/newsfirstlive-kannada/media/post_attachments/wp-content/uploads/2025/02/VATICAN-CITY.jpg)
ಇಡೀ ಜಗತ್ತು ಈಗ ಜನಸಂಖ್ಯಾ ಸ್ಫೋಟವನ್ನ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಸದ್ಯ ವಿಶ್ವದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಎಂಬ ಖ್ಯಾತಿ ನಮ್ಮ ಭಾರತದ್ದೇ ಆಗಿದೆ. ಆದ್ರೆ ಒಂದು ಅಚ್ಚರಿಯ ವಿಷಯವೆಂದರೆ ಜಗತ್ತಿನಲ್ಲಿ ಒಂದು ದೇಶವಿದೆ. ಅಲ್ಲಿ ಸುಮಾರು 96 ವರ್ಷಗಳಿಂದ ಒಂದೇ ಒಂದು ಮಗು ಹುಟ್ಟಿಲ್ಲ. ಈ ದೇಶದಲ್ಲಿ ಒಂದೇ ಒಂದು ಆಸ್ಪತ್ರೆಯೂ ಕೂಡ ಇಲ್ಲ. 21ನೇ ಶತಮಾನದಲ್ಲಿರುವ ನಾವು ಇಂತಹದೊಂದು ದೇಶ ವಿಶ್ವದಲ್ಲಿ ಅಸ್ತಿತ್ವದಲ್ಲಿದೆ ಎಂಬುದನ್ನು ಊಹಿಸುವುದೇ ಕಷ್ಟವಾಗುತ್ತದೆ. ಜಗತ್ತಿನ ಪುಟ್ಟ ದೇಶಗಳಲ್ಲೊಂದಾದ ಈ ರಾಷ್ಟ್ರ ಅತಿಹೆಚ್ಚು ರೋಮನ್ ಕ್ಯಾಥೋಲಿಕ್ ಧರ್ಮದ ಜನರನ್ನು ಹೊಂದಿದೆ. ಆ ದೇಶದ ಹೆಸರು ವ್ಯಾಟಿಕನ್ ಸಿಟಿ
ವ್ಯಾಟಿಕನ್ ಸಿಟಿಯನ್ನು ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರ ಎಂದು ಕರೆಯಲಾಆಗುತ್ತದೆ. ಅದರಾಚೆಯೂ ಇದರ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಷಯಗಳಿವೆ. ಈ ದೇಶದಲ್ಲಿ ಕಳೆದ 96 ವರ್ಷಗಳಲ್ಲಿ ಒಂದೇ ಒಂದು ಮಗು ಜನನ ಪಡೆದಿಲ್ಲ. ಈ ದೇಶ ನಿರ್ಮಾಣವಾಗಿದ್ದು 11 ಫೆಬ್ರವರಿ 1929 ರಂದು. ಅಂದಿನಿಂದ ಇಂದಿನವರೆಗೂ ಇಲ್ಲಿ ಒಂದೇ ಒಂದು ಮಗು ಹುಟ್ಟಿಲ್ಲ.
ಇದನ್ನೂ ಓದಿ:ಗುಡ್ನ್ಯೂಸ್.. ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ಬಗ್ಗೆ ಅಪ್ಡೇಟ್ಸ್..!
ವ್ಯಾಟಿಕನ್ ಸಿಟಿಯನ್ನು ಕ್ರಿಶ್ಚಿಯನ್ ಸಮುದಾಯದ ಪವರ್ ಹಬ್ ಅಂದ್ರೆ ಶಕ್ತಿಕೇಂದ್ರ ಅಂತಲೇ ಕರೆಯುತ್ತಾರೆ. ಇಲ್ಲಿರುವ ಎಲ್ಲಾ ಕ್ಯಾಥೋಲಿಕ್ ಚರ್ಚಗಳು ಮತ್ತು ಕ್ಯಾಥೋಲಿಕ್ ಕ್ರಿಶ್ಚನ್ನರನ್ನು ಜಗತ್ತು ಇದನ್ನು ಕ್ರಿಶ್ಚಿಯನ್ ಸಮುದಾಯದ ಬೇರು ಅಂತಲೇ ಕರೆಯುತ್ತಾರೆ. ಕ್ಯಾಥೋಲಿಕ್ ಚರ್ಚಗಳು ಹಾಗೂ ಪ್ರೀಸ್ಟ್ಗಳನ್ನು ಈ ದೇಶವೇ ನಿಯಂತ್ರಿಸುತ್ತದೆ.
ಈ ದೇಶ ಹುಟ್ಟಿದಾರಭ್ಯದಿಂದಲೂ ಕೂಡ ಇಲ್ಲಿ ಒಂದೇ ಒಂದು ಆಸ್ಪತ್ರೆಯೂ ಕೂಡ ನಿರ್ಮಾಣಗೊಂಡಿಲ್ಲ. ಜನರಿಂದ ಹಲವು ಬಾರಿ ಆಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆಗಳು ಬಂದಿವೆ. ಆದರೆ ಎಲ್ಲವೂ ಕೂಡ ತಿರಸ್ಕಾರಗೊಂಡಿವೆ. ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ಗರ್ಭಿಣಿಯರು ಸಿರೀಯಸ್ ಆದರೆ ಅವರಿಗೆ ರೋಮ್ಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗುತ್ತದೆ.
ಇದನ್ನೂ ಓದಿ:Nurse Leelamma: ಅಮೆರಿಕದಲ್ಲಿ ಭಾರತ ಮೂಲದ ನರ್ಸ್ ಮೇಲೆ ಬರ್ಬರ ಹಲ್ಲೆ..!
ವ್ಯಾಟಿಕನ್ ಸಿಟಿ ಸುಮಾರು 118 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಇಲ್ಲಿ ಆರೋಗ್ಯ ಸಮಸ್ಯೆಇರುವ ಯಾವುದೇ ವ್ಯಕ್ತಿಯಾಗಲಿ ಅವರು ರೋಮ್ಗೆ ಹೋಗಬೇಕಾಗುತ್ತದೆ. ಇದೇ ಕಾರಣದಿಂದಾಗಿಯೇ, ಇಲ್ಲೊಂದು ಡೆಲಿವರಿ ರೂಮ್ ಕೂಡ ಇಲ್ಲವಾದ ಕಾರಣದಿಂದಲೇ ಇಲ್ಲಿಯ ಜನರು ಮಕ್ಕಳನ್ನು ಪಡೆಯುವ ವಿಚಾರವನ್ನು ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇಶದ ಜನಸಂಖ್ಯೆ 800 ರಿಂದ 900 ಎಂದು ಹೇಳಲಾಗುತ್ತದೆ. ಆದ್ರೆ ಉಳಿದ ದೇಶಗಳಿಗೆ ಹೋಲಿಸಿದ ನೋಡಿದರೆ ಇಲ್ಲಿಯ ಕ್ರೈಮ್ ರೇಟ್ ತುಬಾ ಹೆಚ್ಚಿಗೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ