/newsfirstlive-kannada/media/post_attachments/wp-content/uploads/2025/02/HAPPY-NEW-YEAR.jpg)
ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಅವರು ಕೇವಲ ಒಬ್ಬ ಹೀರೋ ಅಲ್ಲ. ಒಂದು ಎಮೋಷನ್. ಸುಮಾರು ದಶಕಗಳಿಂದ ಶಾರುಖ್ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. 2014ರಲ್ಲಿ ಬಂದ ಅವರ ಸಿನಿಮಾವೊಂದು ಕೂಡ ಈ ಹಿಂದಿನ ಸಿನಿಮಾದಂತೆ ಸೂಪರ್ ಹಿಟ್ ಕೂಡ ಆಗಿತ್ತು. ಶಾರುಖ್ ಹೊರತುಪಡಿಸಿ ಆರು ಜನರ ಪ್ರಮುಖ ಹಿಂದಿ ಸ್ಟಾರ್ಗಳು ಅದರಲ್ಲಿ ನಟನೆ ಮಾಡಿದ್ದರು. ಸಿನಿಮಾದ ಸ್ಕ್ರೀನ್ಪ್ಲೇ, ಹಾಡು ಮತ್ತು ಸಿನಿಮಾ ಮಾಡಿದ ರೀತಿ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿತ್ತು.
ನಾವು ಈಗ ಮಾತನಾಡುತ್ತಿರುವುದು 2014ರಲ್ಲಿ ಬಿಡುಗಡೆಯಾದ ಶಾರುಖ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಹ್ಯಾಪಿ ನ್ಯೂ ಇಯರ್ ಸಿನಿಮಾದ ಬಗ್ಗೆ. ಈ ಸಿನಿಮಾ ಅಂದು ಅಭಿಮಾನಿಗಳನ್ನು ಕುರ್ಚಿಯ ತುದಿಗೆ ತಂದು ಕೂರಿಸದಂತಹ ಕೌತಕಕ್ಕೆ ನೂಕಿದ ಸಿನಿಮಾ. ಇದರಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ, ಸೋನು ಸೂದ್, ಬೊಮನ್ನ ಇರಾನಿ, ಅಭಿಷೇಕ್ ಬಚ್ಚನ್, ವಿವಾನ್ ಶಾಹ್ ಹಾಗೂ ಜಾಕಿ ಶರಾಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಖುದ್ದು ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದರೆ, ಫರಾಹ್ ಖಾನ್ ನಿರ್ದೇಶನ ಮಾಡಿದ್ದರು. 150 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡ ಸಿನಿಮಾ ಸುಮಾರು 397 ಕೋಟಿ ರೂಪಾಯಿ ಗಳಿಸಿತ್ತು.
ಇದನ್ನೂ ಓದಿ:ಟೀಕೆಗೆ ಒಳಗಾದ ಡಾಲಿ.. ಮದ್ವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಉತ್ತರ ಕೊಟ್ಟ ಧನಂಜಯ..
ಇಷ್ಟೆಲ್ಲಾ ಆದರೂ ಈ ಸಿನಿಮಾದ ಬಗ್ಗೆ ಈ ಹಿಂದೆ ಎಂದಿಗೂ ಬಯಲಾಗದ ಹಲವು ರಹಸ್ಯಗಳಿವೆ. ಈ ಸಿನಿಮಾದಲ್ಲಿ ನಟಿಸಲು ಅನೇಕ ನಟ ನಟಿಯರು ಹಿಂದೇಟು ಹಾಕಿದ್ದರು. ವಾಸ್ತವವಾಗಿ ದೀಪಿಕಾ ಪಡುಕೋಣೆ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಬೇಕಾಗಿತ್ತು, ಆದ್ರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ನಟಿಸಲಾಗಲಿಲ್ಲ. ಇದಾದ ಬಳಿಕ ಸೋನಾಕ್ಷಿ ಸಿನ್ಹಾ, ಆಸಿನ್, ಐಶ್ವರ್ಯ ರೈ ಬಚ್ಚನ್, ಪರಿಣಿತಿ ಚೋಪ್ರಾಹಾಗೂ ಕತ್ರಿನಾ ಕೈಫ್ಗೂ ಕೂಡ ಈ ರೊಲ್ನ್ನು ಆಫರ್ ಮಾಡಲಾಗಿತ್ತು. ಆದರೆ ಈ ಪಾತ್ರದಲ್ಲಿ ನಟಿಸಲು ಯಾರು ಮುಂದೆ ಬರಲಿಲ್ಲ. ಕೊನೆಗೆ ದೀಪಿಕಾ ಅವರನ್ನೇ ಆಯ್ಕೆ ಮಾಡಲಾಯ್ತು.
ಇದನ್ನೂ ಓದಿ:ಡಾಲಿ ಧನಂಜಯ್ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ ಬಿಗ್ ಸ್ಟಾರ್ಸ್ ಬಂದ್ರು; ಯಾರೆಲ್ಲಾ ಮಿಸ್ ಆದ್ರು?
ಇನ್ನು ಸೋನು ಸೂದ್ ಅಭಿನಯಿಸಿದ ಪಾತ್ರಕ್ಕೆ ಫರಾಹ್ ಖಾನ್ ಜಾಹ್ನ್ ಅಬ್ರಾಹಂಗೆ ಆಫರ್ ನೀಡಿದ್ದರು. ಅವರು ಕೂಡ ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ. ಅದಾದ ಬಳಿಕ ಪೃಥ್ವಿರಾಜ್ ಸುಕುಮಾರನ್ರನ್ನು ಕೂಡ ಕೇಳಲಾಯ್ತು ಅವರು ನಿರಾಕರಿಸಿದರು. ಕೊನೆಗೆ ಸೋನು ಸೂದ್ ಈ ಪಾತ್ರಕ್ಕೆ ಆಯ್ಕೆಯಾದರು.
2006ರಲ್ಲಿ ದೀಪಿಕಾ ಪಡುಕೊಣೆ ಫರಾಹ್ ಖಾನ್ ನಿರ್ದೇಶನದ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಸುಮಾರು 8 ವರ್ಷಗಳ ಬಳಿಕ ಪುನಃ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ನಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ