/newsfirstlive-kannada/media/post_attachments/wp-content/uploads/2024/07/Men-walk.jpg)
ಇಂದು ಜನನ, ನಾಳೆ ಸಾವು. ಇದು ಬದುಕಿನ ಚಕ್ರ ಬಂಡಿ. ಇಂದು ಹುಟ್ಟಿದವನು ಮುಂದೊಂದು ದಿನ ಸಾಯಲೇ ಬೇಕು. ಆದರೆ ಸತ್ತವನ್ನು ಬದುಕಿ ಬರುವುದುಂಟೇ?. ಖಂಡಿತಾ ಇಲ್ಲ. ಒಂದು ವೇಳೆ ಸತ್ತವನು ಮತ್ತೆ ಹುಟ್ಟಿ ಬಂದರೆ ಅದು ಪವಾಡವೇ ಸರಿ. ಆದರೆ ಇಂದು ಸತ್ತವನನ್ನು ಮುಂದೊಂದು ದಿನ ಬದುಕಿಸಬಹುದು ಎಂದು ಕಂಪನಿಯೊಂದು ಆಶ್ವಾಸನೆ ಕೊಟ್ಟಿದೆ ಎಂದರೆ ನಂಬುತ್ತೀರಾ?. ಈ ಸ್ಟೋರಿ ಮಿಸ್​​ ಮಾಡದೇ ಓದಿ.
ವಿಶ್ವದಲ್ಲಿ ಮೆಡಿಕಲ್​ ಮೀರಾಕಲ್​ ಆದ ಹಲವಾರು ಘಟನೆಗಳಿವೆ. ಕೆಲವು ಘಟನೆಗಳು ವೈದ್ಯಕೀಯ ಲೋಕಕ್ಕೆ ಅಚ್ಚರಿಯಾದದ್ದು ಇದೆ. ಆದರೀಗ ಎಲ್ಲರಿಗೂ ಅಚ್ಚರಿಯಾಗುವಂತೆ ಅಮೆರಿಕಾ ಮೂಲದ ಕಂಪನಿಯೊಂದು ಸತ್ತವರನ್ನು ಮುಂದೊಂದು ದಿನ ಮತ್ತೆ ಬದುಕಿಸಬಹುದು ಎಂದು ಹೇಳಿಕೊಂಡಿದೆ.
ಹೌದು. ಅಮೆರಿಕಾದ ''Alcor Life Extension Foundation'' ಈ ಕೆಲಸವನ್ನು ಮಾಡುತ್ತಿದೆ. ಇದು ವಿಶ್ವದ ಅಗ್ರ ಕ್ರಯೋನಿಕ್ಸ್​ ಕಂಪನಿಯಾಗಿದೆ. 1400 ಸದಸ್ಯರನ್ನು ಹೊಂದಿರುವ ಈ ಕಂಪನಿ ಸತ್ತವರ ಶವವನ್ನು ಸಂರಕ್ಷಿಸಿ ಇಟ್ಟುಕೊಂಡಿದೆ. ಈಗಾಗಲೇ 233 ಮೃತದೇಹಗಳನ್ನು ತೆಗೆದಿಟ್ಟುಕೊಂಡ ಕಂಪನಿ ಮುಂದೊಂದು ದಿನ ಬದುಕಿಸಬಹುದು ಎಂದು ಅದರ ಮೇಲೆ ಸಂಶೋಧನೆ ಮಾಡುತ್ತಿದೆ.
/newsfirstlive-kannada/media/post_attachments/wp-content/uploads/2024/07/Alcor.jpg)
ಕ್ರಯೋನಿಕ್ಸ್​ ಎಂದರೇನು?
ಕ್ರಯೋನಿಕ್ಸ್​ ಎಂದರೆ ಜೀವಂತ ಕೋಶಗಳನ್ನು, ಅಂಗಾಂಶಗಳನ್ನು ಮತ್ತು ಜೈವಿಕ ವಸ್ತುಗಳನ್ನು ಕಡಿಮೆ ತಾಪಮಾನದ ಮೂಲಕ ಸಂರಕ್ಷಿಸುವ ಮತ್ತು ಘನೀಕರಿಸುವ ಪ್ರಕ್ರಿಯೆಯಾಗಿದೆ. ಮೃತದೇಹವನ್ನು 196 ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂಗ್ರಹಿಸಿಡಲಾಗುತ್ತಿದೆ.
ಕಂಪನಿಗೆ ಆಳವಾದ ನಂಬಿಕೆ!
ಕಂಪನಿಯು ವಯಸ್ಸಾಗಿ ಸತ್ತ ಮತ್ತು ರೋಗವಿಲ್ಲದೆ ಸತ್ತ ವ್ಯಕ್ತಿಗಳನ್ನು ಭವಿಷ್ಯದ ತಂತ್ರಜ್ಞಾನದ ಮೂಲಕ ಮತ್ತೆ ಬದುಕಿಸಬಹುದು ಎಂಬ ಆಳವಾದ ವಿಶ್ವಾಸವನ್ನು ಹೊಂದಿದೆ. ಅದಕ್ಕೆ ಅನುಗುಣವಾಗಿ ಸಂಶೋಧನೆ ಮಾಡುತ್ತಿದೆ.
ಅಚ್ಚರಿ ಸಂಗತಿ ಎಂದರೆ, ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಜನರು ಈ ಕುರಿತಾಗಿ ಸಂಶೋಧನೆ ಮಾಡುತ್ತಿದ್ದಾರೆ. ಶ್ರೀಮಂತರಂತೂ ಸತ್ತ ವ್ಯಕ್ತಿಗಳ ದೇಹವನ್ನು ಇಲ್ಲಿ ಸಂರಕ್ಷಿಸಲು ಮುಂದಾಗುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ಒಂದು ವೇಳೆ ಸತ್ತ ವ್ಯಕ್ತಿಯ ದೇಹವನ್ನು ಸಂರಕ್ಷಿಸಿ ಇಡಬೇಕಾದರೆ ಸಾಕಷ್ಟು ಹಣವು ಖರ್ಚಾಗುತ್ತದೆ.
ಮೃತದೇಹ ಸಂರಕ್ಷಿಸಿಡಲು ಕೋಟಿ..ಕೋಟಿ
ಹೌದು. ಸತ್ತ ವ್ಯಕ್ತಿಯನ್ನು ಕಂಪನಿ ಸುಖಾ ಸುಮ್ಮನೆ ತೆಗೆದಿಟ್ಟುಕೊಳ್ಳುತ್ತಿಲ್ಲ. ಸಂರಕ್ಷಣೆ ಮಾಡಬೇಕಾದರೆ ಅದಕ್ಕೆ ಹಣ ನೀಡಬೇಕಿದೆ. ಅದಕ್ಕಾಗಿ ಆಲ್ಕೋರ್​​ ಟ್ರಸ್ಟ್​​ ಫಂಡ್​ ವ್ಯವಸ್ಥೆಯನ್ನು ಮಾಡಿದೆ. ಕ್ರಯೋಪ್ರೆಸರ್ವ್​ ದೇಹವನ್ನು ಸಂರಕ್ಷಿಸಿ ಇಡಲು ಹಣವನ್ನು ಅನುಮತಿಸುತ್ತದೆ.
ಮೃತದೇಹ ಸಂರಕ್ಷಿಸುವ ಪ್ರಕ್ರಿಯೆಗಾಗಿ ನೀಡುವ ಹಣದಲ್ಲಿ ಒಂದು ಭಾಗ ಟ್ರಸ್ಟ್​ಗೆ ಸೇರಿದರೆ. ಮತ್ತೊಂದೆಡೆ ಸಂಶೋಧನೆಗೂ ಹಣ ಹೋಗುತ್ತದೆ. ಅಚ್ಚರಿಯ ವಿಚಾರವೆಂದರೆ ಸಂಪೂರ್ಣ ದೇಹದ ಸಂರಕ್ಷಣೆಗೆ 2 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ. ಮೆದುಳಿನ ಮೇಲೆ ಕೇಂದ್ರೀಕರಿಸುವ ನ್ಯೂರೋ ಕ್ರಯೊಪ್ರೆಸರ್ವೇಶನ್​ಗೆ 66 ಲಕ್ಷ ರೂಪಾಯಿ ವೆಚ್ಚವಾಗುತ್ತದೆ.
ಒಟ್ಟಿನಲ್ಲಿ ಸತ್ತವರನ್ನು ಬದುಕಿಸಲು ಈ ಕಂಪನಿ ನಿರಂತರ ಶೋಧನೆ, ಸಂಶೋಧನೆ ಮತ್ತು ನ್ಯಾನೋ ತಂತ್ರಜ್ಞಾನ ಮೂಲಕ ಪುನರ್​ಜನ್ಮ ನೀಡಲು ಅನ್ವೇಷಿಸುತ್ತಿದೆ. ಒಂದು ವೇಳೆ ಇದು ಸಕ್ಸಸ್​ ಆದರೆ ವಿಶ್ವದ ದಿಕ್ಕೇ ಬದಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us