/newsfirstlive-kannada/media/post_attachments/wp-content/uploads/2023/08/CKM-_MONEY_-MURDER_1.jpg)
ಬೆಂಗಳೂರು: ಗೃಹಲಕ್ಷ್ಮೀ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಈ ಯೋಜನೆಯಡಿ ಮನೆ ಲಕ್ಷ್ಮೀಯರಿಗೆ ಸರ್ಕಾರ 2 ಸಾವಿರ ಹಣ ನೀಡುತ್ತಿದೆ. ಈ 2 ಸಾವಿರ ಅದೆಷ್ಟೋ ಮನೆಯ ಕಷ್ಟಕ್ಕೆ ಆಗಿದ್ರೆ, ಕೆಲವರು ಇದ್ರಿಂದಲೇ ತಮ್ಮ ಜೀವನ ನಡೆಸ್ತಿದ್ದಾರೆ. ಇಷ್ಟು ದಿನ ಹೆಣ್ಮುಕ್ಕಳಿಗೆ ಮಾತ್ರ ಗೃಹಲಕ್ಷ್ಮೀ ಒಲಿಯುತ್ತಿದ್ದಳು. ಇನ್ಮುಂದೆ ತೃತೀಯ ಲಿಂಗಿಗಳಿಗೂ ಸರ್ಕಾರದ ಕಡೆಯಿಂದ ಗೃಹಲಕ್ಷ್ಮೀ ಸಿಕ್ಕಿದೆ.
ಮೊದಲ ಕಂತಿನ ಹಣ ಪಡೆದ ತೃತೀಯ ಲಿಂಗಿ
ತೃತೀಯ ಲಿಂಗಿಗಳಿಗೂ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಗೃಹಲಕ್ಷ್ಮಿ ಭಾಗ್ಯ ಸಿಕ್ಕಿದೆ. ರಾಜ್ಯದಲ್ಲಿಯೇ ಮೊದಲು ಮೈಸೂರಿನ ಪ್ರಣತಿ ಪ್ರಕಾಶ್ ಮೊದಲ ಕಂತಿನ ಹಣ ಪಡೆದಿದ್ದಾರೆ. ರಾಜ್ಯಾದ್ಯಂತ 800 ಮಂದಿಯ ಅರ್ಜಿ ಪೈಕಿ 30 ಮಂದಿ ಆಯ್ಕೆ ಆಗಿದ್ರು. ಅದ್ರಲ್ಲಿ 30 ಮಂದಿ ಪೈಕಿ ಮೈಸೂರಿನ ನಾಲ್ವರಿಗೆ ಗೃಹಲಕ್ಷ್ಮೀ ಯೋಜನೆಗೆ ಸಿಗೋದು ಪಕ್ಕಾ ಆಗಿತ್ತು. ಆ ಪೈಕಿ ರಾಜ್ಯದಲ್ಲಿಯೇ ಮೊದಲು ಮೈಸೂರಿನ ಪ್ರಣತಿ ಪ್ರಕಾಶ್ ಖಾತೆಗೆ ಮೊದಲ ಕಂತಿನ ಹಣ ಜಮೆ ಆಗಿದ್ದು, ಪ್ರಣತಿ ಸಂತಸ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಪ್ರಣತಿ ಪ್ರಕಾಶ್ ಅವರ ಸಂತಸದ ನುಡಿಗಳಿವು. ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವ ಲಿಂಗತ್ವ ಅಲ್ಪಸಂಖ್ಯಾತರು ಆರ್ಥಿಕವಾಗಿ ಸಶಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಆ ಮೂಲಕ ಅವರು ಎಲ್ಲರಂತೆ ಘನತೆಯ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇವಲ… pic.twitter.com/g00jRF8NC8
— Siddaramaiah (@siddaramaiah)
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಪ್ರಣತಿ ಪ್ರಕಾಶ್ ಅವರ ಸಂತಸದ ನುಡಿಗಳಿವು. ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವ ಲಿಂಗತ್ವ ಅಲ್ಪಸಂಖ್ಯಾತರು ಆರ್ಥಿಕವಾಗಿ ಸಶಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಆ ಮೂಲಕ ಅವರು ಎಲ್ಲರಂತೆ ಘನತೆಯ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇವಲ… pic.twitter.com/g00jRF8NC8
— Siddaramaiah (@siddaramaiah) December 15, 2024
">December 15, 2024
ಪ್ರಾಮಾಣಿಕವಾಗಿ ಶ್ರಮಿಸಿದ ತೃಪ್ತಿ ಎಂದ ಸಿಎಂ
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಪ್ರಣತಿ ಪ್ರಕಾಶ್ ಅವರ ಸಂತಸದ ನುಡಿಗಳಿವು. ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವ ಲಿಂಗತ್ವ ಅಲ್ಪಸಂಖ್ಯಾತರು ಆರ್ಥಿಕವಾಗಿ ಸಶಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆ ಮೂಲಕ ಅವರು ಎಲ್ಲರಂತೆ ಘನತೆಯ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇವಲ ಮಹಿಳೆಯರಿಗೆ ಮೀಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದೆವು. ನಮ್ಮ ನಿರ್ಧಾರ ಯಾಕೆ ಸೂಕ್ತವಾದುದ್ದು ಎಂಬುದನ್ನು ಇವರ ಮಾತುಗಳು ಪ್ರತಿಬಿಂಬಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಹಿಂದೆ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ಸಹಾಯಧನ ಒದಗಿಸುವ "ಮೈತ್ರಿ" ಕಾರ್ಯಕ್ರಮವನ್ನು ರೂಪಿಸಿ, ಜಾರಿಗೆ ಕೊಟ್ಟಿದ್ದೆ. ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಸಮಾಜದ ದುರ್ಬಲ ವರ್ಗಗಳನ್ನು ಗುರುತಿಸಿ, ಅವರ ಜೀವನ ಸುಧಾರಿಸಲು ಚಿಕಿತ್ಸಕ ಕ್ರಮಗಳನ್ನು ಕೈಗೊಳ್ಳುವುದು ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ತೃಪ್ತಿ ನನಗಿದೆ ಎಂದರು ಸಿದ್ದರಾಮಯ್ಯ.
ಇದನ್ನೂ ಓದಿ:6 ಫೋರ್.. 6 ಭರ್ಜರಿ ಸಿಕ್ಸರ್.. ಬೆಂಗಳೂರಲ್ಲಿ RCB ಸ್ಟಾರ್ ರಜತ್ ಪಾಟಿದಾರ್ ಶೋ; ಬೆಚ್ಚಿಬಿದ್ದ ಮುಂಬೈ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್