ಸೌಂದರ್ಯದ ಸಂಪ್ರದಾಯವನ್ನೇ ಮುರಿದ ಹುಡುಗಿ.. ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು; ವಿಡಿಯೋ ವೈರಲ್

author-image
Gopal Kulkarni
Updated On
ಸೌಂದರ್ಯದ ಸಂಪ್ರದಾಯವನ್ನೇ ಮುರಿದ ಹುಡುಗಿ.. ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು; ವಿಡಿಯೋ ವೈರಲ್
Advertisment
  • ತನ್ನ ಮದುವೆಯಲ್ಲಿಯೇ ಸೌಂದರ್ಯದ ಸಾಂಪ್ರದಾಯವನ್ನೇ ಮುರಿದ ಹುಡುಗಿ
  • ಬೋಳು ತಲೆಯಲ್ಲಿಯೇ ಮೆಚ್ಚಿದ ಹುಡುಗನ ಕೈ ಹಿಡಿದು ಸಂಭ್ರಮಿಸಿದ ನೀಹಾರಾ
  • ಅವಳ ಸೌಂದರ್ಯದ ಬಗ್ಗೆ ಮಾತನಾಡಿದವರಿಗೆ ಪರೋಕ್ಷ ಉತ್ತರ ಕೊಟ್ಟ ಹುಡುಗಿ

ಮದುವೆ ಅಂದ್ರೆ ಹೆಣ್ಣು ಮಕ್ಕಳು ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಅದರಲ್ಲೂ ತಾವು ಅಪ್ರತಿಮ ಬೊಂಬೆಯಂತೆ ಕಾಣಬೇಕು. ನನ್ನ ಲುಕ್ ಹಾಗಿರಬೇಕು, ಹೀಗಿರಬೇಕು ಎಂಬ ಕನಸಿನಲ್ಲಿ ಏನೆಲ್ಲಾ ಅಲಂಕಾರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಅವರು ತಮ್ಮ ಕೇಶ ವಿನ್ಯಾಸಕ್ಕೆ ನೀಡುವ ಮಹತ್ವವಂತೂ ಬೇರೆಯದ್ದೇ ಎತ್ತರದ್ದು. ಆದ್ರೆ ಇಲ್ಲೊಂದು ಹುಡುಗಿ ಮಾತ್ರ ಈ ಎಲ್ಲಾ ಮಾದರಿಗಳನ್ನು ಗಾಳಿಗೆ ತೂರಿ ತುಂಬಾ ಖುಷಿಯಿಂದ ಬೋಳು ತಲೆಯಲ್ಲಿಯೇ ತುಂಬಾ ಬೋಲ್ಡ್ ಆಗಿ ಹಸೆಮಣೆ ಏರಿದ್ದಾಳೆ. ತನ್ನ ಬದುಕಿನ ದೊಡ್ಡ ಸಂಭ್ರಮದ ದಿನದಂದೆ ಯಾವುದೇ ಹಿಂಜರಿಕೆ ಇಲ್ಲದೇ ಬೋಳು ತಲೆಯಲ್ಲಿಯೇ ವಧುವಿನ ಸಿಂಗಾರ ಮಾಡಿಕೊಂಡು ಪತಿಯ ಕೈ ಹಿಡಿದಿದ್ದಾಳೆ.

publive-image

ನಾವು ಈಗ ಮಾತನಾಡುತ್ತಿರುವುದು ಡಿಜಿಟಲ್ ಕ್ರಿಯೇಟರ್ ನಿಹಾರಾ ಸಚ್​​ದೇವ ಬಗ್ಗೆ. ಅವರು ಅಲೋಪೆಸಿಯಾ ಏರಿಯಾಟಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕೂದಲು ಉದುರುವ ಒಂದು ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ದೇಹದ ಎಲ್ಲಾ ಭಾಗದಲ್ಲಿರುವ ಕೂದಲುಗಳು ಉದುರಿ ಹೋಗುತ್ತವೆ. ಹೆಣ್ಣು ಮಕ್ಕಳಿಗೆ ಕೇಶ ರಾಶಿಯೇ ಸೌಂದರ್ಯಕ್ಕೆ ಇನ್ನೊಂದು ಮೆರಗು ಕೊಡುವ ಅಂಶ. ವಿವಿಧ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದರಲ್ಲಿ ಮಹಿಳೆಯರು ಸದಾ ಮುಂದು. ಆದರೆ ಹೀಗೆ ತಲೆಯ ಮೇಲೆ ಕೂದಲು ಇರದೇ ಪರದಾಡುವ ಸ್ತ್ರೀಯರನ್ನು ಸಮಾಜ ಕೇಳುವುದು ಮತ್ತು ಕುಟುವುದು ಒಂದೇ ಪ್ರಶ್ನೆಯಿಂದ, ಹೀಗಿದ್ರೆ ನಿನ್ನನ್ನ ಯಾರು ಮದುವೆ ಆಗ್ತಾರೆ ಅಂತ. ಆದ್ರೆ ಇದಕ್ಕೆ ನೀಹಾರಾ ಒಂದೇ ಸ್ಪಷ್ಟವಾದ ಉತ್ತರ ಹೇಳುತ್ತಾರೆ ಅದು ಆತ್ಮವಿಶ್ವಾಸ ಎಂದು.

ಇದನ್ನೂ ಓದಿ:ಉಪ್ಪಿಟ್ಟು ಬೇಡ, ಚಿಕನ್ ಬಿರಿಯಾನಿ ಬೇಕೆಂದ ಅಂಗನವಾಡಿಯ ಮಗು; ಕಂದನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ

ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ನಿಹಾರಾ ಸಚ್​ದೇವ, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಲೆಗೂದಲನ್ನು ಕಳೆದುಕೊಂಡರು. ಆರಂಭದಲ್ಲಿ ಅವರು ವಿಗ್​ನ ಮೊರೆ ಹೋದರು. ಆಮೇಲೆ ಈ ಎಲ್ಲಾ ಕೀಳರಿಮೆಯಿಂದ ಆಚೆ ಬಂದು ತನ್ನ ನೈಸರ್ಗಿಕ ಸೌಂದರ್ಯವೇ ನನ್ನ ಅಸಲಿ ಗುರುತು ಎಂದು ನಿರ್ಧರಿಸಿ ತಮ್ಮ ಇಡೀ ತಲೆಯನ್ನೇ ಬೋಳಿಸಿಕೊಂಡರು. ಅವರ ಮದುವೆಯ ದಿನದಂದೂ ಕೂಡ ಅವರು ವಿಗ್ ಧರಿಸದೇ ಬೋಳು ತಲೆಯಲ್ಲಿಯೇ ಮದುವೆಯ ಎಲ್ಲ ವಿಧಿ ವಿಧಾನಗಳಲ್ಲೂ ಭಾಗಿಯಾದರು. ಅವರ ಬೋಳು ತಲೆಯ ಬಗ್ಗೆ ಮಾತನಾಡಿದವರೆಲ್ಲರನ್ನೂ ಮದುವೆಗೆ ಕರೆದಿದ್ದರು. ಈ ಮೂಲಕ ಸೌಂದರ್ಯವೆನ್ನುವುದು ಕೇವಲ ಆತ್ಮವಿಶ್ವಾಸದಲ್ಲಿ ಅಡಗಿದೆ ಎಂದು ಪರೋಕ್ಷವಾಗಿ ಅವರಿಗೆ ಸಂದೇಶ ಮುಟ್ಟಿಸಿದರು.


">February 3, 2025

ಯಾವಾಗ ವಧುವಿನ ಅಲಂಕಾರದಲ್ಲಿ ನೀಹಾರಾ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ರೊ ಅದು ಎಂದೆಂದೂ ನೆನಪಿನಲ್ಲಿಡಬೇಕಾದ ದಿನವಾಗಿ ಉಳಿಯಿತು. ಅವರನ್ನು ಕೈ ಹಿಡಿಯಲಿದ್ದ ವರ ಅರುಣ್ ವಿ ಗಣಪತಿ ಆಕೆಯನ್ನು ವಿಸ್ಮಯದಿಂದ ನೋಡಿದ. ನೀಹಾರಾಳ ಸೌಂದರ್ಯದ ಬಗ್ಗೆ ಅನುಮಾನಪಟ್ಟವರು ಆ ವೇಳೆ ಮಾತಿಲ್ಲದಂತಾಗಿ ಹೋಗಿದ್ದರು ಆ ಸಂದರ್ಭದಲ್ಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment