/newsfirstlive-kannada/media/post_attachments/wp-content/uploads/2024/10/BBK11-1.jpg)
ಬಿಗ್​ ಬಾಸ್​​ ಸೀಸನ್​​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸ್ಪರ್ಧಿಗಳ ನಡುವಿನ ಜಗಳ ಭಾರೀ ಸದ್ದು ಮಾಡುತ್ತಿದೆ. ಲಾಯರ್​ ಜಗದೀಶ್​ ವರ್ತನೆ ಈಗ ಮನೆಮಂದಿ ತಲೆನೋವಾಗಿದ್ದು, ಸದ್ಯ ಎಲ್ಲರೂ ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಜಗದೀಶ್​ ಮನೆ ಮಂದಿಯ ಜೊತೆಗೆ ಸಿಕ್ಕ ಸಿಕ್ಕ ವಿಚಾರಕ್ಕೆ ಜಗಳವೆತ್ತುತ್ತಿದ್ದಾರೆ. ಈ ಕಾರಣದಿಂದ ಉಳಿದ ಸ್ಪರ್ಧಿಗಳಿಗೆ ಅವರ ವರ್ತನೆ ಬೇಸರ ತರಿಸಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಜಗದೀಶ್​ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!
ಮನೆಯ ಮರದ ಕಟ್ಟೆ ಬಳಿ ಅನುಷಾ, ಮೋಕ್ಷಿತಾ, ಚೈತ್ರಾ, ಗೋಲ್ಡ್​ ಸುರೇಶ್​ ಮತ್ತು ಶಿಶಿರ್​ ಚರ್ಚೆ ನಡೆಸುತ್ತಿದ್ದಾರೆ. ಗೌರವ ಕೊಟ್ಟರು ಗೌರವ ಉಳಿಸಿಕೊಳ್ಳುತ್ತಿಲ್ಲ ಎಂದು ಜಗದೀಶ್​ ಬಗ್ಗೆ ಮಾತನಾಡುತ್ತಿದ್ದಾರೆ.
ಅತ್ತ ಹಂಸಾ ಮತ್ತು ಗೌತಮಿ ಕೂಡ ಸೋಫಾ ಮೇಲೆ ಕೂಡ ಜಗದೀಶ್​ ಬಗ್ಗೆ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಯರ್​ ಜಗದೀಶ್​ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಮಂದಿಯ ಕಣ್ಣಿರಿಗೂ ಕಾರಣರಾಗಿದ್ದಾರೆ. ಸದ್ಯ ವಾರದ ಕತೆಯಲ್ಲಿ ಜಗದೀಶ್​ ಚರ್ಚೆಗೆ​ ಮುಖ್ಯ ವಿಷಯವಾಗಲಿದ್ದಾರೆ ಎಂಬ ಅನುಮಾನ ಬಿಗ್​ ಬಾಸ್​ ಅಭಿಮಾನಿಗಳನ್ನು ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us