ಕಳೆದ 6 ವರ್ಷಗಳಿಂದ ಈ ದೇಶದ ಜೈಲುಗಳಲ್ಲಿ ಕೈದಿಗಳೇ ಇಲ್ಲ! ಇದೇ ಅಲ್ಲವೇ ಅಸಲಿ ರಾಮರಾಜ್ಯ

author-image
Gopal Kulkarni
Updated On
ಕಳೆದ 6 ವರ್ಷಗಳಿಂದ ಈ ದೇಶದ ಜೈಲುಗಳಲ್ಲಿ ಕೈದಿಗಳೇ ಇಲ್ಲ! ಇದೇ ಅಲ್ಲವೇ ಅಸಲಿ ರಾಮರಾಜ್ಯ
Advertisment
  • ಈ ದೇಶದಲ್ಲಿ ಕಳೆದ 6 ವರ್ಷಗಳಿಂದ ಜೈಲಿನಲ್ಲಿ ಕೈದಿಗಳೇ ಇಲ್ಲ
  • ಅಪರಾಧವನ್ನು ಸೊನ್ನೆ ಮಟ್ಟಕ್ಕೆ ಇಳಿಸಿದ ದೇಶಕ್ಕೂ ಒಂದು ಸಂಕಟ
  • ಕೈದಿಗಳೇ ಇಲ್ಲದ ಜೈಲಿನಿಂದಾಗಿ ಉದ್ಯೋಗ ಕಳೆದುಕೊಳ್ಳುವವರೆಷ್ಟು?

ನಮ್ಮ ದೇಶದಲ್ಲಿ ರಾಜಕಾರಣಿಗಳ ಭಾಷಣದ ತುಣುಕುಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ರಾಮರಾಜ್ಯದ ಪರಿಕಲ್ಪನೆಯ ಮಾತುಗಳು ಬಂದೇ ಬರುತ್ತವೆ. ಇಂದಿನಿಂದ ಅಲ್ಲ ಈ ದೇಶ ಮಹಾತ್ಮಾ ಗಾಂಧಿಜೀ ಅವರ ಕನಸಿನಿಂದಲೇ ಈ ಒಂದು ಕಲ್ಪನೆ ನಮ್ಮಲ್ಲಿ ಬಿತ್ತಲಾಗಿದೆ. ಆದರೆ ಅದು ವಾಸ್ತವವಾಗಿ ಎಷ್ಟು ನನಸಾಗಿದೆ ಎಂಬುದಕ್ಕೆ ದೊಡ್ಡ ನಿದರ್ಶನಗಳೇ ಇವೆ.  ಕ್ರೈಂ ಲೋಕದಲ್ಲಿ ನಿತ್ಯ ನೂರಾರು ಕೋಲಾಹಲವನ್ನು ನಾವು ನೋಡುತ್ತಲೇ ಇದ್ದೇವೆ. ಮಹಿಳೆಯರ ಸಂರಕ್ಷಣೆ ವಿಚಾರದಲ್ಲಿ ಇಂದಿಗೂ ಕೂಡ ಒಂದು ಆತಂಕ ಇದ್ದೇ ಇದೆ. ಸರ್ಕಾರ ಯಾವುದೇ ಇರಲಿ, ನಾಯಕರು ಯಾರೇ ಇರಲಿ ಅಸಲಿ ರಾಮರಾಜ್ಯವನ್ನು ನಾವು ಧರೆಗಿಳಿಸುವಲ್ಲಿ ಎಷ್ಟು ಸಫಲರಾಗಿದ್ದೇವೆ ಎನ್ನುವ ಪ್ರಶ್ನೆ ಇಂದಿಗೂ ಕೂಡ ನಮ್ಮಲ್ಲಿ ಕೊರೆಯುತ್ತಿದೆ. ಆದ್ರೆ ಇಲ್ಲೊಂದು ದೇಶ ಮಾತ್ರ ರಾಮರಾಜ್ಯ ಅಂದ್ರೆ ಇದೆ ಎನ್ನುವ ಮಟ್ಟಿಗೆ ತನ್ನ ದೇಶದಲ್ಲಿ ಅಪರಾಧಗಳನ್ನು ಹತ್ತಿಕ್ಕಿದೆ.

ಜಗತ್ತಿನಲ್ಲಿ ಯಾವುದಾದರೂ ಒಂದು ದೇಶ ಖಾಲಿ ಜೈಲುಗಳನ್ನು ಹೊಂದಿರುವ ಕಲ್ಪನೆಯನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ ಅಲ್ವಾ? ಆದ್ರೆ ಈ ದೇಶದಲ್ಲಿ ಕಳೆದ ಆರು ವರ್ಷಗಳಿಂದ ಎಲ್ಲಾ ಜೈಲುಗಳು ಖಾಲಿ ಇವೆ. ಒಬ್ಬನೇ ಒಬ್ಬ ಅಪರಾಧಿಯಾಗಲಿ, ಆರೋಪಿಯಾಗಲಿ ಈ ದೇಶದ ಜೈಲಿನೊಳಗೆ ಇಲ್ಲ. ಹೆಚ್ಚು ಕಡಿಮೆ ಪೊಲೀಸರಿಗೆ ಮಾಡಲು ಕೆಲಸವೇ ಇಲ್ಲದಂತಾಗಿದೆ.

ಇವೆಲ್ಲವೂ ನಂಬಲು ಸ್ವಲ್ಪ ಕಷ್ಟ ಅನಿಸಬಹುದು. ಇದು ಸಾಧ್ಯವಾ ಅನಿಸಬಹುದು ಆದ್ರೆ ಇದು ನಿಜ, ಯುರೋಪ್​ನ ಈ ಒಂದು ದೇಶದಲ್ಲಿ 2018 ರಿಂದ ಒಬ್ಬನೇ ಒಬ್ಬ ಕೈದಿ ಸೆರೆವಾಸದಲ್ಲಿಲ್ಲ. ಕ್ರೈಂ ರೇಟ್ ಅಕ್ಷರಶಃ ಸೊನ್ನೆಗೆ ಬಂದಿಳಿದಿದೆ ಈ ದೇಶದ ಹೆಸರು ನೆದರಲ್ಯಾಂಡ್​​.
ನೆದರ್​ಲ್ಯಾಂಡ್​ನಲ್ಲಿ ಕಂಬಿ ಹಿಂದೆ ತಳ್ಳಲು ಯಾವೊಬ್ಬ ಕೈದಿಯೂ ಸಿಗದೇ ಈಗಾಗಲೇ 6 ವರ್ಷಗಳು ಕಳೆದಿವೆ. 2013ರಲ್ಲಿ ಈ ಇಡೀ ದೇಶದಲ್ಲಿದ್ದಿದ್ದು ಒಟ್ಟು 19 ಕೈದಿಗಳು ಮಾತ್ರ. ಡಚ್​ನ ನ್ಯಾಯಾಂಗ ಸಚಿವಾಲಯ ಹೇಳುವ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಶೇಕಡಾ 0.9 ರ ಮಟ್ಟಿಗೆ ದೇಶದಲ್ಲಿ ಕ್ರೈಂ ರೇಟ್​ ಇಳಿಯಲಿದೆ ಎಂದು ಹೇಳಿದ್ದಾರೆ.

ಕ್ರೈಂ ರೇಟ್​ ಇಳಿದಿದ್ದಕ್ಕೆ ಕೆಲಸ ಕಳೆದುಕೊಳ್ಳಲಿದ್ದಾರೆ 2 ಸಾವಿರ ಜನ
ಒಂದು ಕಡೆ ದೇಶದಲ್ಲಿ ಕೈದಿಗಳೇ ಇಲ್ಲ, ಅಪರಾಧಗಳೆ ನಡೆಯುತ್ತಿಲ್ಲ ಎಂಬುದು ಸಂತಸದ ಸುದ್ದಿಯನ್ನು ನೆದರ್​ಲ್ಯಾಂಡ್ ಹೊಂದಿದ್ದರೆ. ಮತ್ತೊಂದು ಕಡೆ ಸಾವಿರಾರು ಜನರು ಕೆಲಸ ಕಳೆದುಕೊಳ್ಳುವ ಭಯವನ್ನು ಕೂಡ ಸೃಷ್ಟಿಯಾಗಿದೆ. ದೇಶಾದ್ಯಂತ ಜೈಲುಗಳನ್ನು ಬಂದ್ ಮಾಡುವ ಸ್ಥಿತಿ ಸೃಷ್ಟಿ ಈಗ ಬಂದಿರುವುದರಿಂದ ಸುಮಾರು 2000 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಕೇವಲ 700 ಜನರು ಮಾತ್ರ ಸರ್ಕಾರದ ಇತರ ವಿಭಾಗದಲ್ಲಿ ಕೆಲಸ ಪಡೆದುಕೊಳ್ಳಲಿದ್ದಾರೆ. ಉಳಿದವರನ್ನು ಪರ್ಮನೆಂಟ್​ ಆಗಿ ಮನೆ ಸೇರುವುದು ನಿಶ್ಚಿತವಾಗಿದೆ.

ಸದ್ಯ ಸರ್ಕಾರದ ಸಾಧನೆಯೇ ಸಂಕಟಕ್ಕೆ ದೂಡಿತಾ?
ಸದ್ಯ ಸರ್ಕಾರದ ಈ ಸಾಧನೆಯೇ ಈಗ ಹಲವು ಸಂಕಟಕ್ಕೆ ದೂಡಿದೆ. ವ್ಯವಸ್ಥೆಯನ್ನು ಮತ್ತೆ ಎಂದಿನಂತೆ ತರಬೇಕಾದ ಸ್ಥಿತಿಯಲ್ಲಿ ನೆದರ್​ಲ್ಯಾಂಡ್ ಸರ್ಕಾರವಿದೆ. ಹೀಗಾಗಿ ಮತ್ತೆ ಜೈಲುಗಳನ್ನು ಭರ್ತಿ ಮಾಡಿ ಸಿಬ್ಬಂದಿಗಳಿಗೆ ಕೆಲಸ ನೀಡಲು ನಾರ್ವೆಯಿಂದ ಕೈದಿಗಳನ್ನು ತಂದು ಇಲ್ಲಿ ತುಂಬಿ ಮತ್ತೆ ವ್ಯವಸ್ಥೆಯನ್ನು ಎಂದಿನಂತೆ ನಡೆಸಲು ಚಿಂತನೆಗಳು ಕೂಡ ನಡೆದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment