/newsfirstlive-kannada/media/post_attachments/wp-content/uploads/2025/03/ONLY-ONE-RAILWAY-STATION-1.jpg)
ಸದ್ಯ ಭಾರತೀಯ ರೈಲ್ವೆ ದೇಶದ ಮೂಲೆ ಮೂಲೆಯನ್ನು ತಲುಪಬೇಕು ಎಂಬ ಉದ್ದೇಶದೊಂದಿಗೆ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ರೈಲ್ವೆ ಇಲಾಖೆ ಈ ಹಿಂದಿನಗಿಂತಲೂ ಆಧುನಿಕತೆಯನ್ನು ಅಳವಡಿಸಿಕೊಂಡು. ಹೊಸ ಹೊಸ ರೈಲು ಮಾರ್ಗಗಳಿಗೆ ಚಾಲನೆ ನೀಡುತ್ತಾ. ವಂದೇ ಭಾರತ್​ದಂತಹ ರೈಲುಗಳ ಸೇವೆಯನ್ನು ಮತ್ತಷ್ಟು ವಿಸ್ತರಿಸವು ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇತ್ತೀಚೆಗೆ ರೈಲು ಸಂಪರ್ಕವಿಲ್ಲದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೆಲಸವಾಗುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿಯೂ ಕೂಡ ಬೃಹತ್ ಸೇತುವೆಗಳನ್ನು ನಿರ್ಮಿಸಿ ರೈಲು ಓಡುವಂತೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಒಂದು ನತದೃಷ್ಟ ರಾಜ್ಯ ಮಾತ್ರ ಇಂದಿಗೂ ಕೂಡ ಒಂದೇ ಒಂದು ರೈಲ್ವೆ ಸ್ಟೇಷನ್ ಇಟ್ಟುಕೊಂಡು ಕೂತಿದೆ. ಈ ಇಡೀ ರಾಜ್ಯಕ್ಕೆ ಇರೋದು ಒಂದೇ ಒಂದು ರೈಲ್ವೆ ಸ್ಟೇಷನ್ ಮಾತ್ರ. ಆ ರಾಜ್ಯದ ಹೆಸರು ಮಿಜೋರಾಂ.
/newsfirstlive-kannada/media/post_attachments/wp-content/uploads/2025/03/ONLY-ONE-RAILWAY-STATION.jpg)
ಈಶಾನ್ಯ ಭಾಗದಲ್ಲಿರುವ ಮಿಜೋರಾಂ ರಾಜ್ಯ ಕೇವಲ ಒಂದೇ ಒಂದು ರೈಲ್ವೆ ಸ್ಟೇಷನ್​ನ್ನು ಹೊಂದಿದೆ. ಅದರ ಹೆಸರು ಬೈರಾಬಿ ಅಂತ. 1899ರಲ್ಲಿ ಸ್ಥಾಪನೆಗೊಂಡಿದೆ ಈ ರೈಲ್ವೆ ನಿಲ್ದಾಣ. ಇದಾದ ಬಳಿಕ ಈ ರಾಜ್ಯಕ್ಕೆ ಇಲ್ಲಿಯವರೆಗೂ ಕೂಡ ಬೇರೆಯ ರೈಲ್ವೆ ನಿಲ್ದಾಣವನ್ನು ನೋಡಲಾಗಿಲ್ಲ.ಕೊಲಸಾಬಿ ಜಿಲ್ಲೆಯಲ್ಲಿರುವ ಈ ರೈಲ್ವೆ ನಿಲ್ದಾಣ ಮೂರ ಪ್ಲಾಟ್​​ಫಾರ್ಮ್​ಗಳನ್ನು ಹೊಂದಿದೆ. ದೇಶದ ಎಲ್ಲಾ ರಾಜ್ಯಗಳ ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳು ರೈಲ್ವೆ ನಿಲ್ದಾಣವನ್ನು ಹೊಂದಿವೆ. ಆದರೆ ಮಿಜೋರಾಂ ಮಾತ್ರ ಒಂದೇ ಒಂದು ರೈಲ್ವೆ ನಿಲ್ದಾಣ ಹೊಂದಿದೆ. ಇದಕ್ಕೆ ಕಾರಣವೇನು?
ಇದನ್ನೂ ಓದಿ:ಭಾರತಕ್ಕೆ ಒಂದು ದಿನಕ್ಕಾಗಿ ಮಾತ್ರ ರಾಜಧಾನಿಯಾಗಿತ್ತು ಈ ನಗರ! ಯಾವುದು ಆ ಸಿಟಿ?
/newsfirstlive-kannada/media/post_attachments/wp-content/uploads/2025/03/ONLY-ONE-RAILWAY-STATION-2.jpg)
ಈಗಾಗಲೇ ಹೇಳಿದಂತೆ ಮಿಜೋರಾಂ ಈಶಾನ್ಯ ಭಾಗದಲ್ಲಿರುವ ರಾಜ್ಯ. ಉಳಿದ ರಾಜ್ಯಗಳಿಂದ ಹೆಚ್ಚು ಬೆಟ್ಟಗುಡ್ಡಗಳು ಹಾಗೂ ಪರ್ವತಗಳನ್ನು ಹೊಂದಿದೆ. ಹೀಗಾಗಿ ಇಲ್ಲಿ ರೈಲ್ವೆ ಟ್ರ್ಯಾಕ್​ಗಳನ್ನು ಜೋಡಿಸುವುದ ಅಷ್ಟು ಸುಲಭದ ಕೆಲವಲ್ಲ. ಪರ್ವತದ ಪ್ರದೇಶಗಳೇ ರೈಲ್ವೆ ಕನ್​ಸ್ಟ್ರಕ್ಷನ್​ಗೆ ಅತಿದೊಡ್ಡ ಸವಾಲಾಗಿ ನಿಂತಿದೆ. ಹೀಗಾಗಿ ಮಿಜೋರಾಂ ಒಂದೇ ರೈಲು ನಿಲ್ದಾಣ ಹೊಂದಿದೆ. ಪ್ರದೇಶದಲ್ಲಿ ಸರಳವಾಗಿ ಹಳಿಗಳನ್ನು ಜೋಡಿಸುವ ಸಾಧ್ಯತೆ ಇದ್ದ ಕಾರಣ ಒಂದು ರೈಲ್ವೆ ನಿಲ್ದಾಣವನ್ನು ರಾಜ್ಯಕ್ಕೆ ನೀಡಲಾಗಿದೆ
ಸದ್ಯ ಇವೆಲ್ಲ ಸವಾಲುಗಳ ಆಚೆಯೂ ಕೂಡ ಮಿಜೋರಾಂನಲ್ಲಿ ರೈಲ್ವೆ ಸಂಪರ್ಕದ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ಯೋಜನೆಗಳನ್ನು ಸೃಷ್ಟಿಸುತ್ತಿದೆ. ಮಿಜೋರಾಂನಲ್ಲಿ ರೈಲು ಸಂಪರ್ಕ ಇನ್ನಷ್ಟು ಹೆಚ್ಚಿಸಲು ಹಾಗೂ ಪ್ರಮುಖವಾಗಿ ಈ ರಾಜ್ಯದ ರಾಜಧಾನಿ ಐಜವ್ಲ್​​ಗೆ ರೈಲ್ವೆ ಸಂಪರ್ಕ ಒದಗಿಸಬೇಕೆಂಬ ಸಂಕಲ್ಪದಲ್ಲಿದೆ ರೈಲ್ವೆ ಇಲಾಖೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us