/newsfirstlive-kannada/media/post_attachments/wp-content/uploads/2024/11/DMart-Radhakrishan-Damani.jpg)
ಸಾಧನೆಯ ಹಾದಿಗೆ ಒಂದೊಂದೇ ಮೆಟ್ಟಿಲು ಇವೆ. ನಾವು ಒಂದೊಂದೇ ಮೆಟ್ಟಿಲನ್ನು ಏರುತ್ತಲೇ ಸಾಗಬೇಕಾಗುತ್ತದೆ. ದಿಢೀರ್ ಶ್ರೀಮಂತಿಕೆಯನ್ನು ಬಯಸುವವರಿಗೆ, ತಾಳ್ಮೆ ಇಲ್ಲದವರಿಗೆ ಯಶಸ್ಸು ಸಿಗುವುದು ಅಪರೂಪ. ಒಂದೊಂದೆ ಹಜ್ಜೆಯೇ ನಮ್ಮ ಗಮ್ಯವನ್ನು ತಲುಪಿಸುವುಂತೆ ಒಂದೊಂದು ಮೆಟ್ಟಿಲು ನಮ್ಮ ಯಶಸ್ಸಿನ ಶಿಖರದ ತುತ್ತತುದಿಯನ್ನು ಮುಟ್ಟಿಸುತ್ತದೆ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತಿದ್ದಾರೆ ಈ ರಾಧಾಕೃಷ್ಣ ಧಮನಿ ಎಂಬ ಉದ್ಯಮಿ.
ನಿಮಗೆ ರಾಧಾಕೃಷ್ಣ ಧಮನಿಯವರ ಹೆಸರು ಎಷ್ಟು ಪರಿಚಯವಿದೆಯೋ ಗೊತ್ತಿಲ್ಲ. ಆದ್ರೆ ಡಿಮಾರ್ಟ್ ಎಂಬ ಹೆಸರು ಕೇಳಿದ್ರೆ ಎಲ್ಲರಿಗೂ ಗೊತ್ತು. ಆ ಡಿಮಾರ್ಟ್ ಎಂಬ ದೈತ್ಯ ಕಂಪನಿಯನ್ನು ಕಟ್ಟಿದೆ ಯಶಸ್ವಿ ವ್ಯಾಪಾರಿ. 2002ರಲ್ಲಿ ಸಣ್ಣದೊಂದು ದಿನಸಿ ಅಂಗಡಿಯ ವ್ಯಾಪಾರದಿಂದ ಶುರುವಾದ ಇವರ ಪ್ರಯಾಣ ಈಗ ದೇಶಾದ್ಯಂತ 381 ಸೂಪರ್ಮಾರ್ಕೆಟ್ಗಳನ್ನು ಹೊಂದುವ ಮಟ್ಟಿಗೆ ಬೆಳೆದಿದೆ.ದೆಹಲಿ ಮುಂಬೈ, ಬೆಂಗಳೂರು ಸೇರಿದಂತೆ ಸಣ್ಣ ನಗರಗಳಾದ ಭೋಪಾಲ್ ಇಂದೋರ್ನಲ್ಲಿಯೂ ಕೂಡ ಈ ಡಿಮಾರ್ಟ್ಗಳು ತಲೆ ಎತ್ತಿವೆ. ಕೇವಲ 22 ವರ್ಷಗಳಲ್ಲಿ ಈ ಡಿಮಾರ್ಟ್ ಇಡೀ ದೇಶಾದ್ಯಂತ ತನ್ನನ್ನು ತಾನು ವಿಸ್ತಿರಿಸಿಕೊಂಡ ರೀತಿಯೇ ಅದ್ಭುತ. 2024ರ ಅವಧಿಯಲ್ಲಿ ಡಿ ಮಾರ್ಟ್ನ ಒಟ್ಟು ಆದಾಯ 49,722 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ದಿನದ 14 ಗಂಟೆಗಳ ಕಾಲ ಇ ಡಿಮಾರ್ಟ್ ಓಪನ್ ಆಗಿ
ಇದನ್ನೂ ಓದಿ:ದಂತ, ಕೇಶ, ಚರ್ಮಕಾಂತಿಗಾಗಿ ಶಾಲಿನಿ ಪಸ್ಸಿ ಮಾಡುವುದೇನು? 49ರ ಹರೆಯದ ಟಿವಿ ಸ್ಟಾರ್ ಡಯಟ್ ಹೇಗಿದೆ?
ಇರುತ್ತದೆ. 381 ಸ್ಟೋರ್ಗಳಲ್ಲಿ ಪ್ರತಿ ಸ್ಟೋರ್ಗಳು ದಿನಕ್ಕೆ ಕನಿಷ್ಠ ಅಂದರೂ 37 ಲಕ್ಷ ರೂಪಾಯಿ ವ್ಯಾಪಾರ ಮಾಡುತ್ತದೆ. ಅಂದ್ರೆ ಗಂಟೆಗೆ ಸುಮಾರು 2.7 ಲಕ್ಷ ರೂಪಾಯಿ ಸೇಲ್ಸ್ ಈ ಡಿಮಾರ್ಟ್ನದ್ದು. ಅಂದ್ರೆ 10 ನಿಮಿಷಕ್ಕೆ 44,262 ರೂಪಾಯಿ. ಇದು ಆನ್ಲೈನ್ ಮಾರ್ಕೆಟ್ ಕೂಡ ಮಾಡುತ್ತದೆ. ಸ್ಟೋರ್ಗಳಿಗೆ ಭೇಟಿ ನೀಡಲಾಗದ ಜನರಿಗೆ ಹೋಮ್ ಡೆಲಿವರಿ ಸೇವೆಯನ್ನು ಕೂಡ ಡಿಮಾರ್ಟ್ ನೀಡುತ್ತದೆ.
ಇದನ್ನೂ ಓದಿ: 60 ದಿನಕ್ಕೆ 48 ಲಕ್ಷ ವಿವಾಹ.. ಈ ಅದ್ಧೂರಿ ಮದುವೆಗಳಿಂದ ದೇಶಕ್ಕೆ ಬರುವ ಆದಾಯ ಎಷ್ಟು ಲಕ್ಷ ಕೋಟಿ ಗೊತ್ತಾ?
ಏನಿದು ಡಿಮಾರ್ಟ್ ಇತಿಹಾಸ ?
ಡಿಮಾರ್ಟ್ ಎಂಬ ದೈತ್ಯ ಸಂಸ್ಥೆಗೆ ಅಡಿಗಲ್ಲು ಹಾಕಿದವರು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುತ್ತಿದ್ದ ರಾಧಾಕೃಷ್ಣನ್ ಧಮನಿ. 2002ರಲ್ಲಿ ರಾಧಾಕೃಷ್ಣ ಧಮನಿ ಅವರಿಗೆ ಭಾರತದಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿರುವ ಅವಕಾಶಗಳ ಆಗರದ ಬಗ್ಗೆ ಅರಿವಾಗುತ್ತದೆ. ಜನರಿಗೆ ಕೈಗೆಟುಕುವ ದರದಲ್ಲಿ ದಿನಸಿ ಸಾಮಗ್ರಿಗಳನ್ನು ನೀಡುವ ಉದ್ದೇಶದಿಂದ ಶುರುವಾದ ಈ ಡಿಮಾರ್ಟ್ ಈಗ ಇಡೀ ದೇಶಾದ್ಯಂತ ತನ್ನನ್ನು ತಾನು ವಿಸ್ತರಿಸಿಕೊಂಡಿದೆ. ಈಗ ಇದು ಒಟ್ಟು 49 ಸಾವಿರ ಕೋಟಿಗೂ ಅಧಿಕ ರೆವೆನ್ಯೂ ಹೊಂದಿದೆ. ಇಡೀ ದೇಶದಲ್ಲಿ ಒಟ್ಟು 381 ಸ್ಟೋರ್ಗಳನ್ನು ಹೊಂದಿದ್ದು. ಜನರಿಗೆ ಕೈಗೆಟುಕುವ ದರದಲ್ಲಿ ದಿನಸಿ ಧಾನ್ಯಗಳು ಪೂರೈಕೆ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ