ಚೆಗಳು ಆಗುತ್ತಿವೆ. ಕೇವಲ ಅರ್ಶ್ನ ಕುರಿತು ಅಲ್ಲ ಅವನ ವಿಸ್ಮಯದ ಕಣ್ಣುಗಳು ದೊಡ್ಡ ಸುದ್ದಿಯಾಗಿವೆ. ಈ ಬಾಲಕನ ಕಣ್ಣುಗಳು ಅವನು ಯಾವ ರೀತಿಯ ಬಟ್ಟೆ ಹಾಕಿರುತ್ತಾನೋ ಆ ಬಟ್ಟೆಯ ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಈ ವಿಸ್ಮಯಕಾರಿ ಕಣ್ಣಿನ ಬಾಲಕನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
View this post on Instagram
ಕೇತವಾಲಿ ನಗರ ಕ್ಷೇತ್ರದ ಬಿಸಾ ಕಾಲೋನಿಯಲ್ಲಿರುವ ಅರ್ಶ್ ತಂದೆ ಅಸಲಂ ಪ್ಲಂಬರಿಂಗ್ ಕೆಲಸವನ್ನು ಮಾಡುತ್ತಾರೆ. ಅವನ ಕಣ್ಣುಗಳ ಬಣ್ಣ ಹೀಗೆ ಬದಲಾಗುವುದನ್ನು ಕಂಡು ಬೆಚ್ಚಿದ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಿ ವೈದ್ಯರ ಹತ್ತಿರ ತೋರಿಸಿದರು. ವೈದ್ಯರು ಹೇಳುವ ಪ್ರಕಾರ ಬಾಲಕನ ಆರೋಗ್ಯದಲ್ಲಿ ಯಾವುದೇ ತೊಂದರೆಗಳಿಲ್ಲ ಆತ ಸ್ವಸ್ಥವಾದ ಆರೋಗ್ಯವನ್ನು ಹೊಂದಿದ್ದಾನೆ ಎಂದು ಹೇಳಿದ್ದಾರೆ. ಕಣ್ಣಿನಲ್ಲಿಯೂ ಕೂಡ ಯಾವುದೇ ರೀತಿಯ ಸಮಸ್ಯೆಗಳಾಗಲಿ ದೋಷಗಳಾಗಲಿ ಇಲ್ಲ ಎಂದು ಕಣ್ಣಿನ ವೈದ್ಯರು ಕೂಡ ಹೇಳಿದ್ದಾರೆ. ಹೀಗಾಗಿ ಇದು ಸೃಷ್ಟಿಯ ವಿಸ್ಮಯವಷ್ಟೇ ಅದರಾಚೆ ಬೇರೆ ಏನು ಇಲ್ಲ ಎಂದು ಅರ್ಶ್ ಕುಟುಂಬದವರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಅಮ್ಮ, ಅಪ್ಪ ಈಕೆಗೆ ಅಂದ್ರೆ ಪಂಚಪ್ರಾಣ.. ಕೋಪದಲ್ಲಿ ತಂಗಿಯ ಜೀವವನ್ನೇ ತೆಗೆದ ಅಣ್ಣ! ಆಗಿದ್ದೇನು?
ಸದ್ಯ ಈ ಬಾಲಕ ಸುತ್ತಮುತ್ತಲಿನ ಊರುಗಳಲ್ಲಿ ಎಷ್ಟೊಂದು ಜನಪ್ರಿಯನಾಗಿದ್ದಾನೆ ಎಂದರೆ. ಈತನನ್ನೂ ನೋಡಲು ದೂರದ ಊರಿನಿಂದ ಜನರು ಅಸ್ಲಮ್ ಮನೆ ಹುಡುಕಿಕೊಂಡು ಬರುತ್ತಿದ್ದಾರೆ. ಅವನೊಂದಿಗೆ ಸೆಲ್ಫಿ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಆದ್ರೆ ನಗರದ ಪ್ರಸಿದ್ಧ ನೇತ್ರತಜ್ಞರು ಇದನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಅವರು ಹೇಳುವ ಪ್ರಕಾರ ಇದೊಂದು ಭ್ರಮೆ ಅಷ್ಟೇ. ಮೆಡಿಕಲ್ ಸೈನ್ಸ್ನಲ್ಲಿ ಬಟ್ಟೆಯ ಬಣ್ಣದ ರೀತಿ ಕಣ್ಣುಗಳ ಬಣ್ಣವು ಕೂಡ ಬದಲಾಗುತ್ತವೆ ಎಂಬುದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಒಂದೊಂದು ಬಾರಿ ಕಣ್ಣುಗಳ ಬಣ್ಣಗಳು ಅಕ್ಕಪಕ್ಕದಲ್ಲಿರುವ ಅಥವಾ ಹಾಕಿಕೊಂಡ ಬಟ್ಟೆಯ ಬಣ್ಣದ ಕಾರ್ನಿಯೋ ರಿಫ್ಲೆಕ್ಷನ್ ಕಾರಣದಿಂದಾಗಿ ಬದಲಾದಂತೆ ಕಾಣುತ್ತವೆ ಅಷ್ಟೇ. ಇದಕ್ಕೆ ಸ್ಪಷ್ಟವಾಗಿ ಉತ್ತರ ಹೇಳಲು ಆ ಮಗುವನ್ನು ಬೇಟಿಯಾಗಿ ಸರಿಯಾಗಿ ನೇತ್ರ ತಪಾಸಣೆ ಮಾಡುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ