/newsfirstlive-kannada/media/post_attachments/wp-content/uploads/2025/02/BEAUTIFULL-HANDWRING.jpg)
ವಿಶ್ವದ ಅತಿ ಸುಂದರ ಹ್ಯಾಂಡರೈಟಿಂಗ್, ನಾವು ನಮ್ಮ ಕೈಬರಹ ಸುಂದರವಾಗಿರಬೇಕು ಎಂದು ಎಷ್ಟೆಲ್ಲಾ ಪ್ರಯತ್ನ ಪಡುತ್ತೇವೆ. ಹ್ಯಾಂಡ್ ರೈಟಿಂಗ್ಗಾಗಿಯೇ ನಮಗೆ ಶಾಲೆಯಲ್ಲಿ ಗುರುಗಳು ಶುದ್ಧ ಬರೆಯಲು ನಿತ್ಯ ಹೇಳುತ್ತಿದ್ದರು. ಶಿಕ್ಷಣ ಮತ್ತು ಕೈ ಬರಹದ ನಡುವೆ ಒಂದು ಸುಂದರವಾದ ಕನೆಕ್ಷನ್ ಇದೆ. ಶೈಕ್ಷಣಿಕ ಜೀವನದಲ್ಲಿ ಕೈ ಬರಹವು ತುಂಬಾ ಪ್ರಮುಖ ಪಾತ್ರವನ್ನು ಕೂಡ ವಹಿಸುತ್ತದೆ.
ಒಳ್ಳೆಯ ಹ್ಯಾಂಡರ್ರೈಟಿಂಗ್ ವಿದ್ಯಾರ್ಥಿಗಳ ಪ್ರಗತಿಗೆ ಕಾರಣವಾಗುತ್ತದೆ. ಮತ್ತು ಶಿಕ್ಷಕರಿಂದ ಹೊಗಳಿಕೆಯನ್ನು ಕೂಡ ಪಡೆಯುತ್ತಿದ್ದಾರೆ. ಸುಂದರವಾದ ಕೈಬರಹವನ್ನು ಹೊಂದುವುದು ಕೂಡ ಒಂದು ಪ್ರತಿಭೆ. ಇದನ್ನು ನಮ್ಮದಾಗಿಸಿಕೊಳ್ಳಲು ನಾವು ನಿತ್ಯ ಬರೆಯುವ ರೂಢಿಯನ್ನಿಟ್ಟುಕೊಂಡಿರಬೇಕು. ನಿಮ್ಮ ಮಗುವಿಗೆ ನಿತ್ಯ 15 ರಿಂದ 20 ನಿಮಿಷಗಳ ಕಾಲವಾದರೂ ಶುದ್ಧಬರಹ ಬರೆಯಲು ಹೇಳಬೇಕು. ಇದರಿಂಂದ ಮಗುವಿನಲ್ಲಿ ಪ್ರ್ಯಾಕ್ಟಿಸ್ ಮಾಡುವ ಉತ್ಸಾಹ ಹೆಚ್ಚಾಗಿ ಅವರ ಕೈಬರಹದಲ್ಲಿ ತುಂಬಾ ಸುಧಾರಣೆಗಳು ಬರುತ್ತವೆ. ಕೈಬರಹದ ವಿಚಾರವಾಗಿ ನಾವು ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕುತ್ತಿದ್ದೇವೆ ಎಂದರೆ ವಿಶ್ವದ ಅತ್ಯಂತ ಸುಂದರ ಕೈಬರಹ ಹೊಂದಿರುವ ಯುವತಿ ಎಂದು ಒಬ್ಬರು ಗುರುತಿಸಿಕೊಂಡಿದ್ದಾರೆ. ಅವರ ಬಗ್ಗೆ ಹೇಳಲು ಕೈಬರಹದ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಹಾಕಲಾಗಿದೆ.
ಇದನ್ನೂ ಓದಿ:ಮೋದಿ ಇಂಟರ್ವ್ಯೂವ್ ಮಾಡಲು 3 ದಿನ ಉಪವಾಸ; ಸ್ಟಾರ್ ಯೂಟ್ಯೂಬರ್ನಿಂದ ಯಾಕೆ ಇಂಥ ನಿರ್ಧಾರ..?
ಪ್ರಕೃತಿ ಮಲ್ಲಾ, ಇವರು ಮೂಲತಃ ನೇಪಾಳದವರು. ಅವರ ಕೈ ಬರಹದಿಂದಲೇ ವಿಶ್ವವದ ಜನರ ಹೃದಯವನ್ನು ಕದ್ದಿದ್ದಾರೆ. ಅವರ ಅಭೂತಪೂರ್ವ ಕೈಬರಹದ ಸೌಂದರ್ಯ ಅವರನ್ನು ವಿಶ್ವದ ಅತ್ಯಂತ ಸುಂದರ ಕೈಬರಹ ಹೊಂದಿರುವ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ಕೈ ಬರಹ ವಿಚಾರದಲ್ಲಿ ಈ ಹಿಂದೆಯೇ ಪ್ರಕೃತಿ ದೊಡ್ಡ ಹೆಸರು ಮಾಡಿದ್ದರು. ಅವರ 16ನೇ ವಯಸ್ಸಿನಲ್ಲಿಯೇ 8ನೇ ತರಗತಿಯಲ್ಲಿದ್ದಾಗ ಅವರು ಬರೆದ ಒಂದು ಲೇಖನ ಇಂಟರ್ನೆಟ್ನಲ್ಲಿ ದೊಡ್ಡ ಸದ್ದು ಮಾಡಿತ್ತು. ಅವರು ಬರೆದ ಕೈ ಬರಹಕ್ಕೆ ಇಡೀ ವಿಶ್ವವೇ ಫಿದಾ ಆಗಿತ್ತು. ಇತ್ತೀಚೆಗೆ ಕಂಪ್ಯೂಟರ್ ಬಂದಾಗನಿಂದ ಕೈಬರಹದ ರೂಢಿ ಜನರಿಗೆ ತಪ್ಪಿ ಹೋಗಿದೆ. ಇದರ ಬಗ್ಗೆ ಹೆಚ್ಚು ಗಮನ ಕೊಡುವ ಜನರೇ ಕಡಿಮೆಯಾಗಿ ಹೋಗಿದ್ದಾರೆ. ಅದರಲ್ಲಿ ಕೆಲವೇ ಕೆಲವು ಜನರು ಸುಂದರವಾದ ಕೈಬರಹವನ್ನು ಹೊಂದಿದವರು ಆಗಿದ್ದಾರೆ.
ಇದನ್ನೂ ಓದಿ:9 ದೇಶಗಳಲ್ಲಿ ಹರಿದು ಹೋಗುತ್ತದೆ ಈ ನದಿ.. ಆದರೂ ಕೂಡ ಒಂದೇ ಒಂದು ಸೇತುವೆ ಕಟ್ಟಿಲ್ಲ ಏಕೆ?
ಸದ್ಯ ಪ್ರಕೃತಿಯ ಹ್ಯಾಂಡ್ರೈಟಿಂಗ್ ನೋಡಿದವರು ಕಂಪ್ಯೂಟರ್ ಹೊರತು ಈ ರೀತಿಯ ಕೈಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಯುನೈಟೆಡ್ ಅರಬ್ ಎಮಿರೆಟ್ಸ್ನ 51ನೇ ಸ್ಪಿರಿಟ್ ಆಫ್ ಯುನಿಯನ್ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಇದು ಈಗ ಮತ್ತೆ ಸದ್ದು ಮಾಡಿದೆ. ಇದೇ ಕೈಬರಹಕ್ಕಾಗಿಯೇ ಪ್ರಕೃತಿಯನ್ನು ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನವನ್ನು ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ