₹30 ಲಕ್ಷ ಕೋಟಿ ಆಸ್ತಿ, 1000ಕ್ಕೂ ಹೆಚ್ಚು ಕುಟುಂಬ ಸದಸ್ಯರು; ಒಂದು ತೈಲ ರಾಷ್ಟ್ರವನ್ನೇ ಆಳುತ್ತಿದೆ ಈ ಕುಟುಂಬ!

author-image
Gopal Kulkarni
Updated On
₹30 ಲಕ್ಷ ಕೋಟಿ ಆಸ್ತಿ, 1000ಕ್ಕೂ ಹೆಚ್ಚು ಕುಟುಂಬ ಸದಸ್ಯರು; ಒಂದು ತೈಲ ರಾಷ್ಟ್ರವನ್ನೇ ಆಳುತ್ತಿದೆ ಈ ಕುಟುಂಬ!
Advertisment
  • ವಿಶ್ವದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಈ ಕುಟುಂಬವೂ ಒಂದು
  • ಈ ಕುಟುಂಬದ ಸದಸ್ಯರ ಸಂಖ್ಯೆ 1000 ಕ್ಕೂ ಹೆಚ್ಚು ಅಂದರೆ ನಂಬಲೇಬೇಕು
  • 3 ಶತಮಾನಗಳ ಕಾಲ ಈ ದೇಶವನ್ನು ಆಳಿಕೊಂಡು ಬಂದಿದೆ ಈ ಕುಟುಂಬ

ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 21 ಮತ್ತು 22 ರಂದು ಕುವೈತ್​ಗೆ ಎಮಿರ್ ಆಫ್ ಕುವೈತ್​ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಈ ಒಂದು ಎಮಿರ್ ಆಫ್ ಕುವೈತ್ ಕುವೈತ್​ನ ಅಲ್ ಸಬಾನ್ ಫ್ಯಾಮಿಲಿಯೆಂದು ಜನಪ್ರಿಯ ಪಡೆದುಕೊಂಡಿರುವ ರಾಯಲ್ ಕುಟುಂಬ. 1752 ರಿಂದ ಇಲ್ಲಿಯವರೆಗೂ ಅಂದರೆ ಸುಮಾರು 300 ವರ್ಷಗಳ ಕಾಲ ಕುವೈತ್​ನ್ನು ಆಳಿಕೊಂಡು ಬಂದಿರುವ ಕುಟುಂಬ.
ರಣ ರಣ ಮರುಭೂಮಿಯಿಂದ ಆಯಿಲ್ ಗ್ಯಾಸ್ ಹಬ್​ ಆಗಿ ಬೆಳೆದ ಕುವೈತ್​ನ್ನು ಇದೇ ಕುಟುಂಬ ನೋಡುತ್ತಾ ಬಂದಿದೆ. ಈ ಕುಟುಂಬ ಕೇವಲ ತನ್ನ ಅಧಿಕಾರದಿಂದ ಗುರುತಿಸಿಕೊಂಡು ಬಂದಿಲ್ಲ. ತನ್ನ ಕುಟುಂಬ ಸದಸ್ಯರ ಸಂಖ್ಯೆಯಿಂದಲೂ ಗುರುತಿಸಿಕೊಂಡು ಬಂದಿದೆ. ಈ ಕುಟುಂಬದ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಇಲ್ಲಿ ನಾವು ನಿಮಗೆ ಹೇಳುತ್ತೇವೆ.

publive-image

ಕುವೈತ್ ಗಲ್ಫ್ ರಾಷ್ಟ್ರಗಳಲ್ಲಿ ಒಂದು. 1752 ರಿಂದಲೂ ಇಲ್ಲಿ ರಾಜಪ್ರಭತ್ವದ ಆಡಳಿತವಿದೆ. ಇಲ್ಲಿಯ ರಾಜನನ್ನು ಎಮಿರ್ ಎಂದು ಕರೆಯಲಾಗುತ್ತದೆ. ಸದ್ಯ ಕುವೈತ್​ನ್ನು  ಎಮಿರ್ ಮಿಶಾಲ್-ಅಲ್​-ಅಹ್ಮದ್-ಅಲ್​ ಜಬೀರ್-ಅಲ್-ಸಬಾಹ್ ಆಗಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಈ ಕುಟುಂಬವೂ ಕೂಡ ಒಂದು. ಈ ಕುಟುಂಬದ ಬಳಿ ಇರುವ ಒಟ್ಟು ಆಸ್ತಿ 360 ಬಿಲಿಯನ್ ಡಾಲರ್​, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 30.07 ಲಕ್ಷ ಕೋಟಿ ರೂಪಾಯಿಗಳು. ಈ ಕುಟುಂಬ ಅಮೆರಿಕಾ ಸ್ಟಾಕ್ ಮಾರ್ಕೆಟ್​ನಲ್ಲಿ ಸಾಕಷ್ಟು ತನ್ನ ಹಣವನ್ನು ಹೂಡಿದೆ.

ಕುವೈತ್​ನಲ್ಲಿ ಪ್ರಮುಖ ಆದಾಯದ ಮೂಲ ಅಂದರೆ ಅದು ತೈಲ ಮಾರಾಟದಿಂದ ಬರುವಂತದು. ಈ ಎಮಿರ್ ಕುಟುಂಬದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ತಮ್ಮನ್ನು ತಾವು ಈ ಆಯಿಲ್ ಬ್ಯುಸಿನೆಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಕುವೈತ್​ನಿಂದ ದೊಡ್ಡ ಮಟ್ಟದಲ್ಲಿ ಕಚ್ಚಾತೈಲವು ಚೀನಾ ಹಾಗೂ ಭಾರತಕ್ಕೆ ಪೂರೈಕೆಯಾಗುತ್ತದೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಇದೆ ಮನಮೋಹನ್ ಸಿಂಗ್ ಹೆಸರಲ್ಲಿ ಒಂದು ಶಾಲೆ..!

ಆಯಿಲ್ ಎಕ್ಸ್​ಪೋರ್ಟ್ ಆಚೆ ಈ ಕುಟುಂಬ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ಕೂಡ ತನ್ನನ್ನು ತಾನು ಗುರುತಿಸಿಕೊಂಡಿದೆ. ಅಲ್ಲಿಯೂ ಕೂಡ ಹಣ ಹೂಡಿಕೆ ಮಾಡಿದೆ. ಇತ್ತ ಟೆಲಿಕಮ್ಯೂನಿಕೇಷನ್ ಹಾಗೂ ಅಮೆರಿಕನ್ ಕಂಪನಿಗಳಿಗೂ ಹಣ ಹೂಡಿಕೆ ಮಾಡುವ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಈ ಕುಟುಂಬ ಗಳಿಸುತ್ತಿದೆ.ಕುವೈತ್​ನಲ್ಲಿರುವ ಕುವೈತ್ ಇನ್ವೆಸ್ಟ್​ಮೆಂಟ್ ಅಥಾರಿಟಿಯನ್ನು ಇದೇ ಕುಟುಂಬ ನಿರವಹಿಸುತ್ತದೆ. ಇದರಿಂದ ಕೆಐಎ ಬ್ಲ್ಯಾಕ್​ರಾಕ್, ಅಸೋಸಿಯೆಟೆಡ್ ಬ್ರಿಟಿಶ್ ಪೋರ್ಟ್ಸ್​, ಸಿಟಿಗ್ರೂಪ್ ಮತ್ತು ಮೆರ್ರಿಲ್ ಲೈಂಚ್​ನಂತಹ ಕಂಪನಿಗಳಲ್ಲಿ ಹೂಡಿಕೆಯನ್ನು ಕೂಡ ಮಾಡಿದೆ. ಅದು ಮಾತ್ರವಲ್ಲ ಸೇವಾ ಕ್ಷೇತ್ರಗಳಾದ ಕೋಟೆ, ವಿಮಾನಯಾನ ಹೀಗೆ ಅನೇಕ ಸೇವಾವಲಯಗಳಲ್ಲೂ ಹೂಡಿಕೆ ಮಾಡಿದೆ.

ಇದನ್ನೂ ಓದಿ: ಅಭಿಮಾನಿ ದೇವರುಗಳ ಪೂಜಾ ಫಲ.. ಶಿವಣ್ಣನಿಗೆ ಪುನರ್ಜನ್ಮ! ಏನಾಗಿತ್ತು? ಆಪರೇಷನ್ ಹೇಗಾಯ್ತು?

publive-image

ಕುವೈತ್ ಕಿಂಗ್ ಕುಟುಂಬಕ್ಕೆ ತನ್ನದೇ ಆದ ಮಹಾ ಅರಮನೆಯೊಂದು ಇದೆ. ಅದನ್ನು ಬಯಾನ್ ಪ್ಯಾಲೆಸ್ ಎಂದು ಕರೆಯಲಾಗುತ್ತಿದ್ದು. ಒಟ್ಟು 1045 ಕೋಟಿ ರೂಪಾಯಿ ವೆಚ್ಚದಲ್ಲಿ ಅದು ಸಿದ್ಧಗೊಂಡಿದೆ. ಅದರ ಜೊತೆಗೆ ವಿಶ್ವದ ಅತ್ಯಂತ ಐಷಾರಾಮಿ ಕಾರುಗಳು ಎನಿಸಿಕೊಂಡಿರುವ ಅನೇಕ ಕಾರುಗಳು ಇವರ ಮನೆಯ ಅಂಗಳದಲ್ಲಿ ನಿಂತಿವೆ. ಪೊರ್ಷೆ 911 ಟರ್ಬೋ ಎಸ್, ಫೆರಾರಿಽ ಎಫ್​40, ರೋಲ್ಸ್​ ರಾಯ್ಸ್​ ಮತ್ತು ಪೊರ್ಷೆ ಕ್ಯಾರೆರಾದಂತಹ ಐಷಾರಾಮಿ ಕಾರುಗಳನ್ನು ಈ ಕುಟುಂಬ ಹೊಂದಿದೆ. ಇದು ಮಾತ್ರವಲ್ಲ ಸೌದಿ ಅರೇಬಿಯಾ ಹಾಗೂ ಈಜಿಪ್ಟ್​ನ ಅತ್ಯಂತ ಜನಪ್ರಿಯ ತಳಿಯ ಕುದುರೆಗಳನ್ನು ಕೂಡ ಈ ಒಂದು ಕುಟುಂಬ ಹೊಂದಿದೆ. 1000 ಎಕರೆಯಲ್ಲಿ ಈ ಕುಟುಂಬ ಅರೇಬಿಯನ್ ಹಾರ್ಸ್​ ಸೆಂಟರ್ ಎಂದು ಕುದುರೆಗಳನ್ನು ಸಾಕಲು ಫಾರ್ಮ್​ಹೌಸ್​ ರೀತಿಯಲ್ಲಿಯೇ ಒಂದು ಕುದುರೆ ಕೇಂದ್ರವನ್ನು ತೆರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment