/newsfirstlive-kannada/media/post_attachments/wp-content/uploads/2024/12/MACHINE-GUN.jpg)
ರಕ್ಷಣಾ ವಲಯದಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸೃಷ್ಟಿಸಲು ಮೋದಿ ಸರ್ಕಾರ ಹೆಚ್ಚು ಮಹತ್ವ ನೀಡಿದೆ. ಶಸ್ತ್ರಾಸ್ತ್ರಗಳ ಆಮದಿಗೆ ತಗಲುವ ವೆಚ್ಚವನ್ನು ಆದಷ್ಟು ಕಡಿಮೆ ಮಾಡಿ. ದೇಶಿಯವಾಗಿಯೇ ಹೆಚ್ಚು ಉತ್ಪಾದನೆ ಹಾಗೂ ಶಸ್ತ್ರಾಸ್ತ್ರಗಳ ರಫ್ತಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಇದೇ ಕಾರಣದಿಂದಾಗಿಯೇ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ಮಷಿನ್ ಗನ್ ಸೇರಿ ಹಲವು ಶಸ್ತ್ರಾಸ್ತ್ರಗಳ ಉತ್ಪಾದನೆ ನಡೆಯುತ್ತಿದೆ. ಈ ಒಂದು ಸಣ್ಣ ಮಟ್ಟದ ಕಾರ್ಖಾನೆಯಿಂದ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳು ಸಿದ್ಧಗೊಂಡು ವಿದೇಶಿ ಸೇನೆಯ ಮನಸ್ಸನ್ನು ಕೂಡ ಕದಿಯುತ್ತಿವೆ,
ಚಿಕ್ಕದಾದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಕಾರ್ಖಾನೆಯಲ್ಲಿ ಸಿದ್ಧಗೊಂಡಿರುವ ಮಷಿನ್ ಗನ್​ವೊಂದು ಈಗ ವಿದೇಶಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಸಿದೆ.ಯುದ್ಧರಂಗದಲ್ಲಿ ದೊಡ್ಡ ಗೇಮ್​ ಚೆಂಜರ್ ಆಗಲಿದೆ ಈ ಮಿಡಿಯಮ್ ಮಷಿನ್ ಗನ್​ ಎಂದೇ ಹೇಳಲಾಗುತ್ತದೆ. ಕಾರಣ, ಅದರ ವೇಗ. ಒಂದು ನಿಮಿಷದಲ್ಲಿ ಈ ಮಷಿನ್ ಗನ್ ಬರೋಬ್ಬರಿ 1000 ಬುಲೆಟ್​ಗಳನ್ನು ಸಿಡಿಸುತ್ತದೆ. ಇದರ ಜೊತೆಗೆ ಇನ್ನೂ ಹಲವು ವಿಶೇಷತೆಗಳನ್ನು ಈ ಮಷಿನ್ ಗನ್ ಹೊಂದಿದೆ.
ಈ ಒಂದು ಮಷಿನ್ ಗನ್ 11 ಕಿಲೋ ಭಾರವಿದ್ದು ಒಂದು ಸುತ್ತಿನಲ್ಲಿ 1 ಸಾವಿರ ರೌಂಡ್ ಬುಲೆಟ್ ಫೈರ್​ ಮಾಡುತ್ತದೆ. 1.8ಕಿಲೋ ಮೀಟರ್​ ದೂರದಲ್ಲಿರುವ ಶತ್ರುವನ್ನು ಸರಾಗವಾಗಿ ಗುರಿಯಿಟ್ಟು ಹೊಡೆದುರುಳಿಸುವ ಸಾಮರ್ಥ್ಯವಿದೆ. ಈ ಒಂದು ಗನ್​ಗೆ ಈಗ ವಿದೇಶದಿಂದ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಯುರೋಪ್ ರಾಷ್ಟ್ರಗಳು ಈ ಗನ್​ ಹೆಚ್ಚಿನ ಬೇಡಿಕೆಯಿಟ್ಟಿದ್ದು ಹಲವು ರಾಷ್ಟ್ರಗಳ ಜೊತೆ 2023ರಲ್ಲಿ ಹಲವು ಒಪ್ಪಂದಗಳು ನಡೆದಿವೆ. ಈ ಮಷಿನ್​ ಗನ್​ನ ಉದ್ದ ಬರೋಬ್ಬರಿ 1255 ಮಿಲಿ ಮೀಟರ್ ಇದ್ದು. 7.62*51mmನಷ್ಟು ಉದ್ದ ಇದರ ಕ್ಯಾಲಿಬರ್ ಇದೆ.
ವಿದೇಶಗಳಿಂದ ಭಾರೀ ಬೇಡಿಕೆ ಸೃಷ್ಟಿಸಿಕೊಂಡ ಗನ್
ಕಾನ್ಪುರದಲ್ಲಿ ಸಿದ್ಧಗೊಂಡಿರುವ ಈ ಗನ್​ಗೆ ಈಗ ವಿದೇಶದಿಂದ ಹೆಚ್ಚಿ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ಸುಮಾರು 190 ಕೋಟಿ ರೂಪಾಯಿಯ ವ್ಯವಹಾರದಲ್ಲಿ ಈ ಮಿಷನ್​ಗನ್ ವಿದೇಶಕ್ಕೆ ಪೂರೈಕೆ ಮಾಡಲಾಗಿತ್ತು., ಈ ಬಾರಿ 255 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವಾಗಿದ್ದು. ಸದ್ಯದಲ್ಲಿಯೇ ಮತ್ತಷ್ಟು ಗನ್​ಗಳು ವಿದೇಶಕ್ಕೆ ರಫ್ತಾಗಲಿವೆ. ಈಗಾಗಲೇ ಒಟ್ಟು 2 ಸಾವಿರ ಮಿಡಿಯಮ್ ಮಷಿನ್ ಗನ್​​ಗೆ ಬೇಡಿಕೆ ಬಂದಿದ್ದು. ಇನ್ನು ಕೆಲವು ದೇಶಗಳೊಂದಿಗೆ ಹಲವು ಒಪ್ಪಂದಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us