/newsfirstlive-kannada/media/post_attachments/wp-content/uploads/2025/02/KERALA-NEERPUTHOORU.jpg)
ಜಗತ್ತು ಹಲವು ವೈಚಿತ್ರ್ಯಗಳ ಗೂಡು. ಇಲ್ಲಿ ಭೇದಿಸಲಾಗದ ತರ್ಕಕ್ಕೆ ನಿಲುಕದ ಅದೆಷ್ಟೋ ವಿಷಯಗಳು ಇವೆ. ಅವೆಷ್ಟೋ ಸ್ಥಳಗಳು ಇವೆ. ತಮ್ಮ ನಿಲುವಿಗೆ ನಿಲುಕದ ವಿಷಯವನ್ನು ವಿಜ್ಞಾನಿಗಳು ಸೃಷ್ಟಿಯ ವೈಚಿತ್ರ್ಯವೆಂದೂ, ಪ್ರಕೃತಿಯ ಪವಾಡವೆಂದೋ ಹೆಸರಿಟ್ಟರೆ. ಸಾಮಾನ್ಯ ಜನರು ಇದು ದೈವಿಕ ಶಕ್ತಿಯ ಆಚೆ ಬೇರೇನೂ ಅಲ್ಲ ಎಂದು ಗುರುತಿಸುತ್ತಾರೆ. ಹೀಗೆ ವಿಜ್ಞಾನಿಗಳ ತರ್ಕಕ್ಕೆ ನಿಲುಕದೆ ಸುಮಾರು ಮೂರು ಸಾವಿರ ವರ್ಷಗಳಿಂದ ಸವಾಲಾಗಿ ನಿಂತಿದೆ ಕೇರಳದ ನೀರಪುತ್ತೂರ್ನ ಈ ಮಹಾದೇವ ದೇವಸ್ಥಾನ.
ನೀರಪುತ್ತೂರಿನಲ್ಲಿರುವ ಶಿವಲಿಂಗವನ್ನು ಸ್ವಯಂಭೂ ಮಹಾದೇವ ಎಂದು ಕರೆಯುತ್ತಾರೆ. ಇಲ್ಲಿ ಶಿವನ ತಾನೇ ಸಾಕ್ಷಾತ್ ಶಿವಲಿಂಗ ರೂಪದಲ್ಲಿ ಉದ್ಭವಿಸಿದ್ದಾನೆ ಎಂಬ ನಂಬಿಕೆ ಇದೆ. ಈ ಶಿವಲಿಂಗವೂ ನೈಸರ್ಗಿಕವಾಗಿಯೇ ಸೃಷ್ಟಿಯಾಗಿದ್ದು ಹೊರತು ಯಾರು ನಿರ್ಮಾಣಿಸಿ ಸಿದ್ಧಗೊಳಿಸಿ ಇಲ್ಲಿ ಇರಿಸಲಾಗಿಲ್ಲ ಎಂಬ ನಂಬಿಕೆಯು ಸಹಸ್ರಾರು ವರ್ಷಗಳಿಂದ ಇದೆ. ಇಲ್ಲಿರುವ ದೈವಿಕ ಶಕ್ತಿ ದೇಶಾದ್ಯಂತದಲ್ಲಿರುವ ಭಕ್ತರನ್ನು ಇತ್ತ ಸೆಳೆಯುತ್ತದೆ.
ಇಲ್ಲಿರುವ ಮಹಾದೇವನ ಗರ್ಭಗುಡಿ ಸದಾ ನೀರಿನಿಂದಲೇ ತುಂಬಿಕೊಂಡಿರುತ್ತದೆ. ಇದು ಮಾತೆ ಗಂಗಾದೇವಿ ಮಹಾದೇವನೊಂದಿಗೆ ಇಲ್ಲಿ ನೆಲೆಸಿರುವ ಗುರುತು ಎಂದು ಹೇಳಲಾಗುತ್ತದೆ. ಈ ರೀತಿಯ ಮಂದಿರುವ ನಮಗೆ ದೇಶದ ಯಾವುದೇ ಭಾಗದಲ್ಲಿ ನೋಡಲು ಸಿಗುವುದಿಲ್ಲ. ಇಲ್ಲಿ ಗಂಗೆ ಹೇಗೆ ಮತ್ತು ಏಕೆ ಮಹಾದೇವನನ್ನು ಸುತ್ತುವರಿದಿದ್ದಾಳೆ ಎಂಬ ರಹಸ್ಯವನ್ನು ಭೇದಿಸಲು ಇಂದಿಗೂ ಯಾರಿಗೂ ಕೂಡ ಸಾಧ್ಯವಾಗಿಲ್ಲ. ಈ ಮಂದಿರವನ್ನು ಸುಮಾರು 3 ಸಾವಿರ ವರ್ಷಗಳಷ್ಟು ಪ್ರಾಚೀನ ಕಾಲದ್ದು ಎಂದು ಹೇಳಲಾಗುತ್ತದೆ. ಅಂದನಿಂದ ಇಂದಿನ ವಿಜ್ಞಾನಿಗಳಿಗೂ ಕೂಡ ಈ ರಹಸ್ಯವನ್ನು ಭೇದಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಕೇರಳದ ನರ್ಸಿಂಗ್ ಕಾಲೇಜಿನಲ್ಲಿ ಭಯಾನಕ ಱಗಿಂಗ್; ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ!
ಈ ಮಂದಿರಕ್ಕೆ ಹೋಗಿ ಮಹಾದೇವನ ದರ್ಶನ ಪಡೆಯಬೇಕು ಅಂದ್ರೆ ಅದು ಬೇಸಿಗೆಯಲ್ಲಿ ಮಾತ್ರ ಸಾಧ್ಯ. ಆಗ ಮಾತ್ರ ನೀರಿನಿಂದ ತುಂಬಿರುವ ಗರ್ಭಗುಡಿಯು ಗಂಗೆಯ ಗುರುತಿಲ್ಲದೇ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಆವಾಗ ಮಾತ್ರ ಭಕ್ತರಿಗೆ ಸ್ವಯಂಭೂ ಮಹಾದೇವನ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ.
ಇನ್ನು ಗರ್ಭಗುಡಿಯನ್ನು ವೃತ್ತಾಕಾರ ವಿನ್ಯಾಸದಲ್ಲಿ ಪ್ರಾಚೀನ ಶಿಲ್ಪಕಲೆಯ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಅಲ್ಲಿ ಪ್ರಶಾಂತ ಹಾಗೂ ಪಾವಿತ್ರ್ಯತೆಯ ವಾತಾವರಣ ನಿರ್ಮಾಣವಾಲು ಸಾಧ್ಯವಾಗುವಂತೆ ರಚನೆಗೊಂಡಿದೆ.
ಇನ್ನು ಗರ್ಭಗುಡಿಯ ಸುತ್ತಲೂ ಆವರಿಸಿರುವ ನೀರನ್ನು ಪವಿತ್ರ ಗಂಗೆಯೆಂದೇ ಆರಾಧಿಸಲಾಗುತ್ತದೆ. ಇದನ್ನು ಗಂಗಾ ತೀರ್ಥದಷ್ಟೇ ಪಾವಿತ್ರ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿ ಶಿವರಾತ್ರಿಯಲ್ಲಿ ಇಲ್ಲಿ ಸಹಸ್ರ ದೀಪೋತ್ಸವ ಆಚರಿಸಲಾಗುತ್ತದೆ. ಸಾವಿರ ದೀಪಗಳನ್ನು ಬೆಳಗಿ ಮಹಾದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಮಂದಿರವನ್ನು ಮಲಾಬಾರ್ ದೇವಾಸಂ ಬೋರ್ಡ್ ನಿರ್ವಹಿಸುತ್ತದೆ. ಇಲ್ಲಿ ಪ್ರಾಚೀನ ಕಾಲದ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಹಾಗೂ ಇಂದಿನ ಪರಂಪರೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪರಿಚಯಿಸುವ ಒಂದು ಕೇಂದ್ರಸ್ಥಾನವಾಗಿ ಈ ಮಂದಿರವನ್ನು ಗುರುತಿಸಲಾಗುತ್ತದೆ.
ಇದನ್ನೂ ಓದಿ:BREAKING: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ
ಈ ಒಂದು ದೇವಸ್ಥಾನ ಮಲಪ್ಪುರಂ ಜಿಲ್ಲೆಯ ಪುತ್ತೂರು ಗ್ರಾಮದಲ್ಲಿದೆ. ಇಲ್ಲಿಗೆ ಹೋಗಲು ವಿಮಾನಯಾನ, ರೈಲು ಪ್ರಯಾಣ ಹಾಗೂ ರಸ್ತೆಮಾರ್ಗದ ಪ್ರಯಾಣವೂ ಲಭ್ಯವಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ