/newsfirstlive-kannada/media/post_attachments/wp-content/uploads/2025/03/Virat-Kohli-On-Rcb-1.jpg)
ಕೊಹ್ಲಿ.. ಕೊಹ್ಲಿ.. ಕೊಹ್ಲಿ.. ಪ್ರತೀ ಸೀಸನ್ನಲ್ಲೂ ಕೊಹ್ಲಿಯದ್ದೇ ನಾಮಜಪ. ಯಾಕಂದ್ರೆ ಕೊಹ್ಲಿ ಆರ್ಸಿಬಿಯ ಸಂಕಷ್ಟಹರ. ದಿ ಮ್ಯಾಚ್ ವಿನ್ನರ್. ಸಿಂಗಲ್ ಶೇರ್.. ಆದ್ರೆ ಇದೇ ಕೊಹ್ಲಿಗೆ ಈ ವರ್ಷ ಹೆಚ್ಚು ಟೆನ್ಶನ್ ಇರಲ್ಲ. ಫುಲ್ ರಿಲ್ಯಾಕ್ಸ್ ಆಗಿ, ಫಿಯರ್ ಲೆಸ್ ಆಡಬಹುದು. 2016ರ ಸೀಸನ್ ಮರುಕಳಿಸಲೂಬಹುದು.
17 ವರ್ಷದಿಂದ ಒಂದು ಲೆಕ್ಕ. ಈ ವರ್ಷ ಒಂದು ಲೆಕ್ಕ. ಈ ಸಲ ಕಪ್ ಎತ್ಕೊಂಡು ಹೋಗ್ತಾ ಇರ್ತೀವಿ.. ಲಕ್ಕಿ ಇಯರ್, ಲಕ್ಕಿ ನಂಬರ್.. ಕಪ್ ಮಿಸ್ಸೇ ಇಲ್ಲ ಅಂತಿದ್ದಾರೆ. ಇದಕ್ಕೆಲ್ಲ ಕಾರಣ ಆರ್ಸಿಬಿ ಕಟ್ಟಿರುವ ಬಲಾಢ್ಯ ತಂಡ. ಹಿಂದೆ ಬ್ಯಾಟಿಂಗ್ನಲ್ಲಿ ಕೊಹ್ಲಿಯನ್ನೇ ನಂಬಿಕೊಳ್ಳಬೇಕಿದ್ದ ಆರ್ಸಿಬಿ, ಈ ಸಲ ಅವರನ್ನೇ ನೆಚ್ಚಿಕೊಳ್ಳಬೇಕೆಂದಿನಿಲ್ಲ. ಆರ್ಸಿಬಿ ಪಡೆಯಲ್ಲಿ ರಣಬೇಟೆಗಾರರು ಇದ್ದಾರೆ.
ಇದನ್ನೂ ಓದಿ: ಕಪ್ ಗೆಲ್ಲಲು ಮೈದಾನದಲ್ಲಿ ಸಂಕಲ್ಪ.. ಐಪಿಎಲ್ ಸಿದ್ಧತೆ ಹೇಗೆಲ್ಲ ಸಾಗ್ತಿದೆ..?
ಕೊಹ್ಲಿಗೆ ಇಲ್ಲ ಟೆನ್ಶನ್
ಕೊಹ್ಲಿ, ಆರ್ಸಿಬಿಯ ಮ್ಯಾಚ್ ವಿನ್ನರ್. ಆರ್ಸಿಬಿಯ ಸಂಕಷ್ಟಹರ. ಪ್ರತಿ ಸೀಸನ್ನಲ್ಲಿ ಯಾರ್ ಆಡ್ತಾರೋ ಇಲ್ವೋ ಕೊಹ್ಲಿ ಮಾತ್ರ ಆಡ್ತಿದ್ದರು. ತಂಡದ ಗೆಲುವಿಗಾಗಿ ಹೋರಾಟ ನಡೆಸ್ತಿದ್ದರು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 18 ವರ್ಷಗಳಿಂದ ಆರ್ಸಿಬಿಯ ಬ್ಯಾಟಿಂಗ್ ಬೆನ್ನಲುಬಾಗಿ ಸ್ಮರಣೀಯ ಗೆಲುವುಗಳನ್ನು ನೀಡಿದ್ದಾರೆ. ಅದ್ರೀಗ ಇದೇ ಕೊಹ್ಲಿಗೆ ರನ್ರೇಟ್ ಹೆಚ್ಚಿಸಬೇಕು. ಗೆಲುವಿನ ದಡ ಸೇರಿಸಬೇಕು ಅನ್ನೋ ಟೆನ್ಶನ್ ಇಲ್ವೇ ಇಲ್ಲ. ಆರ್ಸಿಬಿಯಲ್ಲೀಗ ರಣಬೇಟೆಗಾರರ ಪಡೆಯಿದೆ. ಆ ಪಡೆಯೇ ಅನ್ಬಾಕ್ಸ್ ಈವೆಂಟ್ನಲ್ಲಿ ಸಿಕ್ಸರ್ಗಳ ಸುರಿಮಳೆ ಸುರಿಸ್ತಿದ್ದ ಫಿಲ್ ಸಾಲ್ಟ್, ರೊಮಾರಿಯೋ ಶೆಫಾರ್ಡ್, ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್.
ಬಿಗ್ ಹಿಟ್ಟರ್ಸ್ ಅಲ್ಲ..
ಹಿಂದೆ ಆರ್ಸಿಬಿಯ ಬ್ಯಾಟಿಂಗ್ ಬಲವೇನು ಅಂದ್ರೆ ಕೊಹ್ಲಿ ಹಾಗೂ ಮತ್ತೊಂದು ಎನ್ನಲಾಗ್ತಿತ್ತು. ಈ ಸಲ ಕೊಹ್ಲಿ ಆ್ಯಂಡ್ ಮತ್ತೊಂದು ಅನ್ನೋ ಚಾನ್ಸೇ ಇಲ್ಲ. ಯಾಕಂದ್ರೆ ಒಂದಕ್ಕಿಂತ ಮತ್ತೊಂದು.. ಮಗದೊಂದು ಹೇಳಬಲ್ಲ ದೈತ್ಯ ಬ್ಯಾಟರ್ಗಳು ಇದ್ದಾರೆ. ಓಪನಿಂಗ್ನಿಂದ ಹಿಡಿದು ಲೋವರ್ ಆರ್ಡರ್ ತನಕ ಸಿಕ್ಸರ್ಗಳ ಸುನಾಮಿ ಸೃಷ್ಟಿಸಬಲ್ಲ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್, ರೊಮಾರಿಯೋ ಶೆಫಾರ್ಡ್ರಂಥಹ ಡೆಡ್ಲಿ ಬ್ಯಾಟರ್ಗಳಿದ್ದಾರೆ. ಸುಮಾರು 160ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸುವ ಇವರಿಗೆ ಸಿಕ್ರೆ, ಎದುರಾಳಿ ಮಟಾಶ್. ಹೀಗಾಗಿ ಈ ಹಿಟ್ಟರ್ಗಳು, ಆರ್ಸಿಬಿ ಪಾಲಿನ ಹಂಟರ್ಸ್ ಆಗೋದು ಗ್ಯಾರಂಟಿ.
ಇದನ್ನೂ ಓದಿ: ಆರ್ಸಿಬಿಗೆ ಒಂದೇ ಒಂದು ವೀಕ್ನೆಸ್.. ವಿದೇಶಿ ಆಟಗಾರರು ವಿಲನ್ ಆಗಿಬಿಡ್ತಾರಾ..?
ಕೊಹ್ಲಿ ನೆನಪಿಸ್ತಾರಾ 2016ರ ಫಿಯರ್ಲೆಸ್ ಆಟ?
ಆರ್ಸಿಬಿ ಇಷ್ಟು ದಿನ ಕೊಹ್ಲಿ ಆಟದ ಮೇಲೆಯೇ ಡಿಪೆಂಡ್ ಆಗಬೇಕಿತ್ತು. ಕೊಹ್ಲಿ ಔಟಾದ್ರೆ ಯಾರ್ ಮ್ಯಾಚ್ ವಿನ್ನಿಂಗ್ ನಾಕ್ ಆಡ್ತಾರೆ? ಯಾರು ತಂಡವನ್ನು ಗೆಲುವಿನ ದಡ ಸೇರಿಸ್ತಾರೆ ಅನ್ನೋ ಭಯ ಸಹಜವಾಗೇ ಕಾಡ್ತಿತ್ತು. ಈ ಭಯ ವಿರಾಟ್ಗಿಲ್ಲ. ಯಾಕಂದ್ರೆ ಆರ್ಸಿಬಿಯಲ್ಲಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್, ರೊಮಾರಿಯೋ ಶೆಫಾರ್ಡ್, ಮನೋಜ್ ಬಾಂಡಗೆಯವರಂಥ ರಣಬೇಟೆಗಾರರ ಪಡೆಯಿದೆ. ಹೀಗಾಗಿ ವಿರಾಟ್ ಫಿಯರ್ ಲೆಸ್ ಬ್ಯಾಟಿಂಗ್ ಆಡಲು ನೆರವಾಗುತ್ತೆ. ಹೀಗಾಗಿ ವಿರಾಟ್, 2016ರ ಐಪಿಎಲ್ನ ಮತ್ತೆ ನೆನಪಿಸಿದರೂ ಅಚ್ಚರಿ ಇಲ್ಲ.
ಹಿಂದೆ ಕೊಹ್ಲಿ.. ಕೊಹ್ಲಿ ಬಿಟ್ರೆ ಯಾರಾಡಲ್ಲ ಎಂಬ ಮಾತಿತ್ತು. ಮಿಡಲ್ ಆರ್ಡರ್, ಲೋವರ್ ಆರ್ಡರ್ ವೀಕ್ ಎನ್ನಲಾಗ್ತಿತ್ತು. ಆದ್ರೀಗ ಇದಕ್ಕೆ ಸೂಕ್ತ ಹಂಟರ್ಸ್ ಸಿಕ್ಕಿದ್ದಾರೆ.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿ ಸ್ನೇಹಿತ ಐಪಿಎಲ್ಗೆ ಅಂಪೈರ್ ಆಗಿ ಆಯ್ಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್