/newsfirstlive-kannada/media/post_attachments/wp-content/uploads/2024/11/SILENT-KILLER-WEAPON.jpg)
ಪ್ರತಿ ದೇಶದ ಮಿಲಟರಿ ಶಕ್ತಿಯನ್ನ ಅದರ ಸೈನಿಕರ ಸಂಖ್ಯೆ ಹಾಗೂ ಆ ದೇಶ ಹೊಂದಿರುವ ಅತ್ಯಾಧುನಿ ಶಸ್ತ್ರಾಸ್ತ್ರಗಳ ಮೇಲೆ ಅಳೆಯಲಾಗುತ್ತದೆ. ಯುದ್ಧ ಭೂಮಿಯಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಆ ದೇಶ ತಂದಿಟ್ಟು ಎದುರಾಳಿ ದೇಶಕ್ಕೆ ಸೆಡ್ಡು ಹೊಡೆಯುತ್ತೆ ಅನ್ನುವುದರ ಮೇಲೆ ಆಯಾ ದೇಶಗಳ ಮಿಲಟರಿ ಶಕ್ತಿಯನ್ನು ಅಳೆಯಲಾಗುತ್ತದೆ. ಈಗಂತೂ ಯುದ್ಧದ ಕಾಲ, ಯುರೋಪ್ ಮಧ್ಯಪ್ರಾಚ್ಯಗಳಲ್ಲಿ ಕವಿದ ಯುದ್ಧದ ಕಾರ್ಮೋಡ ಇನ್ನೂ ಕೂಡ ಸರಿದಿಲ್ಲ. ಇಂತಹ ಸಮಯದಲ್ಲಿಯೇ ಯುದ್ಧ ಸಾಮಗ್ರಿಗಳನ್ನು ಒಂದೊಂದೇ ದೇಶಗಳು ಸಂಗ್ರಹಿಸುತ್ತಿವೆ.
ಇದನ್ನೂ ಓದಿ:ಹಿಂದೂಗಳ ಮನೆ ಮೇಲೆ ಪೊಲೀಸರು, ಸೈನಿಕರಿಂದ ದಾಳಿ.. ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಕೋರಿದ ಇಸ್ಕಾನ್ ವಕ್ತಾರ
ಈಗ ಯುಎಸ್ನ ಸೆಂಟ್ ಲ್ಯೂಯಿಸ್ನಲ್ಲಿರುವ ಫ್ರೆಂಚ್ ಜರ್ಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಕೂಡ ಒಂದು ಮಹಾ ಸೈಲೆಂಟ್ ಕಿಲ್ಲರ್ನನ್ನು ಸಿದ್ಧಗೊಳಿಸಿದೆ. ನೀವು ಕೆಜಿಎಫ್ ಸಿನಿಮಾದ ದೊಡ್ಡಮ್ಮ ಎಂಬ ಗನ್ ಕೇಳಿರಬಹುದು ಇದು ಕೂಡ ಹಾಗೆಯೇ ಸದ್ಯ ಹಲವು ದೇಶಗಳು ಹೊಂದಿರುವ ಎಲೆಕ್ಟ್ರಾಮಾಗ್ನೆಟಿಕ್ ಗನ್ಗಳ ದೊಡ್ಡಮ್ಮ ಇದು. ಇದರಿಂದ ಚಿಮ್ಮಿ ಆಚೆ ಬರುವ ಶೆಲ್ಗಳು ಗಂಟೆಗೆ 11 ಸಾವಿರ ಕಿಲೋ ಮೀಟರ್ ವೇಗದಲ್ಲಿ ಸಾಗಿ ಶತ್ರು ಪಡೆಯ ವಾಯುದಾಳಿಯನ್ನ ನೌಕಾದಾಳಿಯನ್ನ ಛಿದ್ರಗೊಳಿಸುತ್ತವೆ.
ಇದನ್ನೂ ಓದಿ:ಅಮೆರಿಕದ ನೂತನ ಉಪಾಧ್ಯಕ್ಷ ಭಾರತದ ಅಳಿಯ! ತೆಲುಗು ಕುವರಿ ಉಷಾ ವ್ಯಾನ್ಸ್ ಬಗ್ಗೆ ನಿಮಗೆ ತಿಳಿದಿದೆಯೇ..?
ಈ ಒಂದು ಎಲೆಕ್ಟ್ರಾಮಾಗ್ನೆಟಿಕ್ ಗನ್ನ್ನು ವಿಶ್ವದಲ್ಲಿಯೇ ಅಸಾಧಾರಣ ಶಕ್ತಿ ಹೊಂದಿರುವ ಗನ್ ಎಂದು ಕರೆಯಲಾಗುತ್ತಿದೆ. ಇದು ಇತ್ತೀಚೆಗೆ ಸೃಷ್ಟಿಯಾಗಿರುವ ಒಂದು ಅದ್ಭುತ, ಮುಂದಿನ ತಲೆಮಾರಿಗೆ ಎಂದು ಸಿದ್ಧಪಡಿಸಲಾಗಿರುವ ಬ್ರಹ್ಮಾಸ್ತ್ರ. ಈ ಹಿಂದೆ ಅಮೆರಿಕಾ ಕೂಡ ಇಂತಹುದೆ ಎಲೆಕ್ಟ್ರಾಮಾಗ್ನೆಟಿಕ್ ರೈಲ್ಗನ್ನ್ನು ಸಿದ್ಧಪಡಿಸಲು ಸಜ್ಜಾಗಿತ್ತು. ಅದಕ್ಕಾಗಿ 3660 ಕೋಟಿ ರೂಪಾಯಿಯನ್ನು ಕೂಡ ವ್ಯಯ ಮಾಡಿತ್ತು. ಕೊನಗೆ ಆ ಪ್ರಾಜೆಕ್ಟ್ ನೆನೆಗುದಿಗೆ ಬಿದ್ದೊಯ್ತು.
ಜಪಾನ್ ಕೂಡ ಇಂತಹುದೇ ಒಂದು ಎಲೆಕ್ಟ್ರಾಮಾಗ್ನೆಟಿಕ್ ರೈಲ್ವೆಗನ್ ಸೃಷ್ಟಿ ಮಾಡಿದೆ ಜಪಾನ್ನ ಮಾರಿಟೈಮ್ ಸೆಲ್ಫ ಡಿಫೆನ್ಸ್ ಫೋರ್ಸ್ ಇದೇ ರೀತಿಯ ರೈಲ್ವೆ ಗನ್ ಸಿದ್ಧಪಡಿಸಿ ತನ್ನ ಯುದ್ಧ ಹಡಗುಗಳಲ್ಲಿ ನಿಯೋಜನೆ ಮಾಡಿತ್ತು. ಆದ್ರೆ ಸದ್ಯ ಫ್ರಾನ್ಸ್ ಸಿದ್ಧಪಡಿಸಿರುವ ಈ ದೊಡ್ಡಮ್ಮ ಈಗ ವಿಶ್ವದ ಗಮನ ಸೆಳೆಯುತ್ತಿದೆ.ಉಳಿದ ಎಲೆಕ್ಟ್ರಾಮಾಗ್ನೆಟಿಕ್ ರೈಲ್ವೆಗನ್ಗಳಿಗಿಂತ ಈ ಗನ್ ಅತಿವೇಗದಲ್ಲಿ ಹಾಗೂ ಅತಿ ನಿಖರವಾಗಿ ಶತ್ರುಪಡೆಯನ್ನು ಸರ್ವನಾಶ ಮಾಡಿಬರುತ್ತದೆ. ವಾಯುದಾಳಿ ಹಾಗೂ ನೌಕಾದಾಳಿಯನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಈ ಗನ್ಗೆ ಇದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ