ಯೂಟ್ಯೂಬ್, ವಾಟ್ಸಾಪ್​, ಇನ್​ಸ್ಟಾಗೆ ಸೆಡ್ಡು ಹೊಡೆದ ಭಾರತದ ಆ್ಯಪ್; ಇದು ಹೆಮ್ಮೆ ಪಡೋ ವಿಚಾರ!

author-image
Gopal Kulkarni
Updated On
ಯೂಟ್ಯೂಬ್, ವಾಟ್ಸಾಪ್​, ಇನ್​ಸ್ಟಾಗೆ ಸೆಡ್ಡು ಹೊಡೆದ ಭಾರತದ ಆ್ಯಪ್; ಇದು ಹೆಮ್ಮೆ ಪಡೋ ವಿಚಾರ!
Advertisment
  • ರೇಟಿಂಗ್​ನಲ್ಲಿ ವಾಟ್ಸಾಪ್, ಇನ್​ಸ್ಟಾ, ಯೂಟ್ಯೂಬ್ ಹಿಂದಿಕ್ಕಿದ ಆ್ಯಪ್
  • ದೈತ್ಯ ಆ್ಯಪ್​ಗಳನ್ನು ಇಷ್ಟು ಸರಳವಾಗಿ ಹಿಂದಿಕ್ಕಿದ ಆ ಆ್ಯಪ್ ಯಾವುದು?
  • ದೇಶದಲ್ಲಿಯೇ 57 ಕೋಟಿಗೂ ಅಧಿಕ ಜನರು ಬಳಸುತ್ತಾರೆ ಈ ಆ್ಯಪ್

ರಾಹುಲ್ ಚಾರಿ ಫೋನ್​ ಪೇನ ಸಹ ಸಂಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ನವೆಂಬರ್ 19 ರಂದು ಒಂದು ಭಾರೀ ಸಂಚಲನ ಸೃಷ್ಟಿಸುವಂತ ಸುದ್ದಿಯನ್ನು ನೀಡಿದ್ದಾರೆ. ಅತಿಹೆಚ್ಚು ರೇಟಿಂಗ್ ಪಡೆಯುವಲ್ಲಿ ಫೋನ್ ಪೇ ಯೂಟ್ಯೂಬ್ ಇನ್​ಸ್ಟಾಗ್ರಾಂ ಹಾಗೂ ವಾಟ್ಸಾಪ್​ನ್ನು ಸಹ ಹಿಂದಿಕ್ಕಿದೆ. ಆ್ಯಪ್ಲ್​ನಲ್ಲಿ ಸುಮಾರು 60.4 ಲಕ್ಷ ರೇಟಿಂಗ್​​ಗಳು ಬಂದಿದ್ದು. 4.7 ಸ್ಟಾರ್ಸ್​​ಗಳನ್ನು ಪಡೆದ ಆ್ಯಪ್​ ಆಗಿ ಇದು ಈಗ ಪ್ರಸಿದ್ಧಿಯನ್ನು ಪಡೆದಿದೆ. ಈ ಒಂದು ಆ್ಯಪ್ ಬಳಕೆದಾರರ ಸ್ನೇಹಿಯಾಗಿ, ವೇಗದ ಟ್ರಾಂಜಕ್ಷನ್ ಹಾಗೂ ಲಕ್ಷಾಂತರ ಬಳಕೆದಾರರ ಅಚಲ ನಂಬಿಕೆಯಿಂದಾಗಿ ಈ ಮಟ್ಟಕ್ಕೆ ಬೆಳೆದಿದೆ ಎಂದು ರಾಹುಲ್ ಚಾರಿ ಹೇಳಿದ್ದಾರೆ.

publive-image

57 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೋನ್ ಪೇ
ಇದೇ ಸಂದರ್ಭದಲ್ಲಿ ಮಾತನಾಡಿರುವ ರಾಹುಲ್ ಚಾರಿ, ನಾವು ಈ ಒಂದು ಹಾದಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಕ್ಕೆ ತುಂಬಾ ಖುಷಿಯಿದೆ. ಭಾರತದಲ್ಲಿ ನಮ್ಮ ಆ್ಯಪ್ ಬಳಕೆದಾರರ ಸಂಖ್ಯೆ ಸುಮಾರು 57.50 ಕೋಟಿಯಷ್ಟಿದೆ ಎಂದು ಹೇಳಿದ್ದಾರೆ. ಫೋನ್​ ಪೇ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಪ್ಲಾಟ್​ಫಾರ್ಮ್​ನ ಬಳಕೆದಾರರಿಗೆ ಹೀಗೆಯೇ ನಿರಂತರವಾದ ಸುಲಭವಾದ ಸೇವೆಯನ್ನು ನೀಡಲು ಕಂಕಣ ಕಟ್ಟಿದೆ. ಸದ್ಯ ಹೊಸ ಹೊಸ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುವತ್ತ ಫೋನ್ ಪೇ ಹೊರಟಿದೆ ಎಂದು ಚಾರಿ ಹೇಳಿದ್ದಾರೆ.

ಇದನ್ನೂ ಓದಿ:ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌.. ಭಾರತದಲ್ಲಿ ಅಮೆಜಾನ್ ಮೊದಲ ಬ್ಲ್ಯಾಕ್ ಫ್ರೈಡೇ ಸೇಲ್​; ಏನೆಲ್ಲಾ ಆಫರ್?

ಫೋನ್ ಪೇ 2016ರ ಆಗಸ್ಟ್​ನಲ್ಲಿ ಮೊಟ್ಟ ಮೊದಲ ಭಾರಿಗೆ ಭಾರತದಲ್ಲಿ ನಾನ್ ಬ್ಯಾಂಕಿಂಗ್ ಯುಪಿಐ ಆಗಿ ಲಾಂಚ್ ಆಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ಡಿಜಿಟಲ್ ಪೇಮೆಂಟ್​ ಕ್ಷೇತ್ರದಲ್ಲಿ ಲೀಡಿಂಗ್ ಕಂಪನಿಯಾಗಿ ಬೆಳೆಯಿತು ಫೋನ್ ಪೇ. ಡಿಜಿಟಲ್ ಪೇಮೆಂಟ್​ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿತು. ಇತ್ತೀಚೆಗೆ ಈ ಕಂಪನಿ ತನ್ನ ಮೊದಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ತನ್ನ ಮುಂದಿನ ದೃಷ್ಟಿ, ತಂತ್ರ ಹಾಗೂ ಗುರಿ ಏನು ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ:ಶುಕ್ರಯಾನಕ್ಕೆ ಭಾರತ ಸದ್ದಿಲ್ಲದೇ ಸಜ್ಜು.. ಇಸ್ರೋ ವಿಜ್ಞಾನಿಗಳ ಚಿತ್ತ ಶುಕ್ರ ಗ್ರಹದ ಮೇಲೆ..!

publive-image

ಈಗಾಗಲೇ ಹೇಳಿದಂತೆ ಭಾರತದಲ್ಲಿ ಮೊದಲ ಬಾರಿಗೆ ಡಿಜಿಟಲ್ ಪೆಮೇಂಟ್ ಆ್ಯಪ್ ಆಗಿ ಹೊರಬಂದಿದ್ದು ಫೋನ್ ಪೇ. ಕೇವಲ 8 ವರ್ಷಗಳಲ್ಲಿ ಅತಿಹೆಚ್ಚು ಗ್ರಾಹಕರು ಯೂಸ್ ಮಾಡುವ ಡಿಜಿಟಲ್ ಪೇಮೆಂಟ್ ಆ್ಯಪ್​​ ಆಗಿ ಇದು ಗುರುತಿಸಿಕೊಂಡಿದೆ. ಭಾರತದಲ್ಲಿ ಒಟ್ಟು 57 ಕೋಟಿಗೂ ಅಧಿಕ ಜನರು ಈ ಆ್ಯಪ್​ನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ನಿತ್ಯ 30 ಕೋಟಿಗೂ ಅಧಿಕ ವಹಿವಾಟುಗಳು ಈ ಫೋನ್​ ಪೇ ಮೂಲಕ ನಡೆಯುತ್ತವೆ. ಇದು ನಡೆಸುವ ವಾರ್ಷಿಕ ವಹಿವಾಟು ಒಟ್ಟು 1.8 ಟ್ರಿಲಿಯನ್ ಯುಎಸ್​ ಡಾಲರ್ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment