/newsfirstlive-kannada/media/post_attachments/wp-content/uploads/2025/03/CHITRA-PURUSHOTHAM.jpg)
ಒಂದು ಕಾಲ ಇಂತು ಕಣ್ರೀ.. ಹುಡುಗು ಮಾತ್ರ ಆ ಕೆಲಸ ಮಾಡಬೇಕು. ಜಿಮ್ ಮಾಡಬೇಕು, ಆಚೆ ಹೋಗಿ ದುಡಿಯಬೇಕು. ಆದ್ರೆ ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಿಕೊಂಡು ಇರಬೇಕು. ಕೆಲಸಕ್ಕೆಂದು ಆಚೆ ಹೋಗಬಾರದು ಅಂತ ಒಂದೇ ಚೌಕಟ್ಟಿನಲ್ಲಿ ಮಹಿಳೆಯರು ಕಾಲ ಕಳೆಯುತ್ತಿದ್ದಳು. ಆದ್ರೆ ಈಗ ಹಾಗಲ್ಲ. ಕಾಲ ಬದಲಾಗಿದೆ. ಜನರ ಆಲೋಚನೆ ಕೂಡ ಬದಲಾಗಿ ಬಿಟ್ಟಿದೆ. ಇದಕ್ಕೆ ಮತ್ತೊಂದು ಸತ್ಯ ಉದಾಹರಣೆ ಎಂದರೆ ಅದು ಚಿತ್ರಾ ಪುರುಷೋತ್ತಮ್.
ಇದನ್ನೂ ಓದಿ: ಗಂಡನ ಮನೆಗೆ ಬಂದ 3 ದಿನದಲ್ಲೇ 5 ತಿಂಗಳ ಬಾಣಂತಿ ಕೊಲೆ ಆರೋಪ.. ಹಸುಗೂಸು ಅನಾಥ
ಹೌದು, ಸುಮಾರು ಒಂದು ವಾರಗಳಿಂದ ಇಂಟರ್ನೆಟ್‌ನಲ್ಲಿ ಈ ಚಿತ್ರಾ ಪುರುಷೋತ್ತಮ್ ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ. ಚಿತ್ರಾ ಪುರುಷೋತ್ತಮ್ ಒಬ್ಬ ಬಾಡಿ ಬಿಲ್ಡರ್. ಹೆಮ್ಮೆಯ ವಿಚಾರ ಎಂದರೆ ಚಿತ್ರಾ ಪುರುಷೋತ್ತಮ್ ಕರ್ನಾಟಕದವರು. ಅದರಲ್ಲೂ ನಮ್ಮ ಬೆಂಗಳೂರಿನವರು. ಸಾಮಾನ್ಯವಾಗಿ ನಾವೆಲ್ಲಾ ಪುರುಷ ಬಾಡಿ ಬಿಲ್ಡರ್ ಅನ್ನು ನೋಡಿರುತ್ತೇವೆ. ಆದ್ರೆ ಪುರುಷರಂತೆ ದೇಹದಾಡ್ಯ ಮಾಡುತ್ತಿದ್ದಾರೆ ಮಹಿಳೆಯರು. ವಿದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಸದ್ಯ ಮಹಿಳೆಯರು ದೇಹದಾಡ್ಯ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆಂದೇ ತಯರಾಗುತ್ತಿದ್ದಾರೆ.
ಇದೇ ಸಾಲಿನಲ್ಲಿ ಸದ್ಯ ಎಲ್ಲಿ ನೋಡಿದ್ರೂ ಚಿತ್ರಾ ಪುರುಷೋತ್ತಮ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲೂ ಬಾಡಿ ಬಿಲ್ಡರ್ ಆಗಿರೋ ಚಿತ್ರಾ ಪುರುಷೋತ್ತಮ್ ಅವರು ಸಾಂಪ್ರದಾಯಿಕವಾಗಿ ಸೀರೆಯುಟ್ಟು, ವಧುವಿನ ಗೆಟಪ್‌ನಲ್ಲಿ ರೆಡಿಯಾಗಿ ಫೋಟೋಗೆ ಫೋಸ್ ಕೊಟ್ಟ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ.
ಮೂಲತಃ ಕರ್ನಾಟಕದ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಅವರು ತಮ್ಮ ಅದ್ಭುತ ಮೈಕಟ್ಟು ಮತ್ತು ವಿಶಿಷ್ಟ ವಧುವಿನ ಲುಕ್‌ನಿಂದ ಇಂಟರ್ನೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ವಧುವಿನ ಗೆಟಪ್‌ನಲ್ಲಿ ಚಿತ್ರಾ ತಮ್ಮ ಮಸಲ್ಸ್‌ನ್ನು ತೋರಿಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ. ಫಿಟ್‌ನೆಸ್ ಮತ್ತು ಬಾಡಿ ಬಿಲ್ಡಿಂಗ್‌ಗೆ ಇವರು ಹೆಸರುವಾಸಿಯಾಗಿದ್ದಾರೆ.
View this post on Instagram
ಚಿತ್ರಾ ಪುರುಷೋತ್ತಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮದುವೆಯ ದಿನದಂದು ಚಿತ್ರಾ ಅವರರು ಹಳದಿ ಮತ್ತು ನೀಲಿ ಕಾಂಜೀವರಂ ಸೀರೆಯನ್ನು ಧರಿಸಿದ್ದರು. ತಮ್ಮ ಫಿಟ್‌ನೆಸ್ ಪ್ರದರ್ಶಿಸುವ ಸಲುವಾಗಿ ಬ್ಲೌಸ್‌ನ್ನು ಧರಿಸಿರಲಿಲ್ಲ. ಇದೇ ವಿಡಿಯೋಗೆ 37.1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದೇ ವಿಡಿಯೋ ನೋಡಿದ ನೆಟ್ಟಗರು ಫುಲ್ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ