ಪೋಷಕರೇ ಎಚ್ಚರ! ಹೆತ್ತವರ ಲಾಲನೆ-ಪಾಲನೆ ಇಲ್ಲದಿದ್ರೆ ಮಕ್ಕಳು ಹೀಗೂ ಆಗ್ತಾರೆ.. ಕಣ್ಣೀರು ತರಿಸುತ್ತೆ ಈ ಸ್ಟೋರಿ..!

author-image
Ganesh
Updated On
ಪೋಷಕರೇ ಎಚ್ಚರ! ಹೆತ್ತವರ ಲಾಲನೆ-ಪಾಲನೆ ಇಲ್ಲದಿದ್ರೆ ಮಕ್ಕಳು ಹೀಗೂ ಆಗ್ತಾರೆ.. ಕಣ್ಣೀರು ತರಿಸುತ್ತೆ ಈ ಸ್ಟೋರಿ..!
Advertisment
  • ಸದಾ ಕಾಲ ನಶೆಯಲ್ಲೇ ಇರ್ತಾರೆ ತಾಯಿ ಹಾಗೂ ಸಹೋದರ
  • ಶ್ವಾನಗಳ ಜೊತೆ ಬೆಳೆದು ನಾಯಿಯಂತೆ ಬೊಗಳುವ ಬಾಲಕ
  • ಬಾಲಕನ ನಿವಾಸಕ್ಕೆ ಭೇಟಿಯಾಗಿದ್ದ ಅಧಿಕಾರಿಗಳಿಗೆ ಶಾಕ್

ಹೆತ್ತವರ ಲಾಲನೆ-ಪೋಷಣೆ ಇಲ್ಲದಿದ್ರೆ ಮಕ್ಕಳು ಹಾದಿ ತಪ್ಪುತ್ತಾರೆ ಅಂತಾರೆ. ಆದ್ರೆ ಇಲ್ಲಿ ತಾಯಿ-ಹಾಗೂ ಸಹೋದರ ಡ್ರಗ್ಸ್​ ನಶೆಯಲ್ಲಿ ತೇಲಿದ್ರೆ ಚಿಕ್ಕ ಮಗ ನಾಯಿಗಳ ಜೊತೆಯೇ ಬೆಳೆದಿದ್ದಾನೆ. ಕೊನೆಗೆ ನಾಯಿಯಂತೆಯೇ ಬೊಗಳುವ ಮೂಲಕ ಮಾತನ್ನೇ ಮರೆತಿದ್ದಾನೆ.

ಮೊಗ್ಲಿ.. ಕಾಡುಮನುಷ್ಯ.. ಕಾಡಲ್ಲಿ ಪ್ರಾಣಿ-ಪಕ್ಷಿಗಳ ಜೊತೆ ಬೆಳೆದು ಅವುಗಳಂತೆ ಮಾತನಾಡುವ, ವರ್ತಿಸುವ ಕಾಲ್ಪನಿಕ ವ್ಯಕ್ತಿ.. ಇದನ್ನೇ ಆಧರಿಸಿ ಹಲವಾರು ಭಾಷೆಗಳಲ್ಲಿ ಸಿನಿಮಾ ಬಂದಿದ್ದು ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲದೇ ಇಂತಹ ನೈಜ ಘಟನೆಗಳೂ ಬೆಳಕಿಗೆ ಬಂದಿವೆ. ಇದೇ ರೀತಿಯ ಹೃದಯ ವಿದ್ರಾವಕ ಘಟನೆಯೊಂದು ಜನರ ಕಣ್ಣಂಚನ್ನ ತೇವ ಮಾಡಿದೆ.

ತಾಯಿ ಹಾಗೂ ಸಹೋದರನಿಗೆ ಡ್ರಗ್ಸ್​ ನಶೆ

ಅಂದಾಗೆ ಈ ಕರುಣಾಜನಕ ಘಟನೆ ನಡೆದಿದ್ದು ದೂರದ ಥಾಯ್ಲೆಂಡ್​ನಲ್ಲಿ. ಆಧುನಿಕ ಕಾಲಘಟ್ಟ ಬಿಟ್ಟಾಕಿ ಕನಿಷ್ಟ ಪಕ್ಷ ಮಾನವನ ಸಾಮಾನ್ಯ ಪ್ರಪಂಚದ ಅರಿವೇ ಇಲ್ಲದೇ ನಾಯಿಗಳ ಜೊತೆಯೇ ಬೆಳೆದು ಮಾತನ್ನೇ ಬಾಲಕನೊಬ್ಬ ಮರೆತಿದ್ದಾನೆ. ಯಾರಾದ್ರೂ ಮಾತಾಡಿಸಿದ್ರೆ ಅವರ ಜೊತೆ ನಾಯಿಯಂತೆಯೇ ಬೊಗಳುತ್ತಾ ಮಾತನಾಡುವ ಬಾಲಕನೊಬ್ಬನನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದ ನಟ ದರ್ಶನ್.. ಏನು ವಿಶೇಷ ಗೊತ್ತಾ..?

publive-image
ಬಾಲಕನ ತಾಯಿ ಹಾಗೂ ಆತನ ಅಣ್ಣ ಡ್ರಗ್ಸ್ ನಶೆಗೆ ದಾಸರಾಗಿದ್ದರು. ಇದರಿಂದ ಬಾಲಕನ ಲಾಲನೆ-ಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು. ಸಮಾಜದಲ್ಲಿ ಆತನನ್ನು ಬೆರೆಯಲು ಬಿಡದೇ ಮನೆಯಲ್ಲಿದ್ದ 6 ನಾಯಿಗಳ ಜೊತೆ ಬಿಟ್ಟಿದ್ದರು. ಪರಿಣಾಮ ಬಾಲಕ ಮನುಷ್ಯನಂತೆ ಮಾತನಾಡುವುದನ್ನೇ ಕಲಿತಿಲ್ಲ. ನಾಯಿಗಳೊಂದಿಗೆ ಬೆಳೆಯುತ್ತಾ ಅವುಗಳಂತೆ ಬೊಗಳುತ್ತಿದ್ದಾನೆ. ಸ್ಥಳೀಯ ಶಾಲೆಯೊಂದರ ಪ್ರಾಂಶುಪಾಲರು ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಬಾಲಕನ ಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವತ್ತರಾದ ಅಧಿಕಾರಿಗಳು ಜೂನ್ 30 ರಂದು ಥಾಯ್ಲೆಂಡ್‍ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿದ್ದ ಬಾಲಕನನ್ನು ರಕ್ಷಿಸಿದ್ದಾರೆ. ರಕ್ಷಣೆ ವೇಳೆ ಆತ ಮಾತನಾಡದೇ ನಾಯಿಯಂತೆಯೇ ಬೊಗಳುತ್ತಿದ್ದ ಎಂದು ಪವಿನಾ ಹಾಂಗ್‌ಸಕುಲ್ ಫೌಂಡೇಶನ್ ಫಾರ್ ಚಿಲ್ಡ್ರನ್ & ವುಮೆನ್‌ನ ಅಧ್ಯಕ್ಷೆ ಪವಿನಾ ಹೇಳಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಮತ್ತೊಂದು ವಿದ್ರಾವಕ ಘಟನೆ.. 21 ವರ್ಷದ ಯುವಕನ ಜೀವ ಕಸಿದ ಹೃದಯ..

publive-image

ನಾಯಿಯಂತೆ ಬೊಗಳುವ ಬಾಲಕ!

  • ಬಾಲಕನ ತಾಯಿ 6 ನಾಯಿಗಳ ಜೊತೆ ಮಗನನ್ನು ಬಿಟ್ಟು ನಶೆಯಲ್ಲಿ ತೇಲಾಟ
  • ನೆರೆಹೊರೆಯವರು ತಮ್ಮ ಮಕ್ಕಳನ್ನೂ ಬಾಲಕನ ಜೊತೆ ಆಟವಾಡುವುದಕ್ಕೆ ತಡೆ
  • ಒಂಟಿ ಬಾಲಕ ಸಾಮಾಜಿಕವಾಗಿ ಬೆರೆಯದೇ ಮಾತನಾಡುವುದನ್ನೇ ಕಲಿಯಲಿಲ್ಲ
  • ನಾಯಿಗಳ ಜೊತೆಗಿದ್ದು ಅವುಗಳಂತೆ ವರ್ತಿಸಲು ಶುರುಮಾಡಿದ್ದ ಬಾಲಕ
  • ರಕ್ಷಣೆಯಾದ ಬಾಲಕನಿಗೆ ʻಬಾಯ್‌ ಎʼ ಎಂದು ಹೆಸರಿಟ್ಟಿರುವ ಅಧಿಕಾರಿಗಳು
  • ತಾಯಿ, ಸಹೋದರ ಇಬ್ಬರೂ ಮಾದಕ ದ್ರವ್ಯ ಸೇವಿಸುವುದು ಪರೀಕ್ಷೆಯಲ್ಲಿ ದೃಢ
  • ಶಿಕ್ಷಣಕ್ಕಾಗಿ ಸರ್ಕಾರ ನೆರವು ನೀಡಿದ್ರೂ ಮಗನನ್ನು ಶಾಲೆಗೆ ಸೇರಿಸದ ತಾಯಿ
  • 1 ದಿನ ಮಾತ್ರ ಶಾಲೆಗೆ ಹೋಗಿ ಮತ್ತೆಂದೂ ಶಾಲೆ ಕಡೆ ಮುಖ ಮಾಡದ ಬಾಲಕ

ಸದ್ಯ ಬಾಲಕನನ್ನು ಮಕ್ಕಳ ಆಶ್ರಯ ಶಿಬಿರದಲ್ಲಿ ಬಿಡಲಾಗಿದ್ದು ಅಲ್ಲಿಯೇ ಆತನನ್ನು ನೋಡಿಕೊಳ್ಳಲಾಗುತ್ತಿದೆ. ಅವನಿಗೆ ಮುಂದೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ತಾಯಿ ಹಾಗೂ ಅಣ್ಣನ ನಶೆಯ ದಾಸ್ಯದಿಂದ ಚಿಕ್ಕ ಮಗ ನಾಗರಿಕ ಸಮಾಜವನ್ನೇ ಮರೆತಿದ್ದು ದುರಂತ.

ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದ ನಟ ದರ್ಶನ್.. ಏನು ವಿಶೇಷ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment