/newsfirstlive-kannada/media/post_attachments/wp-content/uploads/2025/04/SHOLEY-MOVIE.jpg)
1975ನೇ ಇಸ್ವಿಯಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ಅಂದ್ರೆ ಅದು ಶೋಲೆ. ಇಂದಿಗೂ ಅಮಿತಾಬಚ್ಚನ್ ಹೆಸರು ಕೇಳಿ ಬಂದರೆ ಥಟ್ ಅಂತ ನಮ್ಮ ಮನಸ್ಸಿನಲ್ಲಿ ಮೂಡುವುದು ಶೋಲೆ ಸಿನಿಮಾ. ಭಾರತೀಯ ಚಿತ್ರರಂಗ ಎಂದೂ ಮರೆಯದ ಸಿನಿಮಾ ಆಗಿ ಶೋಲೆ ಉಳಿದುಕೊಂಡಿತು. ಆ ಸಮಯದಲ್ಲಿ ಶೋಲೆಗೆ ಮುಂದೆ ದೊಡ್ಡ ದೊಡ್ಡ ಸಿನಿಮಾಗಳು ನಿಲ್ಲಲಿಲ್ಲ. ಆದ್ರೆ ಒಂದು ಸಿನಿಮಾ ಮಾತ್ರ ಆ ಕಾಲದಲ್ಲಿ ಶೋಲೆಗೆ ಭರ್ಜರಿಯಾಗಿ ಟಕ್ಕರ್ ಕೊಟ್ಟಿತ್ತು. ಶೋಲೆ, ಸಂಪೂರ್ಣವಾಗಿ ಹೊಡೆದಾಟ, ಬಡಿದಾಟ, ಆ್ಯಕ್ಷನ್ ಸಿನಿಮಾವಾಗಿ ಜನಪ್ರಿಯತೆ ಗಳಿಸಿದರೆ, ಶೋಲೆಗೆ ಟಕ್ಕರ್ ಕೊಟ್ಟ ಈ ಸಿನಿಮಾ ಸಂಪೂರ್ಣ ಭಕ್ತಿಮಯವಾಗಿ ತುಂಬಿತ್ತು. ದೇವತೆಗಳ ಆರಾಧನೆಯಿಂದ ಕೂಡಿತ್ತು ಈ ಸಿನಿಮಾ ಅಂದು ಶೋಲೆಗೆ ದೊಡ್ಡ ಟಕ್ಕರ್ ಕೊಟ್ಟಿತ್ತು.
1975ರಲ್ಲಿಯೇ ರಿಲೀಸ್ ಆದ ಮತ್ತೊಂದು ಸಿನಿಮಾ ಅಮದ್ರೆ ಅದು ‘ಜೈ ಸಂತೋಷಿ ಮಾ’ ಆಗಸ್ಟ್ 15, 1975ರಲ್ಲಿ ರಿಲೀಸ್ ಆದ ಸಿನಿಮಾ, ತನ್ನತ್ತ ಪ್ರೇಕ್ಷಕರನ್ನು ಆಯಸ್ಕಾಂತದಂತೆ ಸೆಳೆಯಿತು. ಕುಟುಂಬಕ್ಕೆ ಕುಟುಂಬವೇ ಸಂತೋಷಿ ಮಾ ಕಥಾಭಾಗವನ್ನು ನೋಡಲು ದೂರದಿಂದ ಬರುತ್ತಿದ್ದರು. ಇನ್ನು ಹಳ್ಳಿಯಿಂದ ಹಲವಾರು ಬಂಡಿಗಳನ್ನು ಕಟ್ಟಿಕೊಂಡು ಈ ಸಿನಿಮಾ ನೋಡಲು ಬರುತ್ತಿದ್ದರು. ಈ ಸಿನಿಮಾಗೆ ಸಂಬಂಧಿಸಿದ ಅನೇಕ ವಿಷಯಗಳು ಪ್ರಸ್ತುತವಾಗಿ ಇಂದಿಗೂ ಕೂಡ ಚರ್ಚೆಯಲ್ಲಿವೆ.
ಹಿನ್ನೆಲೆ ಗಾಯಕರೇ ಸೂಪರ್ ಹಿಟ್ ಮಾಡಿದ ಸಿನಿಮಾ
ಈ ಒಂದು ಸಿನಿಮಾ ಶೋಲೆಗೆ ಟಕ್ಕರ್ ಕೊಟ್ಟು ದೊಡ್ಡ ಹಿಟ್ ಆಗಲು ಕಾರಣ ಸಿನಿಮಾಗಾಗಿ ಹಾಡಿದ ಹಾಡುಗಾರರು ಎಂದು ಹೇಳಲಾಗುತ್ತದೆ. ಈ ಸಿನಿಮಾದ ಪ್ರತಿಯೊಂದು ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು ಮೈ ತೋ ಆರತಿ ಉತಾರು ರೇ, ಸಂತೋಷಿ ಮಾತಾಕಿ ಹಾಡು ಸ್ಕ್ರೀನ್ ಮೇಲೆ ಬಂದಾಗ ಸಿನಿಮಾ ನೋಡಲು ಬಂದ ಮಹಿಳೆಯರು ಭಕ್ತಿ ಭಾವದಲ್ಲಿ ಮೈಮರೆತುಬಿಡುತ್ತಿದ್ದರು ಎಂದು ಹೇಳಲಾಗುತ್ತದೆ. ಗಾಯಕಿ ಉಷಾ ಮಂಗೇಶ್ಕರ್ ಈ ಹಾಡನ್ನು ಮಾಡಿದ್ದರು ಮತ್ತು ಅರ್ಜುನ್ ಸಂಗೀತ ನೀಡಿದ್ದರು. ವಿಷಯ ಇಲ್ಲಿಗೆ ನಿಲ್ಲುವುದಿಲ್ಲ, ಜನರು ದೇವಿ ಮಂದಿರಗಳಲ್ಲಿ ಆರತಿ ಪೂಜೆ ಮಾಡುವಾಗ ಇದೇ ಸಿನಿಮಾದ ಹಾಡುಗಳನ್ನು ಆರತಿ ಹಾಡುಗಳಾಗಿ ಹಾಡುತ್ತಿದ್ದರಂತೆ
ಇದನ್ನೂ ಓದಿ: ನಂಜುಂಡೇಶ್ವರನ ಮೊರೆ ಹೋದ ಮೀನಾ ತೂಗುದೀಪ.. ನಟ ದರ್ಶನ್‌ಗೆ ಇಂದು ಬಿಗ್ ರಿಲೀಫ್!
ಥಿಯೇಟರ್ ಹೊರಗೆ ಚಪ್ಪಲಿ ಕಳಚಿಟ್ಟು ಸಿನಿಮಾ ನೋಡಲು ಹೋಗುತ್ತಿದ್ದ ಜನ.
ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ, ಸಿನಿಮಾ ನೋಡಲು ಬಂದ ಜನರು ತಾವು ಧರಿಸಿದ್ದ ಚಪ್ಪಲಿಗಳನ್ನು ಥಿಯೇಟರ್ ಹೊರಗಡೆಯೇ ಬಿಟ್ಟು ಹೋಗುತ್ತಿದ್ದರು ಎಂದು ಹೇಳಲಾಗುತ್ತದೆ. ಸಿನಿಮಾವನ್ನು ಕೇವಲ ಸಿನಿಮಾವಾಗಿ ಅಲ್ಲ. ದೇವಿಯ ದರ್ಶನಕ್ಕೆ ಹೊರಟಿದ್ದೇವೆ. ಥಿಯೇಟರ್ ಕೇವಲ ಥಿಯೇಟರ್ ಅಲ್ಲ ಅದು ಸಂತೋಷಿ ಮಾಳ ದೇವಸ್ಥಾನ ಎಂದು ತಿಳಿದು, ಥಿಯೇಟರ್ ಒಳಗೆ ಹೋಗುವ ಮೊದಲು ಚಪ್ಪಲಿ ಕಳಚಿಟ್ಟು ಜನರು ಹೋಗುತ್ತಿದ್ದರು. ಇನ್ನು ಜನರು ಥಿಯೇಟರ್ನಲ್ಲಿ ಕುಳಿತಾಗ ಕೈಯಲ್ಲಿ ನಾಣ್ಯಗಳನ್ನು ಹಿಡಿದುಕೊಂಡು ಕುಳಿತಿರುತ್ತಿದ್ದರು. ಸಂತೋಷಿ ಮಾತಾ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ನಾಣ್ಯಗಳನ್ನು, ಹೂವುಗಳನ್ನು ಮತ್ತು ಮಾಲೆಗಳನ್ನು ಬೆಳ್ಳಿ ತೆರೆಯತ್ತ ಎಸೆಯುತ್ತಿದ್ದ ದೃಶ್ಯಕ್ಕೆ ಈ ಸಿನಿಮಾ ಸಾಕ್ಷಿಯಾಗಿತ್ತು. ಈ ರೀತಿ ಥಿಯೇಟರ್ ಆಚೆ ಚಪ್ಪಲಿ ಬಿಟ್ಟು ಪ್ರೇಕ್ಷಕರು ಒಳಗೆ ಹೋಗಿ ನೋಡಿದ ಸಿನಿಮಾದಲ್ಲಿ ಕನ್ನಡದ ಡಾ.ರಾಜ್ಕುಮಾರ್ ಅಭಿನಯಿಸಿದ ಮಂತ್ರಾಲಯ ಮಹಾತ್ಮೆಯೂ ಕೂಡ ಒಂದು.
ಇದನ್ನೂ ಓದಿ:ಬರ್ತ್ಡೇ ಖುಷಿಯಲ್ಲಿ ನ್ಯಾಷನಲ್ ಕ್ರಶ್.. ರಶ್ಮಿಕಾ ಮಂದಣ್ಣಗೆ ಈಗ ವಯಸ್ಸು ಎಷ್ಟು?
ಇನ್ನು 1975ರಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ಜೈ ಸಂತೋಷಿ ಮಾತಾ ಸಿನಿಮಾ ಉಳಿದುಕೊಂಡಿತು. ಮೊದಲನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ, ಜಯಾ ಬಚ್ಚನ್ ನಟನೆಯ ಶೋಲೆ ಸಿನಿಮಾ ಇತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ