newsfirstkannada.com

1992ರಿಂದ ಇಟ್ಟಿಗೆಗಳಲ್ಲಿ ರಾಮನನ್ನು ಕಾಣುತ್ತಿದೆ ಈ ಕುಟುಂಬ.. ಈ ಕರಸೇವಕನ ಕತೆಯೇ ವಿಚಿತ್ರ!

Share :

Published January 21, 2024 at 9:47am

    ಸಾಕ್ಷಾತ್ ಶ್ರೀರಾಮನನ್ನ ಇಟ್ಟಿಗೆಯಲ್ಲಿ ಕಾಣುತ್ತಿರುವ ಕುಟುಂಬ

    ಮನೆಯಲ್ಲಿ ಇಟ್ಟಿಗೆಯನ್ನಿಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಿದೆ ಈ ಫ್ಯಾಮಿಲಿ

    ಪ್ರತಿ ಶನಿವಾರ, ಶ್ರೀರಾಮ ನವಮಿಯಂದು ನಡೆಯುತ್ತೆ ವಿಶೇಷ ಪೂಜೆ

ತುಮಕೂರು: ಇಟ್ಟಿಗೆಗಳಲ್ಲಿ ಸಾಕ್ಷಾತ್ ಶ್ರೀರಾಮ ನನ್ನ ಕಾಣುತ್ತಿದೆ ಈ ಕುಟುಂಬ. ಕರಸೇವಕ ಶಿವಣ್ಣ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ಗೋಚರಿಸಿತ್ತು ಶ್ರೀರಾಮನ ಮೂಲ ಗದ್ದುಗೆಯಲ್ಲಿನ ನಾಲ್ಕು ಇಟ್ಟಿಗೆಯನ್ನ ತನ್ನ ಜೊತೆ ಹೊತ್ತು ತಂದಿದ್ದಾರೆ.

ಈ ಶ್ರೀರಾಮನ ಮೂಲಗದ್ದುಗೆಯ ಮನೆಯಲ್ಲಿ ಇಟ್ಟಿಗೆಗೆ ಪ್ರತಿನಿತ್ಯ ಪೂಜೆ ಮಾಡುತ್ತಾರೆ. ಕರಸೇವಕನ ಕುಟುಂಬ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದೆ. ಶಿವಣ್ಣ ಅಯೋಧ್ಯೆಗೆ ಎರಡು ಬಾರಿ ಕರಸೇವಕರಾಗಿ ಹೋಗಿ ಬಂದಿದ್ದಾರೆ. ಬರುವಾಗ ನಾಲ್ಕು ಇಟ್ಟಿಗೆಗಳನ್ನು ತಂದು ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ನಿತ್ಯ ಪೂಜೆ ಮಾಡುತ್ತಿದ್ದಾರೆ.

ಪ್ರತಿ ಶನಿವಾರ, ಶ್ರೀರಾಮ ನವಮಿಯಂದು ವಿಶೇಷ ಪೂಜೆ ಸಹ ಸಲ್ಲಿಸುತ್ತಾರೆ. ಇಂದಿಗೂ ಪ್ರತಿ ವರ್ಷ ಶ್ರೀರಾಮನವಮಿಯಂದು ವಿಶೇಷ ಪೂಜೆ ಮಾಡಿ ಭಕ್ತರಿಗೆ ಪ್ರಸಾದ ಹಂಚುತ್ತಿದ್ದಾರೆ. ಇದೀಗ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆ ಇಡೀ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1992ರಿಂದ ಇಟ್ಟಿಗೆಗಳಲ್ಲಿ ರಾಮನನ್ನು ಕಾಣುತ್ತಿದೆ ಈ ಕುಟುಂಬ.. ಈ ಕರಸೇವಕನ ಕತೆಯೇ ವಿಚಿತ್ರ!

https://newsfirstlive.com/wp-content/uploads/2024/01/Bricks.jpg

Load More