/newsfirstlive-kannada/media/post_attachments/wp-content/uploads/2024/11/WORLD-BEST-CITY.jpg)
ನಿಮಗೆ ಜಗತ್ತಿನಲ್ಲಿ ಅತ್ಯಂತ ಉತ್ತಮ ನಗರ ಅಂದ್ರೆ ಯಾವುದು ಅಂತ ಗೊತ್ತಿದೆಯಾ? ತುಂಬಾ ಹೈಟೆಕ್, ನೈಸರ್ಗಿಕ ಸೌಂದರ್ಯ ರಾಶಿ, ಸ್ವಚ್ಛತೆಯಲ್ಲಿ ಮುಂದು, ಮಾಲಿನ್ಯದಿಂದ ತುಂಬಾ ದೂರ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹಾಗೂ ಸೋನಮ್ ಕಪೂರ್ನಂತವರೇ ಮೆಚ್ಚಿದ ನಗರ. ವಿಶ್ವದಲ್ಲಿಯೇ ಅತ್ಯಂತ ಅದ್ಭುತ ನಗರ ಎಂದು 2024ರಲ್ಲಿ 10ನೇ ಬಾರಿ ಕರೆಸಿಕೊಂಡ ನಗರ. ಅದು ಯಾವುದು ಅಂತ ಗೊತ್ತಾ?
ಆ ನಗರ ಬ್ರಿಟನ್ನ ರಾಜಧಾನಿಯಾಗಿರುವ ಲಂಡನ್. 1952ರಲ್ಲಿ ಇದೇ ನಗರ ಜಗತ್ತಿನಲ್ಲಿಯೇ ಅತ್ಯಂತ ಮಾಲಿನ್ಯ ನಗರವೆಂದು ಕುಖ್ಯಾತಿ ಪಡೆದಿತ್ತು. ಹೊಗೆಯುಗುಳುವ ನಗರವೆಂದೇ ಗುರುತಿಸಿಕೊಂಡಿತ್ತು. ವಿಪರೀತ ಕಲ್ಲಿದ್ದಲು ಸುಡುವಿಕೆ. ಫ್ಯಾಕ್ಟರಿಗಳು ಹೊಸ ಸೂಸುವ ಹೊಗೆ, ಮನೆ ಹಾಗೂ ವಾಹನಗಳಿಂದ ಹೊರ ಬರುತ್ತಿರುವ ಹೊಗೆಯಿಂದಾಗಿ ಕಲುಷಿತಗೊಂಡಿದ್ದ ನಗರ ಆ ಕಾಲದಲ್ಲಿ ಒಟ್ಟು 12 ಸಾವಿರ ಜನರ ಜೀವ ತೆಗೆದುಕೊಂಡಿತ್ತು. ಇಂದು ದೆಹಲಿಯನ್ನು ಹೇಗೆ ನಾವು ಗ್ಯಾಸ್ ಚೆಂಬರ್ ಎಂದು ಕರೆಯುತ್ತೇವೆಯೋ, ಅಂದು ಲಂಡನ್ನ್ನು ಜನರು ಗ್ಯಾಸ್ ಚೇಂಬರ್ ಎಂದು ಕರೆಯುತ್ತಿದ್ದರು. ಕೇವಲ 72 ವರ್ಷಗಳಲ್ಲಿ ಲಂಡನ್ ತನ್ನ ಗುರುತನ್ನೇ ಬದಲಿಸಿಕೊಂಡಿದೆ. ತನ್ನೊಡಲಿನ ಎಲ್ಲ ವಿಷವನ್ನು ಆಚೆ ಹಾಕಿ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಲ ನಗರ ಎಂದು ವಿಶ್ವದಲ್ಲಿ ಗುರುತಿಸಿಕೊಂಡಿದೆ. ದೆಹಲಿಯಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 500 ರಿಂದ 700ವರೆಗೆ ಮುಟ್ಟಿದ್ದರೆ. ಅಲ್ಲಿ ಈಗ ಎಕ್ಯೂಐ ಕೇವಲ ಸಂಖ್ಯೆ ಕೇವಲ 1
ಯಾಕೆ ಲಂಡನ್ ಬೆಸ್ಟ್ ಸಿಟಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿತು ಎಂದರೆ ಅದು ತನ್ನ ಸಂಸ್ಕೃತಿ ಹಾಗೂ ಪರಂಪರೆಯನ್ನು ಸದಾ ಕಾಲ ಹಸಿರಾಗಿಟ್ಟುಕೊಳ್ಳಲು ಪ್ರಯತ್ನಿಸಿತು. ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ತನ್ನದಾಗಿಸಿಕೊಂಡಿತು. ತನ್ನ ಒಡಲಲ್ಲಿರುವ ಬಕ್ಕಿಂಗ್ಹ್ಯಾಮ್ ಪ್ಯಾಲೆಸ್ ಟವರ್ ಆಫ್ ಲಂಡನ್, ಬ್ರಿಟೀಷ್ ಮ್ಯೂಸಿಯಂಗಳನ್ನು ಪ್ರವಾಸಿಗರ ನೆಚ್ಚಿನ ತಾಣವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು
ಇದನ್ನೂ ಓದಿ:ಭಾರತದ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನೀವು ಈ 7 ದೇಶಗಳಲ್ಲಿ ವಾಹನ ಚಲಾಯಿಸಬಹುದು; ಯಾವುವು ಗೊತ್ತಾ?
ಅದು ಮಾತ್ರವಲ್ಲ ಲಂಡನ್ ಎಜ್ಯುಕೇಷನ್ ಹಬ್ ಆಗಿಯೂ ಕೂಡ ಗುರುತಿಸಿಕೊಂಡಿತು ಲಂಡನ್ ಯುನಿವರ್ಸಿಟಿ ಆಫ್ ಕಾಲೇಜ್, ಇಂಪಿರಿಯಲ್ ಲಂಡನ್ ಕಾಲೇಜ್ಗಳು ಜಾಗತಿಕ ಶಿಕ್ಷಣ ಕೇಂದ್ರಗಳಾಗಿ ಗುರುತಿಸಿಕೊಂಡವು. ಅದು ಮಾತ್ರವಲ್ಲ, ಲಂಡನ್ ವ್ಯಾಪಾರ ಹಾಗೂ ಹಣಕಾಸಿನ ಕೇಂದ್ರವಾಗಿ ಗುರುತಿಸಿಕೊಂಡಿತು ಟೂರಿಸಂ ಹಬ್ ಆಗಿ ಗುರುತಿಸಿಕೊಂಡಿತು. ಲಂಡನ್ ಸಿಟಿಯಲ್ಲಿ ಶೇಕಡಾ 40 ರಷ್ಟು ಹಸಿರು ಇದೆ ಹೈಡೇ ಪಾರ್ಕ್ ಮತ್ತು ರೆಜೆಂಟ್ ಪಾರ್ಕ್ ಸೇರಿ ಒಟ್ಟು ಶೇಕಡಾ 40 ರಷ್ಟು ಹಸಿರು ಅರಣ್ಯ ಲಂಡನ್ನಲ್ಲಿದೆ. ಈ ಒಂದು ನಗರದಲ್ಲಿ ಸುಮಾರು 170 ಮ್ಯೂಸಿಯಂಗಳಿವೆ ಅಂದ್ರೆ ನೀವು ನಂಬಲೇಬೇಕು.
ಇದನ್ನೂ ಓದಿ:VIDEO: ಬಾಹ್ಯಾಕಾಶದಲ್ಲಿ ಈಗ ಲೀಕೇಜ್ ಭಯ.. ಸುನೀತಾ ವಿಲಿಯಮ್ಸ್ ಕರೆತರಲು ನಾಸಾ ಮಾಡ್ತಿರೋದೇನು?
ಹೀಗೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದ ನಗರ ಹಿಂದೊಮ್ಮೆ ಮಾಡಿದ ತನ್ನದೇ ಸ್ವಯಂಕೃತ ಅಪರಾಧದಿಂದ ಗ್ಯಾಸ್ ಚೆಂಬರ್ ಎಂದು ಗುರುತಿಸಿಕೊಂಡಿತ್ತು. ಈಗ ಅದೆಲ್ಲಾ ಕಂಟಕಗಳಿಂದ, ಅಪವಾದಗಳಿಂದ ಮುಕ್ತವಾಗಿದೆ. ವಿಶ್ವದ ಅತ್ಯಂತ ಅದ್ಭುತ ನಗರ ಅಂದ್ರೆ ಅದು ಲಂಡನ್ ಎಂದು ಕರೆಸಿಕೊಳ್ಳುವ ಮಟ್ಟಿಗೆ ಅದು ಬೆಳೆದು ನಿಂತಿದೆ. ಇದೆಲ್ಲದರ ನಡುವೆ ನಮಗೆ ಕಾಡುವ ಒಂದೇ ಒಂದು ಪ್ರಶ್ನೆ ಅಂದ್ರೆ ಲಂಡನ್ಗೆ ಸಾಧ್ಯವಾಗಿದ್ದು ದೆಹಲಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ