/newsfirstlive-kannada/media/post_attachments/wp-content/uploads/2025/03/WORLD-HAPPIEST-COUNTRIES.jpg)
ಸಂತೋಷದಿಂದ ಬಾಳಿ ಬದುಕುವ ಆಸೆ ಎಲ್ಲ ದೇಶದ ಎಲ್ಲ ಜನರದ್ದು. ಆದ್ರೆ ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳು, ಆರ್ಥಿಕ ಸ್ಥಿತಿಗತಿಗಳು ಹೀಗೆ ಅನೇಕ ವಿಷಯಗಳ ಮೇಲೆ ಒಂದು ದೇಶದ ಜನರು ಎಷ್ಟು ಸಂತೋಷದಿಂದ ಮತ್ತು ಎಷ್ಟು ಸಂಭ್ರಮದಿಂದ ಇದ್ದಾರೆ ಎಂಬುದು ತಿಳಿದು ಬರುತ್ತದೆ. ವಿಶ್ವದಲ್ಲಿಯೇ ಅತಿಹೆಚ್ಚು ಸಂತೋಷದಿಂದ ಇರುವ ರಾಷ್ಟ್ರಗಳ 2025 ವರ್ಷದ ಪಟ್ಟಿ ಬಿಡುಗಡೆಯಾಗಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವೆಲ್ಬೀಯಿಂಗ್ ರಿಸರ್ಚ್ ಸೆಂಟರ್ ಈ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದಲ್ಲಿ ಅತ್ಯಂತ ಸಂತೋಷದಿಂದ ಇರುವ ರಾಷ್ಟ್ರಗಳು ಹಾಗೂ ಅಸಂತೋಷ ಅಥವಾ ದುಃಖದಿಂದ ಕೂಡಿರುವ ರಾಷ್ಟ್ರಗಳ ಹೆಸರು ಉಲ್ಲೇಖವಾಗಿದೆ.
ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಿಂದ ಕೂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮತ್ತೆ ತನ್ನ ಮೊದಲನೇ ಸ್ಥಾನವನ್ನು ಈ ಬಾರಿಯೂ ಕೂಡ ಉಳಿಸಿಕೊಂಡಿದೆ. ವಿಶ್ವದ ರಾಷ್ಟ್ರಗಳಲ್ಲಿ ಫಿನ್ಲ್ಯಾಂಡ್ ರಾಷ್ಟ್ರದ ಜನರು ಅತ್ಯಂತ ಸಂತೋಷದಿಂದ ಬಾಳಿ ಬದುಕುತ್ತಾರೆ ಎಂದು ಹೇಳಲಾಗಿದೆ. ಉಳಿದಂತೆ ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವಿಡನ್ ಟಾಪ್ ಫೋರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಸಂಶೋಧಕರು ಆರ್ಥಿಕ ಸಮೃದ್ಧಿ ಹಾಗೂ ಸಕಾರಾತ್ಮಕ ಸಾಮಾಜಿಕ ದೃಷ್ಟಿಕೋನಗಳನ್ನು ಮಾನದಂಡವಾಗಿಟ್ಟುಕೊಂಡು ಈ ಒಂದು ಲಿಸ್ಟ್ನ್ನು ರೆಡಿ ಮಾಡಿದೆ.
ಇದನ್ನೂ ಓದಿ:ಡಯೆಟ್ ಪ್ಲ್ಯಾನ್ ಫಾಲೋ ಮಾಡೋರೇ ಎಚ್ಚರ.. 23 ವರ್ಷದ ಯುವತಿ ಜೀವಕ್ಕೆ ಕುತ್ತು; ಆಗಿದ್ದೇನು?
ಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಜಾರಿದ ಯುಎಸ್ ಮತ್ತು ಯುಕೆ.
ವಿಶ್ವದ ಅತ್ಯಂತ ಖುಷಿಯಿಂದ ಇರುವ ರಾಷ್ಟ್ರಗಳ ಪೈಕಿ ಟಾಪ್ 4 ರಾಷ್ಟ್ರಗಳು ತಮ್ಮ ಸ್ಥಾನವನ್ನು ಎಂದಿನಂತೆ ಕಾಪಾಡಿಕೊಂಡಿದ್ದರೆ. ವಿಶ್ವದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಂದು ಕರೆಸಿಕೊಳ್ಳುವ ಯುಎಸ್ ಹಾಗೂ ಯುಕೆ ಈ ಬಾರಿ Ranking ಪಟ್ಟಿಯಲ್ಲಿ ಕೆಳಕ್ಕೆ ಕುಸಿದಿವೆ. ಯುಎಸ್ ಒಂದು ಸಮಯದಲ್ಲಿ ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಆ ಸ್ಥಾನದಿಂದ ಕೆಳಕ್ಕೆ ಕುಸಿದಿದೆ. ತಜ್ಞರು ಹೇಳುವ ಪ್ರಕಾರ ಇಲ್ಲಿ ಬೆಳೆಯುತ್ತಿರುವ ಸಾಮಾಜಿಕ ಅಸಮಾನತೆ, ಒತ್ತಡ ಮತ್ತು ಮಾನಸಿಕ ಆರೋಗ್ಯದಲ್ಲಾದ ವಿಪರೀತ ಬದಲಾವಣೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ಇದೇ ರೀತಿ ಯುಕೆ ಕೂಡ ಈ ಹಿಂದೆ ಇದ್ದ ಸ್ಥಾನಕ್ಕೆ ಕಳೆಕ್ಕೆ ಕುಸಿದಿದೆ.
ವಿಶ್ವದ ಅತ್ಯಂತ ದುಃಖಿತ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನವನ್ನು ನಂಬರ್ ಒನ್ ದೇಶ ಎಂದು ಗುರುತಿಸಲಾಗಿದೆ. ಈ ದೇಶದ ಜನರಿಗೆ ಸಂತೋಷದ ಪದದ ಅರ್ಥವೇ ಇನ್ನೂ ಅರಿವಾಗಿಲ್ಲ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಅಫ್ಘಾನಿಸ್ತಾನ ಬಿಟ್ಟರೆ ಈ ಪಟ್ಟಿಯಲ್ಲಿ ಕಂಡು ಬರುವ ಮತ್ತಷ್ಟು ದೇಶಗಳು ಅಂದ್ರೆ ವೆಸ್ಟ್ ಆಫ್ರಿಕಾದ ಸಿಯೆರಾ ಲಿಯೋನ್ ಎರಡನೇ ಸ್ಥಾನದಲ್ಲಿದ್ದರೆ. ಲೆಬನಾನ್ ಮೂರನೇ ಸ್ಥಾನದಲ್ಲಿದೆ. ಇನ್ನು ಮಲಾವಿ, ಜಿಂಬಾಬ್ವೆ, ಬೋಟ್ಸವಾನ್, ಕಾಂಗೊಮ ಯೆಮೆನ್, ಕಾಮೊರೊಸ್ ಮತ್ತು ಲೆಸೊಥೊ ಕೂಡ ಅಸುಖಿ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ.
ಇದನ್ನೂ ಓದಿ:ಭಾರತಕ್ಕೆ ಬರ್ತಾರೆ ಸುನೀತಾ ವಿಲಿಯಮ್ಸ್.. ಯಾವಾಗ? ಗುಡ್‌ನ್ಯೂಸ್ ಇಲ್ಲಿದೆ!
ಇನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಯಲಯದ ರಿಸರ್ಚ್ ಸೆಂಟರ್ ನಡೆಸಿರುವ ಅಧ್ಯಯನದಲ್ಲಿ ವಿಶ್ವದಲ್ಲಿ ಅತಿಹೆಚ್ಚು ಸಂತೋಷದಿಂದ ಇರುವ ರಾಷ್ಟ್ರಗಳಲ್ಲಿ ಭಾರತಕ್ಕೆ 118ನೇ ಸ್ಥಾನ ಸಿಕ್ಕಿದೆ. ಈ ಹಿಂದೆ ಭಾರತ 126ನೇ ಸ್ಥಾನದಲ್ಲಿತ್ತು. ಈಗ 118ನೇ ಸ್ಥಾನಕ್ಕೇರಿದೆ. ಇನ್ನುಳಿದಂತೆ ನೇಪಾಳ,ಪಾಕಿಸ್ತಾನ, ಉಕ್ರೈನ್ ಮತ್ತು ಪ್ಯಾಲಿಸ್ತೇನ್ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ