ವಿಶ್ವದ ಈ ನಗರದಲ್ಲಿ ಮಾತ್ರ ಅತಿ ಹೆಚ್ಚು ಕೋಟ್ಯಾಧಿಪತಿಗಳು ಇದ್ದಾರೆ! ಮುಂಬೈ, ಬೀಜಿಂಗ್, ಸಿಂಗಾಪುರ ಅಲ್ಲ! ಯಾವುದು?

author-image
Gopal Kulkarni
Updated On
ವಿಶ್ವದ ಈ ನಗರದಲ್ಲಿ ಮಾತ್ರ ಅತಿ ಹೆಚ್ಚು ಕೋಟ್ಯಾಧಿಪತಿಗಳು ಇದ್ದಾರೆ! ಮುಂಬೈ, ಬೀಜಿಂಗ್, ಸಿಂಗಾಪುರ ಅಲ್ಲ! ಯಾವುದು?
Advertisment
  • ವಿಶ್ವದ ಅತಿಹೆಚ್ಚು ಬಿಲೇನಿಯರ್​ಗಳನ್ನು ಹೊಂದಿರುವ ನಗರ ಯಾವುದು?
  • ಭಾರತದ ಯಾವ ನಗರದಲ್ಲಿ ಹೆಚ್ಚು ಕೋಟ್ಯಾಧೀಪತಿಗಳು ಇದ್ದಾರೆ ಗೊತ್ತಾ?
  • ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಯಾವ ನಗರಿ ನಂಬರ್ 1 ?

ಅಮೆರಿಕಾದ ವ್ಯಾಪಾರಿ ನಿಯತಕಾಲಿಕೆ ಪತ್ರಿಕೆಯಾದ ಫೋರ್ಬ್ಸ್​ ವಿಶ್ವದಲ್ಲಿ ಅತ್ಯಂತ ಶ್ರೀಮಂತರನ್ನು ಹೊಂದಿರುವ ನಗರ ಯಾವುದು ಎಂಬ ಬಹುನಿರೀಕ್ಷಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಯಾವ ಸಿಟಿಯಲ್ಲಿ ಅತ್ಯಧಿಕ ಕೋಟ್ಯಾಧಿಪತಿಗಳು ವಾಸಿಸುತ್ತಿದ್ದಾರೆ ಎಂಬುದರ ಮಾಹಿತಿ ಇರುವ ಪಟ್ಟಿಯನ್ನು ಫೋರ್ಬ್ಸ್ ಬಿಡಗಡೆ ಮಾಡಿದೆ. ಈ ಒಂದು ಪಟ್ಟಿಯನ್ನು ಯಾವ ಉದ್ಯಮಿ ಅಥವಾ ಕೋಟ್ಯಾಧೀಶನ ಬಳಿ ಯುಎಸ್​​ನ 1 ಬಿಲಿಯನ್ ಡಾಲರ್​ಗೂ ಅಧಿಕ ಆಸ್ತಿಯಿದೆಯೋ ಅವರನ್ನು ಕೋಟ್ಯಾಧಿಪತಿಗಳು ಎಂದು ಗಣನೆಗೆ ತೆಗೆದುಕೊಳ್ಳಲಾಗಿದೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟು 10 ನಗರಗಳಿವೆ ಅದರಲ್ಲಿ ಭಾರತದ ಒಂದು ನಗರವು ಕೂಡ ಬರುತ್ತದೆ.

ಇದನ್ನೂ ಓದಿ:ಟ್ರಂಪ್ ತೆರಿಗೆ ಯುದ್ಧಕ್ಕೆ ನಡುಗಿದ ಜಗತ್ತು.. ಭಾರತ ಸೇರಿ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣ..!

publive-image

ಫೋರ್ಬ್ಸ್ ಬಿಡಗಡೆ ಮಾಡಿರುವ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಲಾಸ್ ಏಂಜಲೀಸ್ ಪಡೆದುಕೊಂಡಿದೆ. ಈ ನಗರದಲ್ಲಿ ಸುಮಾರ 2024ರಿಂದ ಸುಮಾರು ಮೂರು ಜನ ಕೋಟ್ಯಾಧೀಪತಿಗಳು ವಾಸಿಸುತ್ತಿದ್ದಾರೆ. ಈ ಮೂವರು ಉದ್ಯಮಿಗಳ ಒಟ್ಟು ಆಸ್ತಿ ಸುಮಾರು 243 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತತದೆ. ಇವರಲ್ಲಿ ಅತಿಹಚ್ಚು ಶ್ರೀಮಂತ ಎಂದು ಪೀಟರ್ ಥೈಲ್​ ಅವರನ್ನು ಗುರುತಿಸಲಾಗಿದ್ದು ಅವರ ಬಳಿ ಸುಮಾರು 16.3 ಬಿಲಿಯನ್ ಡಾಲರ್ ಸಂಪತ್ತು ಇದೆ. ಇನ್ನು 9ನೇ ಸ್ಥಾನದಲ್ಲಿ ಸ್ಯಾನ್​ಫ್ರಾನ್ಸಿಸ್ಕೊ ಬರುತ್ತದೆ. ಈ ನಗರದಲ್ಲಿ ಒಟ್ಟು 58 ಬಿಲೇನಿಯರ್​ಗಳು ಇದ್ದಾರೆ. ಡಸ್ಟಿನ್ ಮೊಸ್ಕೊವಿಟ್ಜ್​​ರನ್ನ ಈ ನಗರದ ಅತಿದೊಡ್ಡ ಶ್ರೀಮಂತ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ.. ಹೆಂಡತಿಯ ಟಾರ್ಚರ್‌ಗೆ ಟೆಕ್ಕಿ ಸಾವಿಗೆ ಶರಣು?

ಇನ್ನು 8ನೇ ಸ್ಥಾನದಲ್ಲಿ ಚೀನಾದ ಶಾಂಘೈ ಇದೆ ಇಲ್ಲಿಯೂ ಕೂಡ 58 ಜನರು ಬಿಲೇನಿಯರ್​ಗಳು ಇದ್ದಾರೆ. ಕೊಲಿನ್​ ಹೌಂಗ್​ ಈ ನಗರದ ಅತ್ಯಂದ ದೊಡ್ಡ ಶ್ರೀಮಂತ ಎಂದು ಗುರುತಿಸಲಾಗಿದ್ದು. ಇವರ ಬಳಿ 42.3 ಬಿಲಿಯನ್ ಡಾಲರ್​ನಷ್ಟು ಆಸ್ತಿಯಿದೆ. ಇನ್ನು 7ನೇ ಸ್ಥಾನದಲ್ಲಿ ಸಿಂಗಾಪುರ್ ಇದ್ದು 60 ಕೋಟ್ಯಾಧಿಪತಿಗಳು ಈ ದೇಶದಲ್ಲಿದ್ದಾರೆ. ಝ್ಯಾಂಗ್ ಯಿಮಿಂಗ್ ಇಲ್ಲಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು ಸುಮಾರು 92.5 ಬಿಲಿಯನ್ ಡಾಲರ್​​ನಷ್ಟು ಸಂಪತ್ತು ಈತನ ಬಳಿ ಇದೆ.

publive-image

ಇನ್ನು 6ನೇ ಸ್ಥಾನವನ್ನು ನಮ್ಮ ದೇಶದ ಹೆಮ್ಮೆಯ ವಾಣಿಜ್ಯ ನಗರಿಯಾದ ಮುಂಬೈ ಪಡೆದುಕೊಂಡಿದೆ. ಮುಂಬೈನಲ್ಲಿ ಒಟ್ಟು 67 ಜನರು ಕೋಟ್ಯಾಧೀಪತಿಗಳು ಇದ್ದಾರೆ. ಈ ನಗರದ ಕೋಟ್ಯಾಧೀಪತಿಗಳ ಬಳಿ ಇರುವ ಒಟ್ಟು ಆಸ್ತಿ ಸುಮಾರು 349 ಬಿಲಿಯನ್ ಡಾಲರ್​​ನಷ್ಟು. ಮುಕೇಶ್ ಅಂಬಾನಿ ಅತಿಹೆಚ್ಚು ಸಂಪತ್ತು ಹೊಂದಿದ ಉದ್ಯಮಿ ಇವರ ಬಳಿ 92.5 ಬಿಲಿಯನ್ ಡಾಲರ್​ನಷ್ಟು ಆಸ್ತಿಯಿದೆ ಎಂದು ಫೋರ್ಬ್ಸ್ ಸ್ಪಷ್ಟಪಡಿಸಿದೆ. ಇನ್ನು 5ನೇ ಸ್ಥಾನದಲ್ಲಿ ಚೀನಾದ ರಾಜಧಾನಿ ಬಿಜಿಂಗ್ ಇದ್ದು. ಇಲ್ಲಿ ಸುಮಾರು 68 ಬಿಲೇನಿಯರ್​ಗಳು ಇದ್ದಾರೆ. ಲಿಯಿ ಜುನ್​ ಈ ನಗರದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು ಈತನ ಬಳಿ ಸುಮಾರು 43.5 ಬಿಲಿಯನ್ ಡಾಲರ್ ಆಸ್ತಿ ಇದೆ.

publive-image

ಇನ್ನು ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್​ನ ರಾಜಧಾನಿ ಲಂಡನ್ ಇದೆ. ಇಲ್ಲಿ ಸುಮಾರು 71 ಬಿಲೇನಿಯರ್​ಗಳು ಇದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಹಾಂಕ್​ಕಾಂಗ್ ಇದ್ದು ಇಲ್ಲಿ ಒಟ್ಟು 72 ಕೋಟ್ಯಾಧೀಪತಿಗಳು ಇದ್ದಾರೆ. 2ನೇ ಸ್ಥಾನದಲ್ಲಿ ರಷ್ಯಾದ ರಾಜಧಾನಿ ಮಾಸ್ಕೋ ಇದೆ. ಇಲ್ಲಿ ಸುಮಾರು 90 ಬಿಲೇನಿಯರ್​ಗಳು ಇದ್ದಾರೆ ಎಂದು ಹೇಳಲಾಗುತ್ತದೆ.

publive-image

ಇನ್ನು ಮೊದಲ ಸ್ಥಾನದಲ್ಲಿ ಇರೋದು ಅಮೆರಿಕಾದ ಶ್ರೀಮಂತ ನಗರಿ ನ್ಯೂಯಾರ್ಕ್​, ಇಲ್ಲಿ ಬರೋಬ್ಬರಿ 123 ಬಿಲೇನಿಯರ್ಸ್​ ಇದ್ದಾರೆ. 2024ರಲ್ಲಿ ಇವರ ಪಟ್ಟಿಯಲ್ಲಿ ಸುಮಾರು 13 ಜನರು ಹೆಚ್ಚಿಗೆ ಸೇರಿದ್ದಾರೆ. ಈ ಒಟ್ಟು 123 ಕೋಟ್ಯಾಧೀಪತಿಗಳ ಆಸ್ತಿ 759 ಬಿಲಿಯನ್ ಡಾಲರ್ ಎಂದು ಹೇಳಲಾಗಾಗುತ್ತದೆ. ಇಲ್ಲಿ ವಾಸಿಸುವ ಅತಿದೊಡ್ಡ ಶ್ರೀಮಂತ ಅಂದ್ರೆ ಅದು ಮಿಚೈಲ್ ಬ್ಲೂಮ್​ಬರ್ಗ್​ ಈತನ ಬಳಿ 105 ಬಿಲಿಯನ್ ಡಾಲರ್​ನಷ್ಟು ಆಸ್ತಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment