/newsfirstlive-kannada/media/post_attachments/wp-content/uploads/2024/11/Robin_Uthappa.jpg)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ಅವರು ವಿವಾದಾತ್ಮಕ ತೀರ್ಪಿಗೆ ಔಟ್ ಆಗಿರುವುದು ಭಾರೀ ಚರ್ಚೆ ಹುಟ್ಟು ಹಾಕಿದೆ. ಡಿಆರ್ಎಸ್ನಲ್ಲಿ ತೆಗೆದುಕೊಂಡಿರುವ ನಿರ್ಧಾರ ಇದೇನಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟ್ ಪ್ಲೇಯರ್ ರಾಬಿನ್ ಉತ್ತಪ್ಪ ‘ಇದು ಜೋಕ್ ಅಂದ್ರೆ’ ಅಂತ ಹೇಳಿದ್ದಾರೆ.
ಆಸ್ಟ್ರೇಲಿಯಾದ ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕೆ.ಎಲ್ ರಾಹುಲ್ ಓಪನಿಂಗ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಒಳ್ಳೆಯ ಆರಂಭ ಪಡೆಯದಿದ್ದರು ತಂಡಕ್ಕೆ ಆಸರೆಯಾಗಿ ರಾಹುಲ್ ಬ್ಯಾಟ್ ಬೀಸುತ್ತಿದ್ದರು. ಈ ವೇಳೆ ತಂಡದ 23ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ರಾಹುಲ್ ಬ್ಯಾಟಿಂಗ್ ಮಾಡುವಾಗ ಬಾಲ್ ಟಚ್ ಆಗದೇ ಕೀಪರ್ ಕೈ ಸೇರಿದೆ. ಈ ವೇಳೆ ಅಪಿಲ್ ಮಾಡಿದ ಆಸಿಸ್ ಪ್ಲೇಯರ್ಸ್ ಡಿಆರ್ಎಸ್ ಎಗೆದುಕೊಂಡಿದ್ದಾರೆ.
ಇದನ್ನು ಡಿಆರ್ಎಸ್ ನಿಯಮದಂತೆ ವಿಡಿಯೋ ಪರಿಶೀಲನೆ ಮಾಡಿದ 3ನೇ ಅಂಪೈರ್ ಔಟ್ ಎಂದು ವಿವಾದಾತ್ಮಕವಾಗಿ ತೀರ್ಪು ನೀಡಿದ್ದಾರೆ. ಆದರೆ ವಿಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದರೆ ಚೆಂಡು ಬ್ಯಾಟ್ಗೆ ಟಚ್ ಆಗಿಲ್ಲ ಎಂಬುದು ಗೊತ್ತಾಗುತ್ತದೆ. ಸದ್ಯ ಈ ಸಂಬಂಧ ಭಾರತದ ಮಾಜಿ ಕ್ರಿಕೆಟ್ ಪ್ಲೇಯರ್ ರಾಬಿನ್ ಉತ್ತಪ್ಪ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಎಲ್ಲಾ ಮೂಲಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ 3ನೇ ಅಂಪೈರ್ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ!. ಇದೊಂದು ಅತ್ಯಂತ ಕೆಟ್ಟ ನಿರ್ಧಾರ ಛೇ.. ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
How a third umpire makes a decision without accessing all angles!! Poor!! Just Piss poor!! #BGT2025
— Robbie Uthappa (@robbieuthappa)
How a third umpire makes a decision without accessing all angles!! Poor!! Just Piss poor!! #BGT2025
— Robbie Uthappa (@robbieuthappa) November 22, 2024
">November 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ