/newsfirstlive-kannada/media/post_attachments/wp-content/uploads/2024/12/Biggest-Land-Lord.jpg)
ಈ ಒಂದು ಕುಟುಂಬದ ಬಳಿಯೇ ಇದೆ ವಿಶ್ವದ ಶೇಕಡಾ 16 ರಷ್ಟು ಭೂಮಿ. ಈ ಜಗತ್ತಿನಲ್ಲಿಯೇ ಅತಿಹೆಚ್ಚು ಭೂಮಿಯನ್ನು ಹೊಂದಿದ ಭೂಮಾಲೀಕರು ಎಂಬ ಖ್ಯಾತಿಯನ್ನು ಕೂಡ ಪಡೆದಿದೆ. ಜಾಗತಿಕವಾಗಿ ಇವರು ದಕ್ಷಿಣ ತುದಿಯಿಂದ ಉತ್ತರದ ತುದಿಯವರೆಗೂ ತಮ್ಮ ಭೂಮಿಯನ್ನು ಹೊಂದಿದ್ದಾರೆ. ಅದರಲ್ಲಿ ಕೃಷಿ ಭೂಮಿ ಸೇರಿದಂತೆ, ದಟ್ಟವಾದ ಕಾಡು, ಪಟ್ಟಣಗಳ ರಿಯಲ್ ಎಸ್ಟೇಟ್ಗಳು, ಪ್ರಾಚೀನ ಕರಾವಳಿ ಪ್ರದೇಶಗಳು ಕೂಡ ಇವೆ. ಇದೆಲ್ಲವನ್ನು ನೋಡಿಕೊಳ್ಳಲು ನಿರ್ವಹಣೆ ಮಾಡಲು ಅಂತಲೇ ದಿ ಕ್ರೌನ್ ಎಸ್ಟೇಟ್ ಎಂಬ ಸಂಸ್ಥೆಯೂ ಕೂಡ ಇದೆ.
ಈಗ ನಿಮಗೆ ಆಶ್ಚರ್ಯವಾಗಬಹುದು, ಯಾರ ಬಳಿ ಇಷ್ಟೊಂದು ಭೂಮಿ ಹೀಗೆ ಉಳಿದುಕೊಂಡಿದೆ ಎಂದು. ಅದು ಬೇರೆ ಯಾರೂ ಅಲ್ಲ ಬ್ರಿಟನ್ನ ಐಷಾರಾಮಿ ಕುಟುಂಬ ಕಿಂಗ್ 3ನೇ ಚಾರ್ಲ್ಸ್ರದ್ದು. ಕ್ವೀನ್ ಎಲಿಜಬೆತ್ ನಿಧನದ ನಂತರ ಈ ಎಲ್ಲಾ ಸಾಮ್ರಾಜ್ಯಕ್ಕೆ ಸದ್ಯ ಕಿಂಗ್ 3ನೇ ಚಾರ್ಲ್ಸ್ ಅವರೇ ಅಧಿಪತಿ. ಆದರೆ ಇದನ್ನು 3ನೇ ಚಾರ್ಲ್ಸ್ ಖಾಸಗಿಯಾಗಿ ಆಳುವುದಿಲ್ಲ. ಈ ಎಲ್ಲಾ ಭೂಮಿಯನ್ನು ರಾಜರ ಉಸ್ತುವಾರಿಕೆಯಲ್ಲಿ ಸಾರ್ವಜನಿಕರ ಉಪಯೋಗಕಕ್ಕೆ ಹಾಗೂ ನಿರ್ವಹಣೆಗೆ ಬಿಡಲಾಗಿದೆ.
ಇತ್ತೀಚೆಗೆ ನಡೆದ ಒಂದು ಅಧ್ಯಯನದ ಪ್ರಕಾರ 3ನೇ ಕಿಂಗ್ ಚಾರ್ಲ್ಸ್ ಸಾಗರೋತ್ತರವಾಗಿಯೂ ಕೂಡ ಸುಮಾರು 600 ಕೋಟಿ ಎಕರೆಗೂ ಅಧಿಕ ಭೂಮಿಯನ್ನು ಹೊಂದಿದ್ದಾರೆ. ಇವರ ಭೂಮಿಯು ವಿಶ್ವದ ಹಲವು ಪ್ರದೇಶಗಳಲ್ಲಿ ಇವೆ. ಗ್ರೇಟ್ ಬ್ರಿಟನ್ ಸೇರಿದಂತೆ ಐರ್ಲ್ಯಾಂಡ್, ಸ್ಕಾಟ್ಲ್ಯಾಂಡ್, ವೇಲ್ಸ್, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲೆಲ್ಲಾ ಈ ಕುಟುಂಬದ ನೂರಾರು ಕೋಟಿ ಎಕರೆ ಭೂಮಿಯಿದೆ. ಇದನ್ನು ಒಟ್ಟು ವಿಶ್ವಕ್ಕೆ ಹೋಲಿಸಿ ನೋಡಿದಾಗ ವಿಶ್ವದ ಶೇಕಡಾ 16.6ರಷ್ಟು ಭೂಮಿ ಕೇವಲ ಈ ಒಂದು ಕುಟುಂಬದ ಕೈವಶದಲ್ಲಿದೆ.
ಇದನ್ನೂ ಓದಿ:ಸಿರಿಯಾದಿಂದ ಅಸ್ಸಾದ್ ಎಸ್ಕೇಪ್! ಕುಸಿದು ಬೀಳುತ್ತಾ ಬಡವರ ಕೊಕೆನ್ ಉತ್ಪಾದನೆ? ಏನಿದು ಕ್ಯಾಪ್ಟಾಗೊನ್?
ಈ ಎಲ್ಲಾ ಆಸ್ತಿಗಳನ್ನು ದಿ ಕ್ರೌನ್ ಎಸ್ಟೇಟ್ ಎಂಬ ಸಂಸ್ಥೆಯು ನಿರ್ವಹಣೆ ಮಡುತ್ತಿದೆ. ರಿಯಲ್ ಎಸ್ಟೇಟ್ ಸ್ವಾಧೀನ ಪ್ರಕ್ರಿಯೆಗಳೆಲ್ಲವೂ ಇವರದೇ ಜವಾಬ್ದಾರಿಯಲ್ಲಿ ನಡೆಯತ್ತದೆ.ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಬೇಕಾದರು. ಒಂದು ಮರಳು, ಕಲ್ಲು, ಕಲ್ಲಿದ್ದಲನ್ನು ತೆಗೆದುಕೊಳ್ಳಬೇಕಾದರೂ ಕೂಡ ಈ ಒಂದು ಸಂಸ್ಥೆ ಅಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರ ಉಸ್ತುವಾರಿಕೆಯಲ್ಲಿಯೇ ಎಲ್ಲವೂ ನಡೆದು ಹೋಗುತ್ತದೆ.
ಇದನ್ನೂ ಓದಿ:38 ಪ್ಲೇನ್..300 ಕಾರ್.. ಅದಾನಿ, ಅಂಬಾನಿಯಷ್ಟು ಶ್ರೀಮಂತನಲ್ಲದಿದ್ದರೂ ಐಷಾರಾಮಿ ಬದುಕಿನ ‘ರಾಜ’ ಈತ
ಇದರ ಜೊತೆಗೆ ಕಿಂಗ್ ಬಳಿ ಖಾಸಗಿಯಾಗಿಯೇ ಸುಮಾರು 18 ಸಾವಿರ ಹೆಕ್ಟರ್ನಷ್ಟು ಭೂಮಿಯಿದೆ. ಇದರ ಬೆಲೆ 654 ಮಿಲಿಯನ್ ಡಾಲರ್ನಷ್ಟು ಎಂದು ಹೇಳಲಾಗುತ್ತದೆ.
ಈ ಒಂದು ಕುಟುಂವನ್ನು ಬಿಟ್ಟರೆ ಅತಿಹೆಚ್ಚು ಭೂಮಿಯನ್ನು ಹೊಂದಿದ ಮತ್ತೊಂದು ಕುಟುಂಬ ಅಂದ್ರೆ ಅದು ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಕುಟುಂಬ. ಇವರ ಬಳಿ 8 ಲಕ್ಷ 30 ಸಾವಿರ ಸ್ಕ್ವೇರ್ ಮೈಲ್ನಷ್ಟು ಭೂಮಿಯಿದೆ. ಈ ಒಂದು ಕುಟುಂಬ ಸೌದಿಯ ಐಷಾರಾಮಿ ಕುಟುಂಬ ಎಂದೇ ಈ ಹಿಂದಿನಿಂಲೂ ಗುರುತಿಸಿಕೊಂಡು ಬಂದಿದೆ. ವಿಶ್ವದ ಅತ್ಯಂತ ಪ್ರಭಾವಶಾಲಿ ಕುಟುಂಬದಲ್ಲಿ ಸೌದಿ ರಾಜಕುಮಾರನ ಕುಟುಂಬವು ಕೂಡ ಬರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ