/newsfirstlive-kannada/media/post_attachments/wp-content/uploads/2025/03/SAMOSA-1.jpg)
ಸಮೋಸಾ, ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ತಿಂಡಿ. ಪ್ರತಿ ಬೇಕರಿಗಳಲ್ಲೂ ಮಾತ್ರವಲ್ಲ ಪಾನ್ ಅಂಗಡಿಗಳಲ್ಲೂ ಕೂಡ ರುಚಿ ರುಚಿಯಾದ ಸಮೋಸಾಗಳು ನಮಗೆ ತಿನ್ನಲು ದೊರೆಯುತ್ತವೆ. ಅದು ಕೂಡ ಭಾರತದಾದ್ಯಂತ. ವಡಾಪಾವ್, ಪಾನಿಪುರಿ, ಪಾವ್ಭಾಜಿ ರೀತಿಯಲ್ಲಿಯೇ ಭಾರತದಲ್ಲಿ ಅತ್ಯಂತ ನೆಚ್ಚಿನ ತಿಂಡಿ ಹಾಗೂ ಬೇಡಿಕೆ ಹೊಂದಿರುವ ಆಹಾರ ಅಂದ್ರೆ ಅದು ಸಮೋಸಾ. ಆದ್ರೆ ಈ ಒಂದು ದೇಶದಲ್ಲಿ ಸಮೋಸಾ ತಿನ್ನುವುದಿರಲಿ. ಅದನ್ನು ತಯಾರು ಮಾಡುವುದು ಕೂಡ ಕಾನೂನು ಬಾಹಿರು. ಒಂದು ವೇಳೆ ತಯಾರು ಮಾಡುವವರು ಹಾಗೂ ಸೇವಿಸುವವರು ಸಿಕ್ಕಿ ಬಿದ್ದರೆ ಜೈಲಿಗೆ ಹೋಗುವುದು ಗ್ಯಾರಂಟಿ.
ಹೌದು, ಯಾವ ತಿಂಡಿಯನ್ನು ಭಾರತೀಯರು ಹಾಗೂ ಇತರ ದೇಶದವರು ಅತ್ಯಂತ ಪ್ರೀತಿಯಿಂದ ಸೇವಿಸುತ್ತೇವೆಯೋ ಈ ಒಂದು ತಿಂಡಿ ಸೊಮಾಲಿಯಾದಲ್ಲಿ ಸೇವಿಸುವಂತಿಲ್ಲ. ಒಂದು ವೇಳೆ ಸೇವಿಸಿದರೆ ಶಿಕ್ಷೆಯಾಗೋದು ಖಚಿತ. ಸಮೋಸವಾನ್ನು ತಯಾರು ಮಾಡುವುದು ಹಾಗೂ ಅದರ ಸೇವನೆಯನ್ನು ಬ್ಯಾನ್ ಮಾಡಿರುವ ಜಗತ್ತಿನ ಏಕೈಕ ದೇಶ ಅಂದ್ರೆ ಅದು ಸೊಮಾಲಿಯಾ. ಅಪ್ಪಿತಪ್ಪಿಯೂ ನೀವು ಸಮೋಸಾ ತಿಂದರೆ ಅಥವಾ ತಯಾರಿಸಿದರೆ ಶಿಕ್ಷೆ ಅನುಭವಿಸಲು ಸಜ್ಜಾಗಬೇಕು.
ಸೊಮಾಲಿಯದಲ್ಲಿ ಸಮೋಸಾ ಬ್ಯಾನ್ ಆಗಲು ಪ್ರಮುಖ ಕಾರಣ ಏನಂತ ಗೊತ್ತಾದ್ರೆ ನಿಮಗೆ ಶಾಕ್ ಆಗುತ್ತದೆ. ಅದಕ್ಕೆ ಪ್ರಮುಖ ಕಾರಣ ಸಮೋಸಾ ತ್ರಿಕೋನಾಕರದಲ್ಲಿರುವುದು. ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಅತ್ಯಂತ ಹತ್ತಿರವಾದ ಆಕೃತಿ
ಇದನ್ನೂ ಓದಿ:ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?
2011ರಲ್ಲಿ ಸೊಮಾಲಿಯದ ಭಯೋತ್ಪಾದಕ ಸಂಘಟನೆ ಮೊದಲ ಬಾರಿಗೆ ಸಮೋಸಾ ಮೇಲೆ ನಿರ್ಬಂಧ ಹೇರಿತು. ಅದಕ್ಕೆ ಅದು ಕೊಟ್ಟ ಕಾರಣವೂ ಕೂಡ ವಿಚಿತ್ರ. ಸಮೋಸಾದಲ್ಲಿ ಕೊಳೆತ ಮಾಂಸವನ್ನು ತುಂಬಿ ಮಾರುವ ಸಾಧ್ಯತೆ ಇರುತ್ತದೆ ಹೀಗಾಗಿ ಅದನ್ನು ಸೊಮಾಲಿಯಾದಲ್ಲಿ ಯಾರೂ ಕೂಡ ತಿನ್ನುವಂತಿಲ್ಲ ಹಾಗೂ ತಯಾರಿಸುವಂತಿಲ್ಲ ಎಂದು 2011ರಲ್ಲಿ ಮೊದಲ ಬಾರಿಗೆ ಬ್ಯಾನ್ ಮಾಡಿತು. ಅಂದಿನಿಂದ ಇಂದಿನವರೆಗೂ ಅಲ್ಲಿ ಯಾರೊಬ್ಬರು ಸಮೋಸಾ ತಿನ್ನುವುದಿಲ್ಲ ಹಾಗೂ ತಯಾರಿಸುವುದಿಲ್ಲ. ಸೊಮಾಲಿಯಾ ಪೂರ್ವ ಆಫ್ರಿಕಾದ ತೀರದಲ್ಲಿ ನೆಲೆಸಿದ್ದು ಈ ದೇಶದ ಒಟ್ಟು ಜನಸಂಖ್ಯೆ 2 ಕೋಟಿ ಇದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ