/newsfirstlive-kannada/media/post_attachments/wp-content/uploads/2025/02/2-Wife-husband-2.jpg)
ಸಿಂಗಲ್ ಹುಡುಗರೆಲ್ಲ ಹುಡುಗಿ ಸಿಗ್ಲಿ ದೇವ್ರೇ ಅಂತಾ ಹರಕೆ ಕಟ್ಕೊಂಡು ಬೆಟ್ಟ ಹತ್ತುತ್ತಿದ್ದಾರೆ. ಆದ್ರೂ ದೇವರು ವರ ಕೊಡ್ತಿಲ್ಲ. ಆದ್ರೆ, ಇಲ್ಲೊಬ್ಬ ಭೂಪನಿಗೆ ಭಗವಂತ ಇಬ್ಬಿಬ್ರು ಹೆಂಡತಿಯರನ್ನ ಕರುಣಿಸಿ ಬಿಟ್ಟಿದ್ದಾರೆ. ಹೋದ ಜನ್ಮದ ಪುಣ್ಯವೋ.. ಪಾಪವೋ ಗೊತ್ತಿಲ್ಲ. ಈ ಜನ್ಮದಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದಾನೆ. ಇಲ್ಲೊಂದು ವಿಚಿತ್ರ ಏನ್ ಗೊತ್ತಾ? ಇವನ ಜೊತೆ ಇಬ್ಬರೂ ಹೆಂಡತಿಯರೂ ಒಟ್ಟಿಗೆ ಇರ್ತಾರೆ. ಮೂರು ದಿನ ಅಲ್ಲಿ.. ಮೂರು ದಿನ ಇಲ್ಲಿ ಸಂಸಾರ ಮಾಡ್ತಾನೆ.
ಇವನೇ ನೋಡಿ.. ಇವನನ್ನ ನೋಡಿದವ್ರು ಮಹಾನ್ ಅದೃಷ್ಟವಂತ, ಪುಣ್ಯ ಪುರುಷ ಚೋರ ಚಿತ್ತ ಚೋರ ಅಂತಾ ರವಿಚಂದ್ರನ್ ಸಿನಿಮಾಗಳ ಬಿರುದುಗಳನ್ನ ಕೊಡ್ತಿದ್ದಾರೆ. ಅಂದ ಹಾಗೇ, ಒಬ್ಬ ಹೆಂಡತಿಯನ್ನಾ ನಿಭಾಯಿಸೋದೇ ದೊಡ್ಡ ಸವಾಲು ಅಂತಾ ಹಲವರು ಗೋಳಾಡೋ ಈ ಕಾಲದಲ್ಲಿ ಈತ ಇಬ್ಬಿಬ್ಬರನ್ನ ಮದುವೆಯಾಗಿ ಒಟ್ಟಿಗೆ ಸಂಸಾರ ಬೇರೆ ಮಾಡ್ತಿದ್ದಾನೆ. ಆದ್ರೆ, ಇವನ ಕಹಾನಿಯಲ್ಲಿ ಸಖತ್ ಟ್ವಿಸ್ಟ್ ಇದೆ.
ಇವನಿಗೆ ಇಬ್ಬರು ಹೆಂಡ್ತೀರು..3 ದಿನ ಅಲ್ಲಿ..3 ದಿನ ಇಲ್ಲಿ!
ಇಬ್ಬರ ಹೆಂಡಿರ ಮುದ್ದಿನ ಗಂಡನದ್ದು ವಿಚಿತ್ರ ಒಪ್ಪಂದ!
ಯಾರೀ ಭೂಪ! ಇಬ್ಬರನ್ನೂ ಒಪ್ಪಿಸಿ ಮದುವೆ ಹೇಗಾದ
ಒಂದ್ಕಡೆ ಮೊದಲ ಹೆಂಡತಿ ಇನ್ನೊಂದ್ಕಡೆ ಎರಡನೇ ಹೆಂಡತಿ.. ಮಧ್ಯದಲ್ಲಿ ಪತಿರಾಯ.. ಯೆಸ್ ಈ ದೃಶ್ಯಗಳನ್ನ ನಿಮ್ಮ ಕಣ್ಣು ನಂಬಲ್ಲ ಅಂತ ಗೊತ್ತು. ಆದ್ರೆ ಏನ್ ಮಾಡೋದು ಕಲಿಗಾಲ ನೀವು ನಂಬಲೇಬೇಕು. ಈ ಮುದ್ದು ಕುಮಾರನ ಹೆಸರು ಅಜಿತ್ ಅಂತ. ಪಕ್ಕದಲ್ಲಿರೋದು ಇವನ ಡಾರ್ಲಿಂಗ್ಸ್. ಇಬ್ಬರ ಹೆಂಡತಿಯರ ಮುದ್ದಿನ ಗಂಡ ಈ ಅಜಿತ್. ಎರಡು ಜಡೆ ಒಟ್ಟಿಗೆ ಸೇರಿದ್ರೆ ಕಲಹ ಗ್ಯಾರಂಟಿ ಅಂತಾರೆ. ಆದ್ರೆ ಅಜಿತ್ ಮನೆಯಲ್ಲಿ ಈ ಪ್ರಾಬ್ಲಂ ಇಲ್ಲ. ಯಾಕಂದ್ರೆ ಅಜಿತ್ನ ಇಬ್ಬರು ಮಡದಿಯರು ಅಕ್ಕ-ತಂಗಿಯಂತೆ ಬಾಳ್ತಿದ್ದಾರೆ.
ಬಿಹಾರದ ಪುನಿಯಾ ಮೂಲದ ಅಜಿತನ ಮೊದಲನೇ ಪತ್ನಿ ಹೆಸರು ಸುಮನ್ ಅಂತ. ಕೆಂಪು ಸೀರೆ ಉಟ್ಕೊಂಡು ನಿಂತಿದ್ದಾಳಲ್ಲ ಈ ಗುಂಡು ಮುಖದ ಹೆಣ್ಣು ಈಕೆಯೇ ಇವನ ಫಸ್ಟ್ ವೈಫ್.. ಇನ್ನೂ ನೀಲಿ ಸೀರೆ ಉಟ್ಕೊಂಡು ನೀಲಾಂಬರಿಯಂತೆ ಸ್ಮೈಲ್ ಮಾಡ್ತಿರೋದು ಗುಡಿಯಾ. ಅಜಿತ್ನ ಎರಡನೇ ಪತ್ನಿ.
ಇದನ್ನೂ ಓದಿ: ಬರೀ 1 ರೂಪಾಯಿ ಮದುವೆ.. ದಾಖಲೆ ಜೊತೆ ಮೆಸೇಜ್ ಕೊಟ್ರು ವೈದ್ಯ ದಂಪತಿ; ವಧು ಅಪ್ಪ ಬಿಕ್ಕಳಿಸುತ್ತಾ ಹೇಳಿದ್ದೇನು?
2018ರಲ್ಲಿ ಮೊದಲ ಮದುವೆಯಾಗಿದ್ದ ಅಜಿತ್
ಅಂಗಡಿಗೆ ಬಂದವಳು 2ನೇ ಮಡದಿಯಾದಳು!
ಇಬ್ಬರ ಹೆಂಡಿರ ಮುದ್ದಿನ ಗಂಡ ಅಜಿತ್ಗೆ 2018ರಲ್ಲಿ ಮೊದಲ ಮದುವೆಯಾಗಿತ್ತು. ಸುಮನ್ ಜೊತೆ ಫಸ್ಟ್ ಮ್ಯಾರೇಜ್ ನಡೆದಿತ್ತು. ಈ ಟೈಮ್ನಲ್ಲಿ ಅಜಿತ್ ನಡೆಸ್ತಿದ್ದ ಪೈಂಟಿಂಗ್ ಅಂಗಡಿಗೆ ಗುಡಿಯಾ ಬಂದಿದ್ದಾಳೆ. ಆಗ ಗುಡಿಯಾ ಮತ್ತು ಅಜಿತ್ ಪರಿಚಯವಾಗಿ ಗುಡಿಯ ಅಜಿತ್ನ್ನ ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ಳು. ಲವ್ ಅಟ್ ಸೆಕೆಂಡ್ ಸೈಟ್ ಆಗಿಬಿಟ್ಟಿದೆ. ಪ್ರೀತಿಗೆ ಕಣ್ಣಲ್ಲ, ಇವನ ಕಥೆಯಲ್ಲಿ ಪ್ರೀತಿಗೆ ಮೊದಲ ಮಡದಿಯ ವಿರೋದವೂ ಇರಲಿಲ್ಲವಂತೆ. ಇಲ್ಲಿ ಸಖತ್ ಇಂಟ್ರೆಸ್ಟಿಂಗ್ ಆಗಿರೋದು ಅಂದ್ರೆ, ಅಜಿತ್ಗೆ ಮೊದಲ ಮದುವೆ ಆಗಿರೋ ವಿಚಾರ ಗೊತ್ತಿದ್ರೂ ಗುಡಿಯಾ ಆತನನ್ನ ಪ್ರೀತಿ ಮಾಡಿದ್ದಾಳಂತೆ. ಎರಡನೇ ಹೆಂಡ್ತಿಯಾಗಿ ಬರೋದಕ್ಕೆ ಒಪ್ಪಿಕೊಂಡಿದ್ದಾಳಂತೆ. ಅದೇ ರೀತಿ ಬಲಗಾಲಿಟ್ಟು ಮನೆ ಕೂಡ ಸೇರಿದ್ದಾಳೆ.
ನಾನು ಏನು ನೋಡಿಲ್ಲ. ಪ್ರೀತಿ ಮಾಡಿದೆ ಅಷ್ಟೇ. ಅವರ ಒಂದು ಹಾಡು ನನಗೆ ಇಷ್ಟ ಆಗಿತ್ತು. ಹೌದು ನಿಮ್ಮ ಮಾತು ಒಪ್ಪಿಕೊಳ್ತೇನೆ, ಆದ್ರೆ ಪ್ರೀತಿ ಅದನ್ನೆಲ್ಲಾ ನೋಡಲ್ಲ. ಪ್ರೀತಿಗೆ ವಯಸ್ಸು ಮ್ಯಾಟರ್ ಆಗಲ್ಲ. 60 ವರ್ಷದವು 16 ವರ್ಷದ ಹುಡುಗಿಯರನ್ನ ಮದುವೆಯಾಗ್ತಾರೆ. ಪ್ರೀತಿಯಾಯ್ತು ಮದುವೆಯಾದೆ.
-ಗುಡಿಯಾ, ಅಜಿತ್ 2ನೇ ಪತ್ನಿ
ಎರಡನೇ ಪತ್ನಿ ಗುಡಿಯಾ ಪ್ರೀತಿಗೆ ಕಣ್ಣಿಲ್ಲ ಅಂದ್ರೆ.. ಮೊದಲ ಪತ್ನಿ ಸುಮನ್ ನಾವಿಬ್ಬರೂ ಅಕ್ಕ-ತಂಗಿ ಇದ್ದಂಗೆ ಎಲ್ಲಾ ಅನುಸರಿಸಿಕೊಂಡು ಹೋಗ್ತೀವಿ ಅಂತಿದ್ದಾರೆ. ಈ ಕಲಿಯುಗದಲ್ಲಿ ತನ್ನ ಗಂಡ ಇನ್ನೊಂದು ಹೆಣ್ಣನ್ನ ಮಾತಾಡಿಸಿದ್ದಕ್ಕೆ ಮರ್ಡರ್ ಮಾಡಿರೋ ಮಾಡಿರೋ ಉದಾಹರಣೆಗಳಿವೆ. ಅಂತದ್ರಲ್ಲಿ, ಅಜಿತ್ ವಿಚಾರದಲ್ಲಿ ಇಬ್ಬರು ಮಡದಿಯರ ಮಧ್ಯೆ ಇಲ್ಲಿವರೆಗೂ ಜಗಳ ನಡೆದಿಲ್ಲ. ಮನಸ್ತಾಪಗಳು ಬಂದಿಲ್ಲ. ನಾವಿಬ್ಬರೂ ಗಂಡನ ಪ್ರೀತಿಯನ್ನ ಹಂಚ್ಕೊಂಡು ಬಾಳ್ತಿದ್ದೀವಿ ಅಂತಾಳೆ ಅಜಿತ್ ಮೊದಲ ಪತ್ನಿ ಸುಮನ್.
ನಾವಿಬ್ಬರೂ ತುಂಬಾ ಖುಷಿಯಾಗಿದ್ದೀವಿ.. ನಾವು ಯಾವತ್ತು ಜಗಳ ಆಡಿಲ್ಲ. ಮದುವೆಯಾಗಿ ಇಷ್ಟು ವರ್ಷ ಆಯ್ತು ಆದ್ರೂ ನಮ್ಮಿಬ್ಬರ ಮಧ್ಯೆ ಗಲಾಟೆಯಾಗಿಲ್ಲ. ನಾನು ಸುಳ್ಳು ಹೇಳ್ತಿಲ್ಲ ಸತ್ಯವನ್ನೆ ಹೇಳ್ತಿದ್ದೀನಿ.
-ಸುಮನ್, ಅಜಿತ್ ಮೊದಲ ಪತ್ನಿ
ಅಜಿತ್ ಕೂಡ ಇಬ್ಬರೂ ಹೆಂಡತಿಯರನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾನೆ.. ಅವನೇ ಹೇಳೋ ಹಾಗೇ ಈತ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ರೀತಿ ಮಾಡೋದಿಲ್ವಂತೆ. ಇಬ್ಬರಿಗೂ ಸಮಾನವಾಗಿ ಪ್ರೀತಿ ಹಂಚಿರೋ ಅಜಿತ್ ನನ್ನಿಬ್ಬರು ಹೆಂಡತಿಯರು ನನ್ನೆರಡು ಕಣ್ಣುಗಳು ಅಂತಿದ್ದಾರೆ.
ಇಬ್ಬರು ನನ್ನ ಎರಡು ಕಣ್ಣುಗಳಿಂದಂತೆ.. ಮೊದಲ ಪತ್ನಿಗೆ ಒಂದು ಗಂಡು, ಒಂದು ಹೆಣ್ಣು.. ಅಂದ್ರೆ ಎರಡು ಮಕ್ಕಳಿವೆ.. ಎರಡನೇ ಪತ್ನಿಗೆ ಒಂದು ಗಂಡು ಮಗುವಿದೆ. ಇಬ್ಬರಿಗೂ ನಾನು ಪ್ರೀತಿ ಮಾಡ್ತೀನಿ.. ಇಬ್ಬರ ನಡುವೆ ಒಬ್ಬಳು ಮಗಳಿದ್ದಾಳೆ. ಅವಳಿಗೆ ಮದುವೆ ಮಾಡಿ ಕೊಡ್ತೀವಿ. ಆಮೇಲೆ ಇಬ್ಬರಿಗೂ ಒಬ್ಬೊಬ್ಬ ಮಗ ಇರ್ತಾನೆ. ಆಮೇಲೆ ಮೂರು ಜನ ಆರಾಮಾಗಿ ಇರ್ತೀವಿ.
-ಅಜಿತ್, ಇಬ್ಬರು ಹೆಂಡ್ತಿಯರ ಗಂಡ
ಇಷ್ಟೆಲ್ಲ ಹೊಂದಾಣಿಕೆ ಇಟ್ಕೊಂಡಿರುವ ಅಜಿತ್ ಮತ್ತು ಆತನ ಪತ್ನಿಯರು ಮಧ್ಯೆ ಒಂದು ಒಪ್ಪಂದ ಕೂಡ ಮಾಡ್ಕೊಂಡಿದ್ದಾರೆ. ಆ ಒಪ್ಪಂದಂತೆ ಮೂರು ಜನ ಬಾಳ್ತಿದ್ದಾರೆ ಕೂಡ. ವಾರದಲ್ಲಿ ಆರು ದಿನವನ್ನು ಸುಮನ್ ಇಬ್ಬರು ಮಡದಿಯರಿಗೆ ಹಂಚಿ ಇನ್ನೊಂದು ದಿನವನ್ನ ತನಗಾಗಿ ಇಟ್ಕೊಂಡಿದ್ದಾನೆ. ಇದೇ ಕಾರಣಕ್ಕೆ ಸುಮನ್ ಮತ್ತು ಗುಡಿಯಾ ಪತಿದೇವ ಅಜಿತ್ನನ್ನ ತುಂಬಾನೇ ಪ್ರೀತಿ ಮಾಡ್ತಾರೆ. ಗಲಾಟೆ, ಜಗಳಗಳು ನಡೆದು ಮನೆ, ಆಸ್ತಿಗಳನ್ನು ಭಾಗ ಮಾಡುವುದನ್ನು ನೋಡಿರುತ್ತೀರಿ. ಆದ್ರೆ ಗುಡಿಯಾ ಮತ್ತು ಸುಮನ್ ಗಂಡನನ್ನೆ ಹಂಚ್ಕೊಂಡು ನೆಮ್ಮದಿಯಾಗಿ ಬಾಳ್ತಿದ್ದಾರೆ. ಅದ್ರಲ್ಲೂ ಈ ಜನರೇಷನ್ನಲ್ಲಿ ಎರಡು ಜಡೆ ಒಂದೇ ಮನೆಯಲ್ಲಿ ಒಟ್ಟಾಗಿ ಸಂಸಾರ ಮಾಡ್ತಿದ್ದಾರೆ ಅಂದ್ರೆ ನಿಜಕ್ಕೂ ಅಚ್ಚರಿಯೇ ಸರಿ. ಎಲ್ಲದಕ್ಕಿಂತ ಹೆಚ್ಚಾಗಿ ಇಬ್ಬರಲ್ಲಿ ಯಾರಿಗೂ ಅನ್ಯಾಯ ಮಾಡದೇ ಎರಡು ಕಣ್ಣುಗಳಂತೆ ನೋಡಿಕೊಳ್ತಿರುವ ಅಜಿತ್ ಟ್ಯಾಲೆಂಟ್ ಕೂಡ ಮೆಚ್ಚಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ