/newsfirstlive-kannada/media/post_attachments/wp-content/uploads/2025/03/GOLD-RESERVE.jpg)
ಭಾರತಕ್ಕೆ ಸದ್ಯ ಒಂದು ಜಾಕ್ಪಾಟ್ ಹೊಡೆದಿದೆ. ದೇಶದ ಒಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಬಂಗಾರದ ನಿಕ್ಷೇಪ ಇರೋದು ಪತ್ತೆಯಾಗಿದೆ. ಒಡಿಶಾದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಅದು ಕೂಡ ಒಂದೇ ಜಾಗದಲ್ಲಿ ಅಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತಯಾಗಿವೆ ಎಂದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್ ಜೇನಾ ಹೇಳಿದ್ದಾರೆ. ಸದದನದಲ್ಲಿ ಈ ಬಗ್ಗೆ ಪ್ರಾಸ್ತಾಪ ಮಾಡಿರುವ ಜೇನಾ, ಒಡಿಶಾ ಖನಿಜಗಳ ಸಂಪತ್ತು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ಈಗಾಗಲೇ ಸುಂದರ್ಗಢ, ನಬರಂಗಪುರ, ಅಂಗುಲ ಮತ್ತು ಕೊರಾಪುತ್ನಲ್ಲಿ ದೊಡ್ಡ ಮಟ್ಟದ ಚಿನ್ನದ ನಿಕ್ಷೇಪ ಇರುವುದು ಗೊತ್ತಾಗಿದೆ. ಆರಂಭಿಕ ಸರ್ವೇಗಳನ್ನು ನಡೆಸಲು ಆದೇಶ ನೀಡಲಾಗಿದೆ. ಇನ್ನು ಮಲ್ಕನ್ಗಿರಿ, ಸಂಭಾಲ್ಪುರ ಮತ್ತು ಬೌಧ್ ಜಿಲ್ಲೆಗಳಲ್ಲೂ ಕೂಡ ಚಿನ್ನದ ನಿಕ್ಷೇಪ ಇರುವುದರ ಬಗ್ಗೆ ಸೂಚನೆಗಳು ಇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಟ ಸುಶಾಂತ್ ಸಿಂಗ್ ಸಾವಿಗೆ ಕಾರಣ ಹೇಳಿದ ಸಿಬಿಐ! ಕಾಣದ ಕೈಗಳ ಕೈವಾಡಕ್ಕೆ ಸಾಕ್ಷಿಯಿಲ್ಲ ಎಂದ ತನಿಖಾ ಸಂಸ್ಥೆ!
ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಈ ಪರಿಶೋಧನೆಗಳು ಒಡಿಶಾವನ್ನು ಭಾರತದ ಅತಿದೊಡ್ಡ ಚಿನ್ನದ ನಿಕ್ಷೇಪವಿರುವ ರಾಜ್ಯವೆಂದು ಗುರುತಿಸಿಕೊಳ್ಳಲಿದೆ. ಸದ್ಯ ನಡೆಯುತ್ತಿರುವ ತನಿಖೆಯ ಪ್ರಕಾರ ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್ ಮತ್ತು ಬಾದಂಪಹರ್ನಲ್ಲಿಯೂ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಚಿನ್ನದ ನಿಕ್ಷೇಪ ಇರುವುದನ್ನು ಕಂಡು ಹಿಡಿದಿದೆ. ಇನ್ನು ಅದಾಸಾ-ರಾಂಪಲ್ಲಿ ಪ್ರದೇಶದಲ್ಲಿ ಅಪಾರ ತಾಮ್ರದ ನಿಕ್ಷೇಪ ಇರುವುದು ಕೂಡ ಕಂಡು ಬಂದಿದೆ.
ಇದನ್ನೂ ಓದಿ:ಹಣದ ಕಂತೆ ಪತ್ತೆಯಾಗಿದ್ದು ನಮ್ಮ ಮನೆಯಲ್ಲಲ್ಲ.. ತಮ್ಮ ವಿರುದ್ಧದ ಆರೋಪ ನಿರಾಕರಿಸಿದ ಜಸ್ಟಿಸ್ ಯಶವಂತ್ ವರ್ಮಾ!
ಈಗಾಗಲೇ ಕಿಯೋಂಜಾರ್ ಜಿಲ್ಲೆಯ ಗೋಪುರ-ಗಾಜಿಪುರ, ಮನ್ಕಂದಚೌನ್ ಸಾಲೇಕನಾ ಮತ್ತು ಡಿಮಿರಿಮುಮಂಡಾ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರುವುದು ಕಂಡು ಬಂದಿದೆ. ಒಡಿಶಾ ಈಗಾಗಲೇ ಗಣಿಗಾರಿಕೆ ಹರಾಜು ಪ್ರಕ್ರಿಯೆಯ ಸಿದ್ಧತೆಯಲ್ಲಿದೆ. ಇದು ಒಡಿಶಾದ ಗಣಿಗಾರಿಕೆ ವಿಭಾಗದಲ್ಲಿಯೇ ಅತಿದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಲಿದೆ. ಜಿಎಸ್ಐ ಮತ್ತು ಒಡಿಶಾದ ಗಣಿಗಾರಿಕಾ ಸಂಸ್ಥೆ ಸೇರಿಕೊಂಡು ಕೆಲವು ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರುವುದರ ಬಗ್ಗೆ ಹುಡುಕಾಟವನ್ನು ಶುರ ಮಾಡಿದೆ. ಜಿಎಸ್ಐ ಹೇಳುವ ಪ್ರಕಾರ ದಿಯೋಗಢದ ಜಾಲಾದಿಲ್ ಪ್ರದೇಶದಲ್ಲಿ ಅಪಾರ ಪ್ರಮಾಣವಾದ ಚಿನ್ನ ಹಾಗೂ ತಾಮ್ರದ ನಿಕ್ಷೇಪ ಇರುವ ನಿರೀಕ್ಷೆ ಇದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ