/newsfirstlive-kannada/media/post_attachments/wp-content/uploads/2025/01/no-dog-and-snake.jpg)
ನೀವು ಜಗತ್ತಿನ ಯಾವುದೇ ಮೂಲೆಯಲ್ಲಿ ಹೋಗಿ, ಯಾವುದೇ ದೇಶದ ಯಾವುದೇ ರಾಜ್ಯಕ್ಕೆ ಭೇಟಿ ಕೋಡಿ, ಅಲ್ಲಿ ಬಗೆ ಬಗೆಯ ತಳಿಯ ಶ್ವಾನಗಳು ನಿಮಗೆ ಕಾಣಲು ಸಿಗುತ್ತವೆ. ಶ್ವಾನ ಮನುಷ್ಯನ ಜೊತೆಗೆ ನಿಲ್ಲುವ ಅತ್ಯಂತ ಪ್ರಾಮಾಣಿಕ ಹಾಗೂ ಸ್ನೇಹಮಯಿ ಪ್ರಾಣಿ ಎಂದು ಗುರುತಿಸಲಾಗುತ್ತದೆ. ನೀವು ಶ್ವಾನಗಳನ್ನು ಮತ್ತು ಹಾವುಗಳು ಇಲ್ಲದ ದೇಶವನ್ನ ಹಾಗೂ ರಾಜ್ಯವನ್ನ ಕಾಣಲು ನಿಮಗೆ ಸಾಧ್ಯವೇ ಇಲ್ಲ. ಆದ್ರೆ ಭಾರತದಲ್ಲಿ ಅಂತಹದೊಂದು ಜಾಗವಿದೆ. ಇಲ್ಲಿ ಮೂಲೆ ಮೂಲೆಯಲ್ಲಿ ಹುಡುಕಿದರು ಕೂಡ ಒಂದೇ ಒಂದು ಶ್ವಾನವಾಗಲಿ ಅಥವಾ ಒಂದೇ ಒಂದು ಹಾವು ಆಗಲಿ ನಿಮಗೆ ಕಾಣ ಸಿಗುವುದಿಲ್ಲ. ಅದು ಬೇರೆ ಯಾವುದೇ ಪ್ರದೇಶವಲ್ಲ. ಭಾರತದ ಸೌಂದರ್ಯದ ಸಿರಿ ಎಂದೇ ಗುರುತಿಸಲಾಗುವ ಲಕ್ಷದ್ವೀಪ.
ಲಕ್ಷದ್ವೀಪ ಪ್ರವಾಸಿಗರಿಗೆ ಮತ್ತು ಮುತ್ತು ಹವಳಗಳಿಗೆ ಅತ್ಯಂತ ಪ್ರಸಿದ್ಧ ಪಡೆದಿರುವ ಕೇಂದ್ರಾಡಳಿತ ಪ್ರದೇಶ. ಇಲ್ಲಿಯ ಬೀಚ್ಗಳನ್ನು ನೋಡಲೆಂದೇ ಲಕ್ಷಾಂತರ ಜನರು ನಿತ್ಯ ಭೇಟಿ ನೀಡುತ್ತಾರೆ. ಅದರಲ್ಲೂ ಅರಬಿ ಸಮುದ್ರದ ನೀಲಿ ಬಣ್ಣದ ನೀರನ್ನು ಸುತ್ತ ಸುತ್ತಿಕೊಂಡು ನಿಂತಿರುವ ಈ ದ್ವೀಪದ ಸೌಂದರ್ಯದ ಮುಂದೆ ಮತ್ಯಾವುದೇ ಸಾಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಅಂತಹ ಲಕ್ಷದ್ವೀಪದಲ್ಲಿ ನಮಗೆ ನೋಡಲು ಒಂದೇ ಒಂದು ಸಾಕು ನಾಯಿ ಸಿಗುವುದಿಲ್ಲ.
ನಾಯಿ ಅಂದರೆನೇ ಪ್ರೀತಿಗೆ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಗುರುತಿಸಿಕೊಂಡಿರುವ ಮತ್ತು ಮಾನವ ಜಗತ್ತಿನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡ ಒಂದು ಪ್ರಾಣಿ. ಆದ್ರೆ ಲಕ್ಷದ್ವೀಪ ಸಂಪೂರ್ಣವಾಗಿ ಶ್ವಾನರಮುಕ್ತವಾದ ಅಂದ್ರೆ ಡಾಗ್ ಫ್ರೀ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ಯಾರೂ ಕೂಡ ಶ್ವಾನವನ್ನು ಸಾಕುವುದಿಲ್ಲ. ಅದು ಮಾತ್ರವಲ್ಲ ವಿಶ್ವ ಆರೋಗ್ಯ ಸಂಸ್ಥೆ ಈ ಪ್ರದೇಶವನ್ನು ರೇಬಿಸ್ ಫ್ರೀ ಪ್ರಾಂತ್ಯ ಎಂದು ಕೂಡ ಗುರುತಿಸಿದೆ. ಇನ್ನು ಇಲ್ಲಿಗೆ ಬರುವ ಯಾವುದೇ ಪ್ರವಾಸಿಗರಿಗೂ ಶ್ವಾನವನ್ನು ಜೊತೆಗೆ ಕರೆದುಕೊಂಡು ಬರಲು ಪರವಾನಿಗೆ ಇಲ್ಲ.
ಇದನ್ನೂ ಓದಿ:ಕುಂಭ ಮೇಳದಲ್ಲಿ ಮತ್ತೊಂದು ಹುಡುಗಿ ವೈರಲ್.. ಈ ಗಗನಸಖಿಯ ಇಂಥ ನಿರ್ಧಾರಕ್ಕೆ ಅದೊಂದು ಕೆಟ್ಟ ಘಟನೆ..!
ಅಲ್ಲಿನ ಸರ್ಕಾರ ಶ್ವಾನವನ್ನು ತೆಗೆದುಕೊಂಡು ಬರಲು ಹಾಗೂ ಬೀದಿ ನಾಯಿಗಳನ್ನು ಅಡ್ಡಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಆದ್ರೆ ಈ ದ್ವೀಪದಲ್ಲಿ ಸಾಕಷ್ಟು ಬೆಕ್ಕುಗಳು ಹಾಗೂ ಇಲಿಗಳು ಇವೆ. ಇವು ನಮಗೆ ಪ್ರತಿ ಬೀದಿಯಲ್ಲಿಯೂ ಹಾಗೂ ರೆಸಾರ್ಟ್ಗಳಲ್ಲಿಯೂ ನೋಡಲು ಸರಳವಾಗಿ ಸಿಗುತ್ತವೆ.
ಲಕ್ಷದ್ವೀಪದಲ್ಲಿ ಕೇವಲ ಶ್ವಾನಗಳಲ್ಲ, ನಮಗೆ ಹಾವುಗಳು ಕೂಡ ನೋಡಲು ಸಿಗುವುದಿಲ್ಲ. ಈ ಪ್ರದೇಶವನ್ನು ಸ್ನೇಕ್ ಫ್ರೀ ರೀಜನ್ ಎಂದು ಗುರುತಿಸಲಾಗುತ್ತದೆ. ಇಡೀ ಭಾರತದಲ್ಲಿ ಹಾವುಗಳೇ ಕಾಣದ ಏಕೈಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಅಂದ್ರೆ ಲಕ್ಷದ್ವೀಪ ಒಂದೇ.
ಇದನ್ನೂ ಓದಿ:ಸೋನಿಯಾ ವಿರುದ್ಧ ರಾಷ್ಟ್ರಪತಿಗೆ ಅವಮಾನ ಮಾಡಿದ ಆರೋಪ.. ಟೀಕಿಸುವ ಭರದಲ್ಲಿ ಹೇಳಿದ್ದೇನು?
ಕೇರಳ, ಲಕ್ಷದ್ವೀಪದ ನೆರೆಯ ರಾಜ್ಯ. ಇಲ್ಲಿ ನಮಗೆ ಅತಿಹೆಚ್ಚು ಪ್ರಬೇಧದ ಹಾವುಗಳು ನೋಡಲು ಸಿಗುತ್ತವೆ. ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಕೇರಳದ ಕಾಡಿನಲ್ಲಿ ನಾವು ನೋಡಬಹುದು. ಆದ್ರೆ ಲಕ್ಷದ್ವೀಪದಲ್ಲಿ ನಮಗೆ ಸಾಕಷ್ಟು ಬಗೆಯ ಮೀನುಗಳು ನೋಡಲು ಸಿಗುತ್ತವೆ. ಸುಮಾರು 600 ಬಗೆಯ ಮೀನುಗಳು ಈ ಸಾಗರದಲ್ಲಿ ನಮಗೆ ಕಾಣಲು ಸಿಗುತ್ತದೆ. ಅದು ಮಾತ್ರವಲ್ಲ ವಿವಿಧ ಬಗೆಯ ಚಿಟ್ಟೆಗಳು ಕೂಡ ನಾವು ಇಲ್ಲಿ ಕಾಣಬಹುದು. ಆದ್ರೆ ನಾಯಿ ಮತ್ತು ಹಾವುಗಳು ಮಾತ್ರ ಇಲ್ಲಿ ಕಾಣುವುದಿಲ್ಲ ಅದು ಈ ಕೇಂದ್ರಾಡಳಿತ ಪ್ರದೇಶದ ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ